ಈ ಪುಟವನ್ನು ಪರಿಶೀಲಿಸಲಾಗಿದೆ
ದೀಕ್ಷೆ 391
“ಬೇರೆ ಯಾರ ಯಾರ ಲೇಖನಗಳನ್ನು ಹಾಕ್ತಾರಂತೆ?”
“ಇನ್ನೂ ತೀರ್ಮಾನಿಸಿಲ್ಲ.”
ಅಂತಹ ಪ್ರಶ್ನೆಗಳೆಲ್ಲ ಬಂದುವೇ ಹೊರತು, ಸ್ವಂತದ ಕೃತಿಗಳ ವಿಷಯವಾಗಿ
ಏನನ್ನೂ ಲಕ್ಷ್ಮೀಕಾಂತ ಕೇಳಲಿಲ್ಲ. ಮುರಲೀಧರ ತಾನಾಗಿಯೇ ಮೆಚ್ಚುಗೆ ಸೂಚಿಸ ಬಹುದೆಂದು ನಿರೀಕ್ಷಿಸಿದ್ದ ಆತ. ಅದು ಬರದೇ ಇದ್ದಾಗ ಅನಿವಾರ್ಯವಾಗಿ ಆತನೇ ಅದರ ಪ್ರಸ್ತಾಪ ಮಾಡಬೇಕಾಯಿತು.
“ನನ್ನ ಕವಿತೆಗಳ ವಿಷಯ ಶ್ರೀಕಂಠಯ್ಯನವರು ಏನೆಂದರು?”
“ಅವರು ಓದಿಲ್ಲಾಂತ ಕಾಣುತ್ತೆ.”
ಲಕ್ಷ್ಮೀಕಾಂತನ ಮುಖ ತುಸು ವಿವರ್ಣವಾಯಿತು.
“ನೀವು ಓದಿದಿರಾ?”
"ಹುಂ"
ಮುರಲೀಧರನ ಎದೆ ಡವಡವನೆ ಹೊಡೆದುಕೊಂಡಿತು. ಮುಂದಿನ ಪ್ರಶ್ನೆ
ಯಾವುದೆಂಬುದನ್ನು ನಿರೀಕ್ಷಿಸುವುದು ಕಷ್ಟವಾಗಿರಲಿಲ್ಲ. ಅದಕ್ಕೆ ಕೊಡಬೇಕಾದ ಉತ್ತರ__
“ಅವಸರದಲ್ಲಿ ಬರೆದೆ. ಹ್ಯಾಗಿವೆ?” [ಅಲ್ಲಿ ಇಲ್ಲಿ ಚೆನ್ನಾಗಿಲ್ಲದೆ ಹೋದರೆ, ಅವಸರದಲ್ಲಿ ಬರೆದುದೇ ಹಾಗಾಗಲು
ಕಾರಣ.]
“ಒಂದೆರಡು ಪರವಾಗಿಲ್ಲ; ತಕ್ಕಮಟ್ಟಿಗಿವೆ.”
___ಅದು ಕೂಡ ಮನಸ್ಸಾಕ್ಷಿಗೆ ವಿರುದ್ಧವಾಗಿಯೆ ಆತ ಹೇಳಿದ ಮಾತು,
ಲಕ್ಷ್ಮೀಕಾಂತನ ಮುಖ ಅವಮಾನ ಸಹಿಸಲಾಗದೆ ಕೆಂಪೇರಿತು.
“ಅದರಲ್ಲಿರೋ ದೋಷ ಏನು ಹೇಳೀರಾ?”
ತೊಡೆ ತಟ್ಟಿ ನೀಡಿದ ಆಹ್ವಾನದಂತಿತ್ತು ಆ ಧ್ವನಿ. ಮುರಲೀಧರನನ್ನು ಕೆಣಕಿ
ದಂತಾಗಿ ಆತನೆಂದ:
“ಮುಖ್ಯತಃ ಅವು ಕವಿತೆಗಳಲ್ಲ.” “ಇನ್ನೇನು ಮತ್ತೆ? ಭಾಮಿನಿ ಷಟ್ನದಿಯಲ್ಲಿ ಬರೆದು ಕೊಡೋಕೋ “ಹಾಗಂದ್ರೆ? ಶ್ರೀಯವರ ಇಂಗ್ಲಿಷ್ ಗೀತಗಳು ನೀವು ಓದಿದೀರಾ? ಬೇಂದ್ರೆ_
ಪುಟ್ಟಪ್ಪನವರ ಕವಿತೆಗಳನ್ನು__”
“ಕವಿತೆ ಬರೀಬೇಕಾದರೆ ಅವನ್ನೆಲ್ಲ ಓದಲೇಬೇಕೂಂತ ನಿಯಮ ಇದೆಯೋ?” “ಹಾಗೇನಿಲ್ಲ. ಆದರೂ____" “ನೀವು ಸ್ವತಃ ಕವಿತೆ ಬರೆದಿದೀರೇನು?” “ಇಲ್ಲವಪ್ಪ!” “ಹಾಗಾದರೆ ನನ್ನ ಕೃತಿಯ ವಿಷಯ ಮಾತನಾಡೋದಕ್ಕೆ ನಿಮಗೆ ಅಧಿಕಾರವಿಲ್ಲ.”