ವಿಷಯಕ್ಕೆ ಹೋಗು

ಪುಟ:ದೀಕ್ಷೆ.pdf/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
404
ಕನಸು

ಓದಿ ನೋಡಿ,"ಈ ಹೊಲಸನ್ನು ನೀನೇ ಏನಯ್ಯ ಬರೆದೋನು?" ಎಂದು ಕೇಳಿದರು.
"ಸೆಪ್ಟೆಂಬರಿನಲ್ಲಿ ಪರೀಕ್ಷೆಗೆ ಕಟ್ಟೋಣಾಂತ ಮಾಡಿದೀಯೋ? ಹೋಗು. ಓದ್ಕೋ. ಇನ್ನೊಮ್ಮೆ ನಿನ್ನ ವಿಷಯ ಏನಾದರೂ ಮಾತು ಕೇಳಿತೂಂದ್ರೆ ಹುಷಾರ್!" ಎಂದು ಎಚ್ಚರಿಕೆ ಇತ್ತರು.
ಮುಖಮುದುಡಿಸಿಕೊಂಡು ಲಕ್ಷ್ಮೀಕಾಂತ ಮನೆಗೆ ಹೋದ. ಎರಡು ದಿನ ಕಾಲೇಜಿನ ಕಡೆಗೆ ಬರಲಿಲ್ಲ. ಮೂರನೆಯ ದಿನ ಬಂದಾಗ, ಕುತೂಹಲಿಗಳಾಗಿದ್ದ ಸಹಪಾಠಿಗಲಿಗೆ ಆತನೆಂದ:
"ನನ್ನ ದೂರು ವೈಸ್ ಛಾನ್ಸ್‌ಲರ್ ಹತ್ತಿರಕ್ಕೆ ಹೋಗಿದೆ. ತನಿಖೆಗೆ ಕಮೀಶನ್ ನೆಮಿಸ್ಬಹುದು... "
ಒಬ್ಬ ವಿದ್ಯಾರ್ಥಿ ವ್ಯಂಗೋಕ್ತಿಯನ್ನಾಡಿದ:
"ಪ್ರಚಂಡ ಕಣಯ್ಯ ನೀನು."
"ಅಲ್ದೆ ಇನ್ನೇನು?" ಎಂದ ಲಕ್ಷ್ಮೀಕಾಂತ, ಆತ ಅಡಿದುದು ಹೊಗಳಿಕೆ ಎಂದೇ ಭಾವಿಸಿ.
ಆ ಸಂಪಾದಕನ ರಾಜಿನಾಮೆ ಪತ್ರ ಮಾತ್ರ ಸ್ವಿಕೃತವಾಯಿತು.
ಸಂಪಾದಕ ಮಂಡಲದಲ್ಲಿ ಲಕ್ಷ್ಮೀಕಾಂತನ ಹೆಸರಿಲ್ಲದೆಯೇ ಕಾಲೇಜ್ ಮ್ಯಾಗ ಜೀನ್ ಪ್ರಕಟವಾಯಿತು.
ಸಂಕಲನ-ಮುದ್ರಣ ಎರಡನೂ ಸೊಗಸಾಗಿದ್ದುವು.
ಅಧ್ಯಾಪಕ ವೃಂದದಲ್ಲಿ ಪ್ರಧಾನ ಸಂಪಾದಕ ಶ್ರೀಕಂಠಯ್ಯನವರನ್ನು ಹೊಗಳು ವವರೇ ಎಲ್ಲರೂ.
ಅವರು ಮಾತ್ರ ನಿರ್ಧಾರದ ಧ್ವನಿಯಲ್ಲಿ ಪ್ರತಿಯೊಬ್ಬರೊಡನೆಯೂ ಒಂದೇ ಮಾತನ್ನು ಅಂದರು:
"ಈ ಪ್ರಶಂಸೆ ಸಲ್ಲಬೇಕಾದ್ದು ಹುಡುಗರಿಗೆ_ಅದರಲ್ಲೂ ಆ ಮುರಲೀಧರನಿಗೆ."
'ದೇವತೆಗಳ ಕಣ್ಣೀರು' ಲೇಖನವನ್ನೋದಿದವರೆಲ್ಲರೂ ನಾನಾ ಪದಗಳನ್ನು ಉಪಯೋಗಿಸಿ 'ಚೆನ್ನಾಗಿದೆ' ಎಂಬ ಒಂದೇ ಅಭಿಪ್ರಾಯವನ್ನು ವ್ಯಕ್ತಗೊಳಿಸಿದರು. ಪರಿಚಯವಿಲ್ಲದವರೆಲ್ಲರೂ "ಮುರಲೀಧರ ಯಾರು?" ಎಂದು ಕೇಳಿದರು.
ಲಕ್ಷ್ಮೀಕಾಂತನ ಪ್ರತಿಭಟನೆಗೆ ಮುಂಚಿತವಾಗಿಯೆ ಅಚ್ಚಾಗಿ ಬಿಟ್ಟಿತ್ತು.ಆತನ ಕವಿತೆ. ಕೃತಿ ಪ್ರಕಟವಾಗುವುದಕ್ಕೆ ಮುಂಚೆಯೇ ಪ್ರಖ್ಯಾತನಾಗಿದ್ದ ಮಹಾನುಭಾವನ ಕವಿತಾ ಸೃಷ್ಟಿಯನ್ನು ನೋಡುವ ಅಪೇಕ್ಷೆ ಇಲ್ಲದವರು ಯಾರಿದ್ದರು? ಪ್ರತಿ ಯೊಬ್ಬರೂ ಅದನ್ನೋದಿಯೇ ಓದಿದರು.
ಹೆಸರು 'ನಮ್ಮ ಕಾಲೇಜು'
ಮೊದಲ ಸಾಲುಗಳು ಹೀಗಿದ್ದುವು: