ಈ ಪುಟವನ್ನು ಪರಿಶೀಲಿಸಲಾಗಿದೆ
ದೀಕ್ಷೆ 393
ಪಂದ್ಯಾಟದ ಪಟುಗಳ ಬ್ಲಾಕುಗಳು ಬಂದುವು. ವರದಿಗಳು
ಸಿದ್ಧವಾದುವು.ಮುದ್ರಣವೂ ಆರಂಭವಾಯಿತು.
ಆದರೆ ಮುರಲೀಧರನಿನ್ನೂ ತಾನೇನು ಬರೆಯಬೇಕೆಂಬುದನ್ನು
ನಿರ್ಧರಿಸಿರಲಿಲ್ಲ.
ಬರೆದರಾದೀತೆಂದು ಎಂದೋ ಭಾವಿಸಿದ್ದ ಮೂರು ನಾಲ್ಕು ಕಥಾ
ವಸ್ತುಗಳನ್ನು ಆತ ಮನಸ್ಸಿನಲ್ಲಿ ಮೆಲುಕು ಹಾಕಿದ.ಆದರೂ ಒಂದೂ ಸ್ಪಷ್ಟವಾದ ರೂಪು ತಳೆಯಲಿಲ್ಲ....
ಬಹಳ ದಿನಗಳಿಂದ ಬರೆಯದೆ ಇದ್ದ ದಿನಚರಿ ಪುಸ್ತಕವನ್ನು ಆ ರಾತ್ರೆ ಮುರಲೀ ಧರ ಕೈಗೆತ್ತಿಕೊಂಡ. ಲಕ್ಷ್ಮೀಕಾಂತನೊಡನೆ ಆದ ಸಂಭಾಷಣೆಯನ್ನು ಬರೆದಿಡುವ ಮನಸ್ಸಾಯಿತು......ಬರೆದು ಮುಗಿಸಿದ ಆ ಪುಟವನ್ನು ಮತ್ತೊಮ್ಮೆ ಓದಿನೋಡಿ ಮೇಲ್ಗಡೆ, “ನಾನು ಕಂಡ ಕವಿ' ಎಂಬ ಶಿರೋನಾಮೆಯನ್ನು ಆತ ಅದಕ್ಕಿರಿಸಿದ. ಹಿಂದಿನ ಹಾಳೆಗಳನ್ನು ಮಗುಚುವ ಮನಸ್ಸಾಯಿತು... ಜಲಪ್ರಳಯವಾಯಿತೇನೋ ಎಂದು ಭ್ರಮೆ ಹುಟ್ಟಿಸುವಂತೆ ಮಳೆ ಸುರಿದಿದ್ದ ಆ ಒಂದು ರಾತ್ರೆ.... ಓದುತ್ತಿದ್ದ ಮುರಲೀಧರನಿಗೆ ಹಾಗೆಯೇ ನಿದ್ದೆ ಬಂತು.
೮
ಮಾರನೆಯ ದಿನ ಭಾನುವಾರ, ರಜಾ, ಅಯ್ಯರ್ ಭೋಜನ ಶಾಲೆಯ ಗಿರಾಕಿಗಳು ಆ ದಿವಸ ಏಳುತ್ತಿದ್ದುದು ಸ್ವಲ್ಪ ತಡವಾಗಿ, ಬೆಳಗ್ಗೆ ಬೇಗನೆ ಹೋದರೆ ಸ್ನಾನಕ್ಕೆ ಅನುಕೂಲವಾಗಿರುತ್ತಿತ್ತು.
ಆ ಕಾರಣದಿಂದ ಮುರಲೀಧರ, ಎದ್ದೊಡನೆಯೆ ತಡಮಾಡದೆ ಹೊರ ಬಿದ್ದ.ಆತನ ಹಾಗೆಯೇ ಬೇಗನೆ ಬಂದಿದ್ದ ಒಬ್ಬಿಬ್ಬರಷ್ಟೇ ಸ್ನಾನದ ಮನೆಯಲ್ಲಿದ್ದರು.
ಬಿಸಿನೀರು ಸುರಿಸಿಕೊಂಡ ಮೈಯಿಂದ ಉಗಿ ಎದ್ದಿತು. ಸ್ನಾನದ ಮನೆಯ ಹೊಗೆಯನ್ನು ಅದು ಇದಿರಿಸಿತು. ಮರದಿಂದ ಮಾಡಿದ್ದ ಬಕೀಟಿನಲ್ಲಿ ನೀರು. ಒಬ್ಬರ ಸ್ನಾನಕ್ಕೆ ಒಂದು ಬಕೀಟು ತುಂಬಾ. ಅಷ್ಟರಿಂದಲೆ ತೃಪ್ತಿಯಾಯಿತು ಮುರಲೀಧರನಿಗೆ.
ಭಾನುವಾರ ಅಯ್ಯರ್ ಭೋಜನ ಶಾಲೆಯಲ್ಲಿ ಊಟ ತಡ.
ರಜಾ ದಿನಗಳಲ್ಲಿ ಯಾವಾಗಲೂ ಹಬ್ಬದ ಅಡುಗೆ, ಏನಾದರೊಂದು ಸಿಹಿ ಇರುತ್ತಿತ್ತು, ಇತರ ದಿನಗಳಿಗಿಂತ ಹೆಚ್ಚಾಗಿ. ಆ ಬೆಳಗ್ಗೆ ಬರಿಯ ಒಂದು ಲೋಟ ಕಾಫಿ ಸಾಲುತ್ತಿರಲಿಲ್ಲ.ಒಂದೋ ಎರಡೋ ಇಡ್ಲಿಗಳಿದ್ದರೆ ಚೆನ್ನಾಗಿರುತ್ತಿತ್ತು. ದುಡ್ಡು ಇಲ್ಲದೆ ಇದ್ದಾಗ
50