ನಾರಣಪ್ಪನ ಅಕ್ಕ ತಿಂಡಿಯ ತಟ್ಟೆಗಳನ್ನು ತಂದಿಟ್ಟಳು.
ಆತನ ತಾಯಿ ಬಂದು ಹುಡುಗರಿಬ್ಬರನ್ನೂ ನೋಡಿ ಅಂದರು:
“ಪರೀಕ್ಷೆ ಪರೀಕ್ಷೆ ಅಂತ ಓದಿ ಓದಿ ಅದೆಷ್ಟು ಸಣಕಲಾಗೀರೋ ನಾನು ಬೇರೆ ಕಾಣೆ!”
ನಗಲು ಯತ್ನಿಸುತ್ತ ಮುರಲೀಧರನೆಂದ:
“ರಜಾದಲ್ಲಿ ಇಲ್ಲೇ ಇದ್ದಿದ್ದೀನಿ ಅಮ್ಮ. ಇಬ್ಬರಿಗೂ ಹೀಗೆ ತಿಂಡಿ ಕೊಡಿ.ಹ್ಯಾಗೆ ಆಗ್ತಿವಿ ಅನ್ನೋದನ್ನ ನೀವೇ ನೋಡಿ ಆಮೇಲೆ.”
“ಆಗಲಿ ಮಗೂ. ಖಂಡಿತ ಬಂದು ಇಲ್ಲೇ ಇದ್ದಿಡು.”
ತಾಯಿ ಅಲ್ಲೇ ಕುಳಿತು ಹಿರಿಯ ಮಗನ ಮಾತನ್ನೆತ್ತಿದರು. ನಾರಣಪ್ಪನಿಗೆ ಬಿಡುವಿರಲಿಲ್ಲವೆಂದು ಆ ಸಾರೆ ಮಲ್ಲೇಶಪ್ಪನ ಭೇಟಿಗೆ ಅವರೇ ಹೋಗಿದ್ದರು.
“ಏನಂತಾನೆ ಗೊತ್ತೆ ಮಲ್ಲೇಶಿ? ಒಳಗೆ ನಾನು ಚೆನ್ನಾಗೇ ಇದೀನಿ; ನನ್ನ
ಯೋಚೆ ಮಾಡೋಡಿ ಅಂತ. ಸರಿಯಾಗೇ ನೋಡ್ಕೊತಿದಾರಂತೆ. ಕೆಲಸ ಏನೂ ಕೊಡೊಲ್ವಂತೆ.”
“ಕೆಲಸ ಯಾಕೆ ಕೊಡ್ತಾರೆ? ಸ್ಥಾನಬದ್ಧ ರಾಜಕೀಯ ಕೈದಿ ಅಂದ್ಮಲೆ ಅಂಥಾದೇನೂ ಅವರು ಮಾಡೋಹಾಗಿಲ್ಲ,” ಎಂದ ಮುರಲೀಧರ. ಆ ಮಾಹಿತಿಯನ್ನು ಆತ ತಿಳಿದುಕೊಂಡಿದ್ದುದೇನೋ ನಾರಣಪ್ಪನಿಂದಲೇ.
ಬಿಡುಗಡೆಯ ಯತ್ನವೂ ನಡೆದಿತ್ತು. ನಾರಣಪ್ಪನ ತಂದೆಯ ಸ್ನೇಹಿತರಾಗಿ ದೊಬ್ಬ ವಕೀಲರು ಸರಕಾರದ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿದ್ದರು.
ಸ್ವತಃ ಆ ಯುವಕ ಅಪಾಯಕಾರಿ ಅಂತ ನಾವು ಭಾವಿಸಿಲ್ಲ. ಆತನಿಗೆ ಬಂದಿದ್ದ ಕಾಗದಗಳಿಲ್ಲದೇ ಹೋಗಿದ್ದರೆ ದಸ್ತಗಿರಿಯ ಯೋಚನೆಯನ್ನೂ ನಾವು ಮಾಡ್ತಿಲ್ಲ.ತಾಳಿ, ಪರಿಸ್ಥಿತಿ ಸ್ವಲ್ಪ ಸುಧಾರಿಸಿದ ತಕ್ಷಣ_'
ಅದು, ಅಧಿಕಾರಿಗಳು ಆಡಿದ್ದ ನವುರು ಮಾತು.
“ಅಂತೂ ಒಮ್ಮೆ ಮಲ್ಲೇಶಿ ಮನೆಗೆ ಬಂದರೆ ಸಾಕು.”
“ಬಂದೇ ಬತ್ತಾರೆ. ಎಷ್ಟು ದಿವಸ ಅಂತ ಜೈಲಿನಲ್ಲಿಡೋದು ಸಾಧ್ಯ?” ಎಂದ ಮುರಲೀಧರ.
...ಸಂಜೆ ಗೆಳೆಯನ ಮನೆಯಿಂದ ಬೇಗನೆ ಹೊರಟು ಆತ ಕೊಠಡಿ ಸೇರಿದ.ಪಾಠ ಹೇಳುವ ಕೆಲಸವಿರದ-ಅದರ ಪರಿಣಾಮವಾಗಿ ಸಂಪಾದನೆ ಶೂನ್ಯವಾದ ದಿನಗಳು...ಆ ಹಗಲು ಹೆಚ್ಚು ಓದುವುದಾಗಿರಲಿಲ್ಲ. ರಾತ್ರಿಯಾದರೂ ಹೆಚ್ಚು ಹೊತ್ತು ಕುಳಿತುಕೊಳ್ಳುವುದು ಅಗತ್ಯವೆನಿಸಿತು.
ಪುಸ್ತಕವನ್ನು ತೆರೆದು ಕುಳಿತ ಮುರಲೀಧರನನ್ನು, ಬೆಳಗ್ಗೆ ಬಂದಿದ್ದ ಕಾಗದದ ಸಾಲುಗಳ ನೆನಪು ಕ್ಷಣ ಕಾಲ ಗೊಂದಲಕ್ಕೀಡು ಮಾಡಿತು. ಆದರೆ ಮುರಲೀಧರ
ಪುಟ:ದೀಕ್ಷೆ.pdf/೮೧
ಗೋಚರ
ಈ ಪುಟವನ್ನು ಪರಿಶೀಲಿಸಲಾಗಿದೆ
408
ಕನಸು