ಪುಟ:ಧರ್ಮಸಾಮ್ರಾಜ್ಯಂ.djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೦

ಧರ್ಮಸಾಮ್ರಾಜ್ಯಮ್

[ಸಂಧಿ

ರಹಸ್ಯವನ್ನೂ ಶಾಸ್ತ್ರವಿವೇಚನೆಯನ್ನೂ ಅರಿಯದ ಅಜ್ಞಜನರಾಡಿಕೊಡರೆ
ಅದರಿಂದ ನಿನಗೇನು ಕುಂದಕವು ? ಎಂದು ಹೇಳಲು ದೇವಸೇನನು
ಭೀತಿಯಿಂದ:-
ಹಾ! ಹಾಗೆ ಯೋಚಿಸಲಾಗದು; ನಿಂದಿಸುವ ಜನರು
ಅಜ್ಞರಾದರೂ ಅವರನಿಂದೆಯು ಅಜ್ಞವಾಗುವುದಿಲ್ಲ; ಅದು ಪ್ರಾಜ್ಞರ
ವರೆಗೂ ವ್ಯಾಪಿಸಿ, ಅವರೂ ಸಂದೇಹಪಡುವದಕ್ಕೆ ಕಾರಣವಾಗುವುದು;
ನಾನು ಸಾಮಾನ್ಯನಾಗಿರ್ದಲ್ಲಿ ಇಷ್ಟು ಚಿಂತಿಸಬೇಕಾಗಿರಲಿಲ್ಲ; ಎನ್ನ
ವೃತ್ತಿಯು ಬಹು ಸೂಕ್ಷ್ಮವಾದುದು; ಏಕೆಂದರೆ-
- [೫೨ ತಾ:-"ವೃಷಭನು ಸಂಚರಿಸುವ ಮಾರ್ಗವು ವಕ್ರವಾದು
ದೇ ಆಗಲಿ ಋಜುವಾದುದೇ ಆಗಲಿ, ಅದನ್ನು ಅನುಸರಿಸಿ ಉಳಿದ ಪಶು
ಗಳೆಂತು ನಂಬಿಕೆಯಿಂದ ಹಿಂಬಾಲಿಸುವುವೋ ಅದರಂತೆಯೇ, ಪ್ರಜೆಗ
ಳಾದವರು ರಾಜನ ಆಚರಣೆಯು ಹಿತವಾದುದೇ ಆಗಲಿ ಅಹಿತವಾ ದುದೇ ಆಗಲಿ, ಅದನ್ನು ವಿಚಾರಿಸದೆಯೂ ಹಿಂತೆಗೆಯದೆಯ ಉತ್ಸಾಹದೊಡನೆ ಆಚರಿಸುವರು (೫೫) ಹೀಗೆ ಜನರಾಚರಿಸುವ ಧರ್ಮವನ್ನು ನಿರ್ದೆಶಿಸುವ ನಾನೇ ದುರ್ಮಾರ್ಗದಲ್ಲಿ ಪ್ರವೃತ್ತಿಯುಳ್ಳ ವನಾದಮೇಲೆ, ಎನ್ನ ನಡತೆಗಳನ್ನೇ ಅನುಸರಿಸಿ ನಡೆವ ಎನ್ನ ಪ್ರಜೆಗಳ ಅವಸ್ಥೆಯು, ಇನ್ನೆಂತಹುದಾಗಬಹುದು ? (೫೪) ಆದಕಾರಣ ನಾನು ಎನ್ನ ಪ್ರಜೆಗಳ ಹಿತವನ್ನೂ, ಎನ್ನ (ರಾಜ) ಧರ್ಮವನ್ನೂ, ಏಮಲವಾದ ಕೀರ್ತಿಯನ್ನೂ ಬಯಸಿರುವೆನಾದುದರಿಂದ ಮನಸ್ಸು ಚಲಿಸಿದಂತೆಲ್ಲ ಜಿಹ್ನಂ ಶುಭಂ ವಾ ವೃಷಭಪ್ರಚಾರಂ ಗಾವೋ ನುಗಾ ಯದ್ಧದನುಪ್ರಯಾ | ಉತ್‌ಕ್ಷಿಪ್ತ ಶಂಕಾಂಕುಶನಿರ್ವಿಘಟ್ಟಂ ಚಾಸ್ತಥೈವ ಕ್ಷಿತಿಪಸ್ಯ ವೃತ್ತಿಮ್ |೫೨|| ಧರ್ಮವ್ಯವಸ್ಥಾಸು ಪುರಸ್ಸರಸ್ಸಯಂ ವಜೇಯಂ ಯದಿ ಕಾಪಥೇನ | ಅಹ್ಮದ್ ತಾಚಾರಪಥಾನುಗಾನಾಂ ಭವೇದವಸ್ಥಾ ಮನ ಕಾ ಪಜಾನಾಮ್ ||೫೩|| ತಸ್ಮಾತ್ಮಜಾನಾಂ ಹಿತಮೀಕ್ಷಮಾಣಃ ಸ್ವಂ ಚೈವ ಧರ್ಮಂ ವಿಮಲಂ ಯಶಶ್ಚ : ನೇಚ್ಛಾಮಿ ಚಿತ್ರಸ್ಯ ವಶೇನ ಗನ್ತು ಮಹಂ ಹಿ ನೇತಾ ವೃಷವಪ್ಪಜಾನಾಮ್ ||೫೪||