ಪುಟ:ಧರ್ಮಸಾಮ್ರಾಜ್ಯಂ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೨ ಧರ್ಮಸಾಮ್ರಾಜ್ಯಮ್ [ಸಂಧಿ $xxx ••••••••••ovಇwwwmv ಸಾಧಿಯೆ! ಇಲ್ಲಿಬಾ; ಎನ್ನ ಅರ್ಧಾಸನವನ್ನು ಅಲಂಕರಿಸು! " ಎಂದು ಹೇಳಿ, ಎನ್ನ ಕೈಗಳನ್ನು ಹಿಡಿದು ಮೇಲಕ್ಕೆ ಕರೆದು ಕೊಂಡು, ನಾನಲ್ಲಿ ಕುಳಿತತರುವಾಯ ವಿನಯದಿಂದ ಎಲೌ ಸರ್ವಮಂಗಳೆ! ನಿನ್ನನ್ನು ಅಮಂಗಳೆಯೆಂದು ಅನ್ಯಾಯವಾಗಿ ನಿಂದಿಸಿ, ಅನೇಕ ದುಃಖ ಗಳಿಗೆ ಗುರಿಮಾಡಿದೆನು, ಎಲೌ ಮಾನಿನಿ! ಆಕೋಪವನ್ನು ಮರೆ, ಪ್ರಿಯೆ! ಆ ಅಪರಾಧವನ್ನು ಕ್ಷಮಿಸು' ಎಂದು ಬೇಡಿದಬಳಿಕ ಎನ್ನ ಗಲ್ಲ ನನ್ನ ಲುಗಿ, ಪನ್ನೀರಿನಲ್ಲಿ ನೆನೆದ ತನ್ನ ಚೀನಾಂಬರದ ಸೆರಗಿನಿಂದ ಎನ್ನ ಕಂಬನಿ ಗಳನ್ನು ತೊಡೆಯುತಿರ್ದ ಸಮಯಕ್ಕೆ ಸರಿಯಾಗಿ ಆರೋ ಎನ್ನ ಕಣ್ಣನ್ನು ಮುಟ್ಟಿ ಎಚ್ಚರಗೊಳಿಸಿದರು. ಮಹಾರಾಜನಿಂದೊಡಗೂಡಿ ಜಾಗ್ರತ್ತು ಖವನ್ನು ಪಡೆಯುವ ಭಾಗ್ಯವೆನಗೆ ಇಲ್ಲದೇ ಇರ್ದರೂ ಸ್ವಪ್ನ ಸುಖವ ನಾ ದರೂ ಅನುಭವಿಸುತಿರ್ದೆನು. ಈಗ ಅದಕ್ಕೂ ವಿಘ್ನ ವುಂಟಾಯಿತೆ? ಹಾ ವಿಧಿಯೆ! ” ಎಂದು ವಿಷಾದಪಡುತ್ತಿರುವಲ್ಲಿ ಅವಳ ತಲೆಯಮೇ ಅರ್ದ ಕರವಸ್ತ್ರದಿಂದ ಪನ್ನೀರಿನ ಹನಿಗಳು ಜಾರಿ ಅವಳ ಕೈಮೇಲೆ ತೊಟ್ಟಿ ಡಲು ಬೆಚ್ಚಿದವಳಾಗಿ ಅಶ್ಚರ್ಯದಿಂದ:_<<ಇದೇನು: ಈ ನೀರಿನ ಹನಿಗಳೆ ಲ್ಲಿಯವ? ” ಎಂದು ಕೈಯನ್ನು ಆಘ್ರಾಣಿಸಿ:- ಇವು ಪನ್ನೀರಿನ ಹನಿಗಳಂತೆ ತೋರುವುವು! ಇವೆಲ್ಲಿಂದುದಿರುವುವು? ” ಎನ್ನು ವುದರೊಳ ಗಾಗಿ ಮತ್ತೊಂದು ಹನಿಯು ಕಪೋಲಪ್ರದೇಶದಿಂದ ಜಾರಿಬರಲು, ತನ್ನ ಕಪೋಲನ್ನು ಮುಟ್ಟಿ ಕೊಳ್ಳಲ್ಲಿ ನೆನೆದ ಆಕರವಸ್ತ್ರದ ತುದಿಯು ಕೈಗೆಸಿಲು ಕಲು, ಅದನ್ನು ತೆಗೆದು ಕೊಂಡು ನೋಡಿ ಆಶ್ಚರ್ಯದಿಂದ:- ಇದಾ ವುದೀಸೂಕ್ಷ್ಮವಾದ ಕರವಸ್ತ್ರವು? ಇದು ನಿಮ್ಮ ದೇಶದಲ್ಲಿ ರಚಿಸಲ್ಪಟ್ಟು ದಲ್ಲವೆಂದು ತೋರುವುದು! ಪನ್ನೀರಿನಿಂದ ನವೆಯಿಸಲ್ಪಟ್ಟಿದು, ಎನ್ನ ತಲೆಯ ಮೇಲಕ್ಕೆ ಬರಲು ಕಾರಣವೇನು? ?” ಎಂದು ಕುತೂಹಲದಿಂದ ಅತ್ತಿತ್ತ ನೋಡುವಲ್ಲಿ ದಾದಿಯು ಕಣ್ಣೆ ಕಾಣಿಸಿಕೊಂಡು ಪರಿಹಾಸ ದೊಡನೆ:- ಎಲೌ ಕುವರಿ ! ನಿನಗೆ ಆಶ್ಚರ್ಯವನ್ನು ಂಟುಮಾಡಿದೀಕರವ ಸ್ವವು ನಿನಗೆ ಉಡುಗೊರೆಯಾಗಿ ಕೊಡಲ್ಪಟ್ಟ ಅಮೂಲ್ಯ ವಸ್ತುಗಳಲ್ಲಿ