ಪುಟ:ಧರ್ಮಸಾಮ್ರಾಜ್ಯಂ.djvu/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಲ್ಕನೆಯ ಅಂಗ ೧೩೩. ಎಂದ ಒಳಿಕ ಚಿತ್ರನು ಗುಪ್ತನ ಈು ಕುರಿತು ತವಕಡಿಂದ: (“ಅಡ್ಡಿಯೇನು ? ಈ ರೀತಿಯಾದ ಸ್ವಧರ್ಮಪರಾಯಣತೆಯನ್ನು , ಹಿಂದೆ ನೋಡಿದ ದೇಶಗಳಲ್ಲಿಯೇ ಆಗಲಿ, ಎಮ್ಮ ದೇವಲೋಕದಲ್ಲಿಯೇ ಆಗಲಿ, ಆರೂ ಕಂಡೂ ಇಲ್ಲ; ಅಥವಾ ಕೇಳಿಯೂ ಇಲ್ಲ. ಬೇಗನಡೆ! ಅದ್ಭುತ ವಾದೀ ಚಾರಿತ್ರ್ಯವನ್ನು ದೇವರಾಜನಿಗೆ ತಿಳುಕೋಣ.” ಎಂದು ಹೇಳಲು, ಗುಪ್ತನು ಕುತಾಹಲದಿಂದ:_ ಚಿತ್ರನೆ! ಹಾಗೇ ಮಾಡೋಣ; ಆದರೆ, ಇವರುಗಳು ಪ್ರಾಣಹತ್ಯೆಯಂ ಮಾಡಿಕೊಂಡ ವಿಷಯವನ್ನು ಪ್ರರೋಹಿ ತಸೀಲಕ್ಷಣಜ್ಞರಿಗೂ ಉನ್ಮಾದಯನ್ತಿಯ ಮಾತಾ-ಪಿತೃಗಳಿಗೂ ಮತ್ತಾ ಕುರುಬನಿಗೂ ತಿಳುಹಿದರೆ, ಅವರೇನು ಮಾಡುವರೆ ಅದನ್ನೂ ಪರಿಕ್ಕಿ ಸಿಕೊಂಡು, ಬಳಿಕ ಎನ್ನ ಸುರಲೋಕ್ಕೆ ಹೋಗೋಣ. ” ಎಂದು ಹೇಳಲು ಈರ್ವರೂ ಅಲ್ಲಿಂದ ತೆರಳಿ, ಅದರಂತೆಯೇ ಅವರುಗಳಿಗೆ ತಿಳು ಹಲು, ಅವರುಗಳೂ ದುಃಖವನ್ನು ಸಹಿಸಲಾರದೆ ಪ್ರಾಣಗಳನ್ನು ತ್ಯಜಿಸಿ ಬಿಟ್ಟ ರು. ಇದಾದ ಬಳಿಕ ಚಿತ್ರನೂ ಗುಪ್ತನೂ ಸುರಲೋಕವನ್ನು ಕುರಿತು ಅಂತರಿಕ್ಷವನ್ನಡರಿದರು. ನಾಲ್ಕನೆಯ ಅಂಗವು ಮುಗಿದುದು. مسعدمح۔ ಐದನೆಯ ಅಂಗ. ಒಂದನೆಯ ಸಂಧಿ. NO WRONG IS EVER BOLD ಅಧರ್ಮದೌರ್ಬಲ್ಯ. ಇತ್ತಲಾ ದೇವೇಂದ್ರನು ವೈಜಯಂತಪ್ರಾಸಾದದಗ್ರದಲ್ಲಿರುವ ಸು ಧರ್ಮಾಖ್ಯಸಭೆಯೊಳ್ ಶಚೀದೇವಿಯಿಂದ ಸಮೇತನಾಗಿ ಧರ್ಮಾಸನದಲ್ಲಿ ಕುಳಿತು, ರಂಭಾಪಿ ಅಪ್ಪರೆಯರ ನೃತ್ಯಗೀತಗಳ ಮಾಧುರ್ಯವನ್ನನು