ಪುಟ:ಧರ್ಮಸಾಮ್ರಾಜ್ಯಂ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܦܬ y 1+ +1+ + + , •••v/ .••• • • . ••• •••v ಧರ್ಮಸಾಮ್ರಾಜ್ಯವು [ಸಂಧಿ ವಾಗಿ ತಕ್ಕ ಉಪಾಯವನ್ನೂ ವೃತ್ತಿಯನ್ನೂ ಅವಲಂಬಿಸಬೇಕೆ ಬೇಡ ವೋ ಹೇಳು. ” ಶೀಲಾ:- * (ಒಂದುಕ್ಷಣಕಾಲಯೋಚಿಸಿ) « ಅವಲಂ ಬಿಸಬೇಕು; ಆದರೆ, ಮೂಲಧರ್ಮಕ್ಕೂ ಸ್ವಭಾವಕ್ರಮಕ್ಕೂ ವಿರೋಧ ವಾಗದಂತೆ ಎಚ್ಚರಿಕೆಯಿಂದಿರಬೇಕು. " ಗುಪ್ತ:- (ತನ್ನ ಮಾತಿಗೆ ಒಡಂಬಡಲಾರನೆಂದು ಬೆದರಿ) * ಅದು ಹೇಗೆ ? ” ಶೀಲಾ:-(ಚಿತ್ತ ಸೈರ್ಯದಿಂದ) • ಪಂಚಭೂತಗಳು ಪರಸ್ಪರ ವ್ಯತ್ಯಸ್ತವಾದ ಗುಣಕ ರ್ಮಸ್ವಭಾವಗಳುಳ್ಳವಾದರೂ ತಂತಮ್ಮ ಸಹಜಕರ್ಮಗಳನ್ನು ನಿಯಮಿ ತಕಾಲದಲ್ಲಿ ಆಚರಿಸುವುದೇ ಹೊರತು ಒಂದರ ಕರ್ಮವನ್ನು ಮತ್ತೊಂದು ಮಾಡುವುದೇ ಆಗಲಿ, ಅಥವಾ ಅಕಾಲದಲ್ಲಿ ಪ್ರಾಪ್ತವಾಗುವುದೇ ಆಗಲಿ, ಎಂತು ಆಗುವುದಿಲ್ಲವೋ-ಮತ್ತು ವೃಕ್ಷಗಳು ತತ್ತತ್ಕಾಲದಲ್ಲಿ ಬಾಹ್ಯವ್ಯ ತ್ಯಾಸಗಳನ್ನು ಮುತುಧರ್ಮಾನುಸಾರವಾಗಿ ಹೊಂದಿದರೂ ಮೂಲದಲ್ಲಿ ಮಾತ್ರ ನಿರ್ವಿಕಾರವುಳ್ಳವಾಗಿ ಎಂತಿರುವುವೋ-ಮತ್ತು ಸೂರ್ಯನು ಧರ್ಮನಿಯಮಿತವಾದ ಮಾರ್ಗದಲ್ಲಿ ಮೊದಲು ತಾನು ನಡೆದು, ತದ್ಧಾರ ತನ್ನನುಗಾಮಿಗಳಾದ ಇತರ ಗ್ರಹಗಳನ್ನೂ ಅವುಗಳಿಗೆ ನಿಯತ ವಾದ ಮಾರ್ಗದಲ್ಲಿ ನಡೆಯುವಂತೆ ಎಂತು ಪ್ರೇರಿಸುವನೋ-ಅದರಂತೆಯೇ ಪ್ರಾಜ್ಞನಾದ ಮನುಷ್ಯನೂ ಕೂಡ, ಮೊದಲು ತಾನು ಧರ್ಮಪಥದಲ್ಲಿ ನಡೆದು ತದ್ಧಾರ ಇತರರಿಗೂ ಅವರವರಿಗೆ ವಿಹಿತವಾದ ಧರ್ಮಪಥದಲ್ಲಿ ನಡೆಯುವಂತೆ ಬೋಧಿಸಬೇಕು ; ಹೀಗೆ ಮಾಡಿದಲ್ಲಿ ಸ್ವಭಾವವಿರುದ್ಧ ವಾದ ದೋಷಗಳು ಪ್ರಾಪ್ತವಾಗದೆ, ಜಗತ್ತು ನಿಯತಮಾರ್ಗದಲ್ಲಿ ನಡೆದು, ಸಂಕರದೋಷಗಳೆಲ್ಲವೂ ಶಮನವಾಗಿ, ಲೋಕಕ್ಕೆ ಸುಖವೂ ಲಾಭವೂ ಶಾಂತತೆಯ ಉಂಟಾಗುವುವು !” ಈ ರೀತಿ ಸಕಾರಣವಾದ ಮತ್ತು ಧರ್ಮಸಂಮತವಾದ ಉತ್ತರ ಗಳನ್ನು ಕೇಳಿದ ಗುಪ್ತನು, ಇವನನ್ನು ಈರೀತಿಯಾದ ತತ್ವ ವಿಚಾರದಿಂದ ಗೆಲ್ವುದಕ್ಕಾಗಲಾರದೆಂದು ನಿಶ್ಚಯಿಸಿದವನಾಗಿ, ಲೋಕ ನ್ಯಾಯವನ್ನು ಬೋಧಿಸುವುದರ ಮುಖೇನ ಇವನ ಬುದ್ದಿಗೆ ವೈಕಲ್ಪವನ್ನುಂಟು