ಪುಟ:ಧರ್ಮಸಾಮ್ರಾಜ್ಯಂ.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮರನಯ ಅಂಗ ೬೧. ಅವಲಂಬಿಸಬೇಕಾಗುವುದೋ ಅಂತಹ ದ್ರವ್ಯಲಾಭವು ಎನಗೆಂದಿಗೂ ಬೇಡ ! 221 ಆದರೆ ನಾನೀರೀತಿ ಪ್ರತಿವಾದವಾಡಿ ರೆನೆಂದು ಕೋಪಿಸಲಾಗದು. ಅಪ್ಪಣೆಯಾದರೆ ಎನ್ನ ಕಾರ್ಯವನ್ನು ಕುರಿತು ತೆರಳುವೆನು. ” ಎಂದು ಹೇಳಿ ಅಲ್ಲಿಂದ ಮುಂದಕ್ಕೆ ಹೊರಟುಹೋದನು. ಬಳಿಕ ಗುಪ್ತನು ಚಿತ್ರವನ್ನು ಹಿಂದಿಟ್ಟು ಈ ಬ್ರಾಹ್ಮಣನನ್ನೂ ಅವನ ಪತೀಪುತ್ರರನ್ನೂ ಪರೀಕ್ಷಿಸುವ ಕುತೂಹಲದಿಂದ ಅವನ ಬಳಿಗೈದಿ ವಿನ ಯವನ್ನು ನಟಿಸುತ್ತ:- ಎಲೈ ವೃದ್ದ ಬ್ರಾಹ್ಮಣನೆ ! ಮೂರ್ಖನಾದ ಆ ವೈಶ್ಯನಂತೆ ಎಮ್ಮ ಮಾತನ್ನು ನೀನೂ ನಿರಾಕರಿಸುವೆಯೋ, ಇಲ್ಲವೆ ಅಂಗೀಕರಿಸಿ ಸುಖಿಯಾಗುವೆಯೋ ?” ಎಂದು ಕೇಳಲು ಶೀಲಾಸನನು ವಿನಯದಿಂದ:- “ ಮಹಾತ್ಮನೆ : ನೀನೇನಾಜ್ಞಾಪಿಸುವೆ ? ” ಎಂದು ಕೇಳಲು ಗುಪ್ತನು ಪ್ರಸನ್ನ ನಂತೆ ನಟಿಸುತ್ತ: ಹಾಗಾದರೆ ನಾನು ಹೇಳುವುದನ್ನೆಲ್ಲ ಸಾವಧಾನವಾಗಿ ಕೇಳು-ನೀನಾದರೋ ಬಹುವೃದ್ದನು; ಮತ್ತು ಪತ್ನಿ ಪುತ್ರರಿಂದ ಸಮೇತನಾಗಿಯ ಇರುವೆ; ಈಗಲೋ ಆಪ ತಾಲವಾಗಿರುವುದು; ಇವೆಲ್ಲಕಿಂತಲೂ ನಿನ್ನ ದಾರಿದ್ರವು ಅತಿ ಶೋಚ ನೀಯವಾಗಿಯ, ಸಹಿಸಲಶಕ್ಯವಾಗಿಯೂ ಇರುವುದು, ಇವೆಲ್ಲವೂನಿಜ ವೋ ಅಲ್ಲವೋ ಹೇಳು ?” ಶೀಲಾಸನ:- (ನವ್ರಭಾವದಿಂದ) “ ಇವೆ ಲ್ಲವೂ ನಿಜವು. ” ಗುಪ್ತ:-(ಉತ್ಸಾಹದಿಂದ) • ಪಂಚಭೂತಾತ್ಮಕವಾದೀ ವೃಷ್ಟಿ ಸಮಷ್ಟಿ ಪ್ರಪಂಚಗಳು ಪ್ರತಿಕ್ಷಣದಲ್ಲಿಯ ವಿಕಾರವನ್ನು ಹೊಂದು ತಿರುವ ಅಂಶವೂ; ಮತ್ತಾವೃಕ್ಷಗಳು ಋತುವ್ಯತ್ಯಾಸಗಳಿಗನುಗುಣವಾಗಿ ತಾವೂ ವ್ಯತ್ಯಾಸವನ್ನು ಹೊಂದುವಂತೆ-ನಾವುಗಳೂ ಅವಸ್ಥಾಭೇದಗಳನ್ನು ಹೊಂದುವ ವಿಷಯವೂ, ಮತ್ತೀರೀತಿ ಪ್ರಪಂಚದ ಪ್ರತಿಯೊಂದು ವಸ್ತುವೂ ಕಾಲಾನುಸಾರವಾಗಿ ವಿಕಾರಗಳನ್ನು ತಪ್ಪದೆ ಹೊಂದುವ ಅಂಶವೂ ಕೂಡ, ನಿಜವೋ ಅಲ್ಲವೋ ? ” ಶೀಲಾ:-ಅದೂ ನಿಜ. ” ಗುಪ್ತ:-(ದೃಷ್ಟತೆಯಿಂದ) “ ಹಾಗಾದರೆ ನೀನೀ ಆಪಚ್ಚಮನಾರ್ಥ