ಪುಟ:ಧರ್ಮಸಾಮ್ರಾಜ್ಯಂ.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

L) ಮೂರನೆಯ ಅಂಗ ೬೫

  • + + ' + 1 \r\ \ \ + r\?
  • * * * * * * * \r rt t 1_t * * * * 1 1 1 1 1 1

ಸುತ್ತ ಇವನನ್ನು ಸಂಧಿಸಿದನು. ಇವನನ್ನು ನೋಡಿದ ದಾಯಕಶ್ರೇ ವೈ ಯು ಬಹುವ್ಯಸನಗೊಂಡು:- “ಧರ್ಮಾತ್ಮನಾಗಿಯೂ ಸದಾಚಾರಸಂಪ ನೈನಾಗಿಯ ಜ್ಞಾನೈಶ್ವರ್ಯಶೋಭಿತನಾಗಿಯ ಇರ್ದ ಈ ಬ್ರಾಹ್ಮ ಡೋತ್ತಮನ ದುಃಖಕ್ಕೆ ಕಾರಣವೇನಾಗಿರಬಹುದು? ಒಳ್ಳೆಯದು! ಮೊ ದಲು ಇದನ್ನು ವಿಚಾರಿಸಿ ಬಳಿಕ ಇತರಕಾರ್ಯವನ್ನು ಮಾಡುವೆನು. ? ಎಂದು ನಿಶ್ಚಯಿಸಿ, ಆಬ್ರಾಹ್ಮಣನನ್ನು ಕುರಿತು ಭಕ್ತಿಗೌರವಗಳಿಂದ:- c ಸ್ವಾಮಿ! ಇದೇಕೆ ಈರೀತಿ ದುಃಖಿಸುವಿರಿ? ?” ಎಂದು ಪ್ರಶ್ನೆ ಮಾಡಲು ಶೀಲಾಸನನು:-(ಕಾಲಾನುಗತವಾದ ವಾರ್ಧಕದಿಂದಲೂ, ಈಗ ಪ್ರಾಪ್ತ ವಾಗಿರುವ ದಾರಿದ್ರದೋಷದಿಂದಲೂ, ನೇತ್ರಪಾಟವವು ಕುಂದುತ್ತಿರು ವುದರಿಂದ ನಿನ್ನನ್ನು ಗುರ್ತಿಸಲಾರೆನು ; ದಯೆಯಿಂದ ನಿನ್ನ ನಾಮವನ್ನು ತಿಳುಹು?” ಎಂದು ಕೇಳಲು ದಾಯಕಶ್ರೇಷ್ಠಿ ಯು ಸಖೇದನಾಗಿ:-(ಹಾ! ನೀಚದಾರಿದ್ರವೇ ?” ಎಂದು ನಿಟ್ಟುಸಿರು ಬಿಟ್ಟು ಬಳಿಕ ವಿನಯದಿಂದ:- « ನಾನು ದಾಯಕಶ್ರೇಷ್ಠಿ ಯು; ತಾವು ಈರೀತಿ ದುಃಖಿತರಾಗಲು ಕಾರಣವೇನು? ತಮ್ಮ ಸೇವೆಗೆ ನಾನು ಸಿದ್ಧನಾಗಿಹೆನು.” ಎಂದು ಹೇ ಳಲು ಶೀಲಾಸನನು:-ನಿನಗೆ ಮಂಗಳವಾಗಲಿ! ಹಾಗಾದರೆ ಹೇಳುವೆನು ಕೇಳು-ಎಮ್ಮ ಮಹಾರಾಜನ ಈ ರಾಜಧಾನಿಯಲ್ಲಿ ನಾವುಗಳೆದುವ ರೆಗೂ ಆವುದೊಂದು ದುಃಖವನ್ನೂ ಉಪದ್ರವವನ್ನೂ ಅರಿಯದೆ, ಆರ್ಯ ವಿಹಿತವಾದ ಧರ್ಮವನ್ನೂ ಕುಲವಿಹಿತವಾದ ವೃತ್ತಿಯನ್ನೂ ಅನುಷ್ಠಿ ಸುತ್ತ, ಮಹಾರಾಜನ ಶ್ರೇಯಃ ಪ್ರಾರ್ಥನೆಯನ್ನು ಮಾಡಿಕೊಂಡು ಸುಖ ವಾಗಿರ್ದೆವು ; ಇತರ ರಾಜ್ಯಗಳಲ್ಲಿ ಕ್ಯಾಮ ದಾರಿದ್ರ ಮುಂತಾದುವು ಪ್ರಾಪ್ತವಾದರೂ ಧರ್ಮ ಪ್ರಿಯನಾದೆಮ್ಮ ಮಹಾರಾಜನ ಈ ರಾಷ್ಟ್ರದಲ್ಲಿ ಋತುಧರ್ಮಗಳು ಸಕಾಲದಲ್ಲಿ ಪ್ರಾಪ್ತವಾಗಿ ಅನರ್ಘವಾಗಿ ಧಾನ್ಯಾ ದಿಗಳು ಬೆಳೆಯುತಿರ್ದುದರಿಂದಲೂ ಮತ್ತು ಪ್ರಜೆಗಳೆಲ್ಲರೂ ಸ್ವಧರ್ಮ ಸ್ವವೃತ್ತಿಗಳಿಂದ ಪತಿತರಾಗದೆ ಕಾರ್ಯದಕ್ಷರಾಗಿರ್ದುದರಿಂದಲೂ ಯಾ ವುದೊಂದು ವಿಪತ್ತಿಗೂ ಮಾರ್ಗವೇ ಇರಲಿಲ್ಲವು ; ಈಗಲಾದರೂ ಅನಾ