ಪುಟ:ಧರ್ಮಸಾಮ್ರಾಜ್ಯಂ.djvu/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಲ್ಕನೆಯ ಅಂಗ ೧೧೧ \ \ \/ #\ A #° 0 # 1 * * * 1 1 1 1 1 1 1 # 111 ಗೊಂಡವನಾಗಿ ತನ್ನಲ್ಲಿತಾನೇ:-- ಈಕೆಯನ್ನು ನೋಡಿದಮಾತ್ರದಿಂದ ಲೇ ಎನಗೆ ಈಕೆಯ ವಿಷಯದಲ್ಲಿ ಕನಿಕರವೂ ಗೌರವವೂ ಉಂಟಾಗು

ಪೂರ್ವವಿಷಯಗಳೊಂದೂ ಎನಗೆ ತಿಳಿಯದೆಂದು ಭಾವಿಸಿಕೊಂಡು, ಈಗ ನಾನು ಬಂದಿರುವುದರಿಂದ ಮತ್ತಾವಕಾರಣವನ್ನು ಹೇಳುವುದಕ್ಕೂ ಅವಕಾಶವಿಲ್ಲ ದುದರಿಂದ ತನ್ನ ಪಾತಿವ್ರತ್ಯಕ್ಕೆ ಭಂಗವುಂಟಾದೀತೆಂಬ ಶಂಕೆಯಿಂದ ಈರೀತಿ ಗಡಗಡನೆ ನಡುಗುತ್ತಿಹಳು; ನಿಜವಾಗಿಯೂ ಇವಳು ಮಹಾಪತಿವ್ರತೆಯೇ ಅಹುದು! ರಾಜನಾದರೋ ಇವಳನ್ನು ಸಂಪೂರ್ಣವಾಗಿ ಧಿಕ್ಕರಿಸಿರುವನು; ಇವಳಾದರೋ ರಾಜನನ್ನೇ ಪತಿ ಯೆಂದು ಭಾವಿಸಿ ಇನ್ನೂ ಭ್ರಾಂತಿಪಡುತ್ತಿಹಳು, ಹೀಗಿರುವುದರಿಂದ ನಾನೀಕೆಯನ್ನು ಮಾತೆಯೆಂದೇ ಭಾವಿಸಬೇಕಾಗಿಹುದು; ಏಕೆಂದರೆ, ಎನ ಗಿಂತಲೂ ಮುಂಚೆ ಈಕೆಗೂ ಮಹಾರಾಜನಿಗೂ ಪರಸ್ಪರಾನುರಾಗವು ಉಂಟಾಗಿರ್ದುದು; ಅದಲ್ಲದೆ ರಾಜನು ಧಿಕ್ಕರಿಸಿರ್ದರೂ ಈಗಲೂ ಅವ ನನ್ನೇ ಹಂಬಲಿಸುತ್ತಿರುವುದುಂದ ಈಕೆಗೆ ಎನ್ನಲ್ಲಿ ಈಷತ್ತಾದರೂ ಅನು ರಾಗವಿಲ್ಲವೆಂದು ಸ್ಪಷ್ಟವಾಯಿತು; ಒಂದುವೇಳೆ ನಾನೀಕೆಯನ್ನು ಬಲಾ ತರಿಸಿ ಎನ್ನ ಸ್ವಾಧೀನಪಡಿಸಿಕೊಂಡರೂ, ಅಲ್ಲಿಗೂ ಅನರ್ಥವು ಪ್ರಾಪ್ತ ವಾಗುವುದೇ ಹೊರತು ದಾಂಪತ್ಯಾನುಕೂಲವೆಂದಿಗೂ ಲಭಿಸದು; ಇದ ರಿಂದ ನಾನು ಅನೇಕವಿಧವಾದ ದುಃಖವನ್ನೂ ನಷ್ಟವನ್ನೂ ಹೊಂದು ವೆನೇ ಹೊರತು ಆವಸುಖವೂ ಸರ್ವಥಾ ಲಭಿಸದು; ಆದಕಾರಣ ಇವಳ ಪಾತಿವ್ರತ್ಯಕ್ಕೆ ಭಂಗವನ್ನುಂಟುಮಾಡದೆ 'ಮಾತೃಭಾವನೆಯನ್ನು ತಳೆದು, ರಾಜನಲ್ಲಿ ನಡೆದ ಸಂಭಾಷಣೆಯನ್ನು ತಿಳುಹಿ, ಅವಳನ್ನೇ ರಾಜನಲ್ಲಿಗೆ ಕಳುಹುವೆನು.” ಎಂದು ಸಿದ್ದಾಂತಮಾಡಿಕೊಂಡ ಬಳಿಕ ಅವಳನ್ನು ಕುರಿತು ಭಕ್ತಿಗೌರವಗಳಿಂದ
ಎಲೌ ಸಾಧಿಯೆ ಅಂಜಬೇಡ, ನಿನ್ನ ಅಂತರಂಗಚಿಂತೆಯನ್ನು ನಾನು ಬಲ್ಲೆನು.” ಎಂದು ಹೇಳಲು ಉನ್ಮಾದಿ ನಿಯು ತನ್ನ ರಹಸ್ಯವೆಲ್ಲವೂ ಇವನಿಗೆ ತಿಳಿದು ಬಂದುದರಿಂದ ಇವನೀ ರೀತಿ ಹೇಳುವನೆಂದು ತಪ್ಪಾಗಿ ತಿಳಿದುಕೊಂಡು ವಿಕಲ್ಪದಿಂದ:-( ಆಯ್ಕೆ!