ವಿಷಯಕ್ಕೆ ಹೋಗು

ಪುಟ:ದೀಕ್ಷೆ.pdf/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

390 ಕನಸು

     “ಆ ಜವಾಬ್ದಾರಿ ನನಗಿರಲಿ ಸಾರ್. ಮೂರು ನಾಲ್ಕು ಅಂಗಡಿಯವರು
 ನನಗೆ ಗೊತ್ತು. ತಗೊಂಡದ್ದೀನಿ.”
     “ನಿಮ್ಮ ಅಂಗಡೀದೂ ಬೇಕು!”
     ಚಿಕ್ಕಪೇಟೆಯಲ್ಲಿ ಮಹದೇವಯ್ಯನ ತಂದೆಯ ದೊಡ್ಡ ಜವಳಿ ಅಂಗಡಿ ಇತ್ತು.
     “ಆಗಲಿ ಸಾರ್, ಅದಕ್ಕೇನು?”
     ಮುರಲೀಧರನ ಕೈಗೆ ನಿಲುಕದ ಲೋಕ ಅದು. ಮಹದೇವಯ್ಯನ ಧೈರ್ಯ,
 ಕಂಡು ಆತನಿಗೆ ಅಭಿಮಾನವೆನಿಸಿತು. ಆತನೆಲ್ಲಾದರೂ ಆ ಕೆಲಸಕ್ಕೆ ಇಳಿದಿದ್ದರೆ ಒಂದೆ
 ರಡು ಜಾಹೀರಾತುಗಳಾದರೂ ಸಿಗುತ್ತಿದ್ದುವೋ ಇಲ್ಲವೋ...
     ಶ್ರೀಕಂಠಯ್ಯ ತಮ್ಮ ಕೈ ಸೇರಿದ್ದ ಎಂಟು ಹತ್ತು ಲೇಖನಗಳನ್ನು ಮುರಲೀಧರ
 ನಿಗೆ ಕೊಟ್ಟು ಹೇಳಿದರು.
     “ಓದಿ ನೋಡು, ತಪ್ಪುಗಳಿದ್ದರೆ ತಿದ್ದು. ಹ್ಯಾಗೆ ಮಾಡ್ತೀಂತ ನೋಡೋಣ.”
     “ಆಗಲಿ ಸಾರ್, ಓದಿ ನೋಡ್ತೀನಿ,” ಎಂದ ಮುರಲೀಧರ, ಅದು ತನ್ನ
 ಸಾಮರ್ಥ್ಯಕ್ಕೆ ಮೀರಿದ ಕೆಲಸ ಎಂದು ಆತನಿಗೆ ತೋರಲಿಲ್ಲ.
     ಶ್ರೀಕಂಠಯ್ಯ ಕೇಳಿದರು:
    “ನೀನೇನು ಬರೀತೀಯಾ? ಪ್ರಬಂಧವೋ? ಕಥೆಯೋ?”
    “ಇನ್ನೂ ಯೋಚಿಸಿಲ್ಲ, ಸಾರ್.”
    “ಬರಿ, ಚೆನ್ನಾಗಿ ಬರಲಿ, ನೋಡಿದವರು ತಲೆದೂಗೋ ಹಾಗಿದ್ದೇಕು ಈ
 ಸಲದ ಮ್ಯಾಗಜೀನು.”
    “ಆಗಲಿ ಸಾರ್."
     ಬೆಳಗ್ಗೆಯೂ ಸಂಜೆಯ ಪಾಠ ಹೇಳುವುದರ ಜತೆಗೆ ಲೇಖನಗಳನ್ನು ಓದಿ
 ನೋಡುವ ಕೆಲಸ ಮುರಲೀಧರನಿಗೆ, ಹೆಚ್ಚಿನ ಬರಹಗಳು ತೀರಾ ಕೆಳಮಟ್ಟದಲ್ಲಿ
 ದ್ದುವು. ಇವನ್ನೆಲ್ಲ ಅಚ್ಚು ಹಾಕಿದರೆ ಓದಿದವರು ತಲೆದೂಗಿದಂತೆಯೇ ಎಂದು
 ಕೊಂಡ ಮುರಲೀಧರ. ಲಕ್ಷ್ಮೀಕಾಂತ ಬರೆದ ಕವಿತೆಗಳಂತೂ ಅಸಹನೀಯ
 ವಾಗಿದ್ದುವು.
     ಲಕ್ಷ್ಮೀಕಾಂತ ಮುರಲೀಧರನನ್ನು ಕೇಳಿದ:
     “ಪ್ರಧಾನ ಸಂಪಾದಕರು ನನ್ನ ಕವಿತೆಗಳನ್ನು ನಿಮ್ಮ ಕೈಗೆ ಕೊಟ್ಟಿದಾರಂತೆ
 ಹೌದೆ?”
     ಆಪತ್ತು ಬಂತೆಂಬುದು ಸ್ಪಷ್ಟವಾಯಿತು ಮುರಲೀಧರನಿಗೆ. ಆದರೂ ಆತ ಎದೆ
 ಗುಂದಲಿಲ್ಲ. ಮಾತನಾಡುವುದಕ್ಕೆ ಪೀಠಿಕೆಯಾಗಿ ಮುಗುಳು ನಕ್ಕ.
      "ಹೌದು"
      “ಪ್ರಿಂಟಿಂಗ್ ಯಾವಾಗ ಶುರುವಾಗುತ್ತೆ?”
      “ಗೊತ್ತಿಲ್ಲ.”