ಪುಟ:ಧರ್ಮಸಾಮ್ರಾಜ್ಯಂ.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Pof t_1 \r\ ಮೂರನೆಯ ಅಂಗ ೭೩ • • • : , ಮಾಡಬೇಕೆಂಬ ಕುತೂಹಲದಿಂದ, ಚಿತ್ರನನ್ನು ಕುಹಕದೃಷ್ಟಿಯಿಂ ಸಂಟೆ ಮಾಡಿದ ಬಳಿಕ ಅವನನ್ನು ಕುರಿತು ಮಿಥ್ಯಾವಿನಯದಿಂದ:-Iಇವುಗ ಬೆಲ್ಲಾ ಹಾಗಿರಲಿ, ಈಗ್ಗೆ ಉಪಯುಕ್ತವಾದ ವಿಚಾರವನ್ನು ಮಾಡೋಣ; ಅದೇನೆಂದರೆ- ಈಗ ನಿನಗೆ ಕೇವಲ ವಾರ್ಧಕವು; ಆದ್ದರಿಂದ ನೀನು ಒಂದು ಕಡೆ ಕುಳಿತು ಹೆಚ್ಚು ಶ್ರಮವಿಲ್ಲದೆ ಜೀವನವಂ ಮಾಡಲು ಅನು ಕೂಲಿಸುವ ಒಂದು ಉಪಾಯ ವಿರುವುದು, ಅದೇನೆಂದರೆ-ಆವುದನ್ನು ಪಾ ನಮಾಡಿದುದರಿಂದ ದೇವತೆ ಗಳು ಸುರರೆಂಬ ಖ್ಯಾತಿಯನ್ನು ಪಡೆದರೋ, ಮುನಿಜನರನ್ನು ಸತ್ಕರಿಸುವ ಸಾಮಗ್ರಿಗಳಲ್ಲಿ ಪ್ರಥಮವಾದುದೆಂದು ನಿಮ್ಮ ವೇದಗಳಲ್ಲಿಯ ಧರ್ಮಗ್ರಂಥಗಳಲ್ಲಿಯ ಆವುದು ವಿಖ್ಯಾತಿ ಯನ್ನು ಹೊಂದಿದೆಯೊ, ಆವುದನ್ನು ಸೇವಿಸದವನು ಸುಖಿಯ ಭೋಗಿ ಯ ಎಂದೆನಿಸನೋ, ಮತ್ತಾವುದು ಈಗ ಧನಿಕರೆಲ್ಲರಿಗೂ ಅತಿಪ್ರಿಯ ವಾದುದಾಗಿಯೂ ಆನಂದವನ್ನುಂಟುಮಾಡುವುದಾಗಿಯೂ ಇರುವುದೋ ಅಂತಹ ಸುರೆಯನ್ನು (ಹೆಂಡ ಮೊದಲಾದ ಮಾದಕಗಳನ್ನು) ವಿಕ್ರಯಿ ಸುವ ವೃತ್ತಿಯನ್ನು ಅವಲಂಬಿಸಿದುದೇ ಆದರೆ, ನಿನಗೆ ಕ್ಯಾಮಭೀತಿಯ ತೋರದೆ, ಸುಖವೂ ಲಾಭವೂ ಉಂಟಾಗಿ, ಕ್ಷಿಪ್ರದಲ್ಲಿಯೇ ಧನಿಕನೂ ಆಗುವೆ; ಇಷ್ಟೇಅಲ್ಲದೆ ಕ್ರಮೇಣ ನೀನೂ ಸೇವಿಸುತ್ತ ಬಂದರೆ ವಾರ್ಧಕ ಜನ್ಯವಾದ ದೌರ್ಬಲ್ಯವೂ ನಾಶವಾಗಿ, ಪ್ರಪಂಚಭೋಗವನ್ನು ಅನುಭವಿ ಸಲು ಅರ್ಹನೂ ಆಗುವೆ; ಕ್ಷಿಪ್ರದಲ್ಲಿಯೇ ಹಾಗೆಮಾಡು.” ಇದನ್ನು ಕೇಳಿದ ಶೀಲಾಸನನು ಕಿವಿಗಳನ್ನು ಮುಚ್ಚಿ ಕೊಂಡು « ಶಾಂತಂಪಾಪಂ! ಶಾಂತಂಪಾಪಂ!! " ಎಂದಬಳಿಕ ವಿಷಾದದಿಂದ ಗುಪ್ತ ನನ್ನು ಕುಂತಿಂತೆಂದನು:-(ಮಹಾತ್ಮನೇ ! ಎನ್ನ ಕುಲಧರ್ಮಕ್ಕೆ ಎರು ದ್ದ ವಾದ ನಿನ್ನ ದುರ್ಬೋಧೆಯು ಸಾಕು; ನಿನ್ನ ಕನಿಕರಕ್ಕೆ ನಾನು ಮರು ಗುವೆನು ” ಇದನ್ನು ಕೇಳಿದ ಗುಪ್ತನು ಕೋಪಗೊಂಡು: ಅಯ್ಯೋ! ಮೂರ್ಖ; ನಿನ್ನ ದುಃಸ್ಥಿತಿಯನ್ನು ನೋಡಲಾರದೆ ದ್ರವ್ಯಾರ್ಜನೆಗೂ ಪ್ರಾಣರಕ್ಷಣೆಗೂ ಸುಲಭೋಪಾಯವನ್ನು ಸೂಚಿಸಿದರೆ, ಅದನ್ನು ಗಮ 1)