ಪ್ರಯಾಸಪಟ್ಟು ಸ್ಮರಿಸಿಕೊಂಡವನಂತೆ ಹುಬ್ಬುಗಳನ್ನು ಕುಂಠಿತಗೊಳ್ಳುತ್ತ ಮುರಲೀಧರನೆಂದ:
"ಹನ್ನೆರಡು ಗಂಟೆಗೆ ಒಂದಿದೆ."
"ದುಡ್ಡಿದೆಯೇನು ಟಿಕೆಟಿಗೆ?”
“ಇದೆ, ಕೊಠಡೀಲಿ ."
ಪರೀಕ್ಷೆ_ಪರೀಕ್ಷಾ ಭವನ........ ಐದು ನಿಮಿಷಗಳೂ ಉಳಿದಿರಲಿಲ್ಲ, ಬಸ್ ನಿಲ್ದಾಣದವರೆಗೆ ಸ್ನೇಹಿತನ ಜತೆ ಹೋಗುವುದಂತೂ ಆಗದ ಮಾತು.
ಆದರೂ ನಾರಣಪ್ಪ ಕೇಳಿದ:
"ಒಬ್ಬನೇ ಹೋಗೋಕಾಗುತ್ತಾ?"
"ಹೂ೦.. ಹೋಗ್ರಿಡ್ತೀನಿ."
"ಸಾಧ್ಯವಾದರೆ ನಾಳೆಯೇ ವಾಪಸು ಬಂದ್ಬಿಡು."
"ಹೂಂ. ಹೋಗ್ತೀನಿ"
ಶ್ರೀಕಂಠಯ್ಯ, ಅವರಿಬ್ಬರು ನಿ೦ತಿದ್ದ ಹಾದಿಯಾಗಿ ಬಂದರು, ನಮಿಸಿದ ನಾರಣಪ್ಪನನ್ನು ನೋಡಿ ತಲೆಯಾಡಿಸಿದರು. ಶಿಷ್ಯ ಮುರಲೀಧರನೂ ಅಲ್ಲಿದನೆಂದು ಮುಗುಳು ನಕ್ಕರು. ಆದರೆ ಆ ಹುಡುಗ ಶಿಲಾಪ್ರತಿಮೆಯಂತಿದ್ದ. ಕಪ್ಪಿಟ್ಟಿತ್ತು ಮುಖ. ಒಂದು ಹೆಜ್ಜೆ ಮುಂದಿರಿಸಿದ್ದ ಶ್ರೀಕಂಠಯ್ಯ ತಡೆದು ನಿಂತು, ತಿರುಗಿ ನೋಡಿ, ಕೇಳಿದರು:
“ಏನು ಸಮಾಚಾರ?"
ನಾರಣಪ್ಪ ವಿಷಯ ತಿಳಿಸಿದಾಗ ಅಧ್ಯಾಪಕರ ಮುಖವೂ ಮ್ಲಾನವಾಯಿತು, ಅವರೆಂದರು:
"ಸೋ ಸಾರಿ. ಪರೀಕ್ಷೆಗೇನು ಇನ್ನೊಂದ್ಸಲ ಪಾಸ್ ಮಾಡ್ಕೋಬಹುದು. ಹೋಗಿ ಬಾ."
ಸಹಾನುಭೂತಿಯು ಆ ಧ್ವನಿ, ಮುರಲೀಧರನ ಅಳಲಿನ ಚೀಲವನ್ನು ಇರಿಯಿತು. ಆತನ ಕಣ್ಣಗಳಲ್ಲಿ ಹನಿಯಾಡಿತು.
ಬೀದಿಯು ಕಡೆಗೆ ಎರಡು ಹೆಜ್ಜೆ ಇಟ್ಟು ಆತನೆಂದು:
"ಬರ್ತೀನಿ ನಾಣಿ. ಹೋಗಬರ್ತೀನಿ."
"ಹೂ೦.. ಸಾಧ್ಯವಾದರೆ ನಾಳೇನೆ ಬಾ, ಇಲ್ಲದೇ ಹೋದ್ರೆ ಕಾಗದನಾದರೂ ಬರಿ."
"ಆಗಲಿ ನಾಣಿ."
ಒಬ್ಬನೇ ನಡೆದು ಹೋದ ಮುರಲೀಧರನನ್ನೇ ನಾರಣಪ್ಪ ಸ್ವಲ್ಪ ಹೊತ್ತು ದಿಟ್ಟಿಸಿದ.ಬಾರಿಸಿದ ಗಂಟೆಯ ಸದ್ದು ಆತನನ್ನು ಎಚ್ಚರಿಸಿತು. ಭಾರವಾದ ಹೃದಯದೊಡನೆ ಆತ ಪರೀಕ್ಷಾಭವನದ ದ್ವಾರದೆಡೆಗೆ ನಡೆದ.
ಪುಟ:ದೀಕ್ಷೆ.pdf/೮೪
ಗೋಚರ
ಈ ಪುಟವನ್ನು ಪರಿಶೀಲಿಸಲಾಗಿದೆ
ದೀಕ್ಷೆ
411