ಪುಟ:ಧರ್ಮಸಾಮ್ರಾಜ್ಯಂ.djvu/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಲ್ಕನೆಯ ಅಂಗ ೧೩೫ ಅವನ ಮುಂದಿಟ್ಟರು. ಬಳಿಕ ಇಂದ್ರನು ಅದನ್ನು ತೆಗೆದು ಓದಿಕೊಂಡ ಬಳಿಕ ವಿನ್ನನಾಗಿ ವ್ಯಸನದಿಂದ:- ಅಯ್ಯೋ ! ಈಗೇನು ಮಾಡಲಿ ?' ಎಂದು ಶುಕ್ರನನ್ನು ನೋಡಿ:-1( ಶುಕ್ರನೇ ! ಎನನ್ನು ಉಳುಹುವುದಕ್ಕೆ ಇಲ್ಲೇನಾದರೂ ಅವಕಾಶವಿರುವುದೆ ? ನೋಡು. ” ಎಂದು ಹೇಳಿ ಶೋಕಿಸಲುಪಕ್ರಮಿಸಿದುದನ್ನು ನೋಡಿದ ಶಚೀದೇವಿಯು, ವ್ಯಸನಂ ಡವಳಾಗಿ ಪತಿಯನ್ನು ಕುರಿತು:- ದೇವ ! ನೀನೇಕಿಂತು ದುಃಖಿಸುವೆ ? ಪ್ರಪಂಚದಲ್ಲಿ ಅವಸಂಪದವೂ ಶಾಶ್ವತವಲ್ಲ, ನಾವೂ ಈ ಅಧಿಕಾರದಲ್ಲಿ, ಪ್ರಾಪಂಚಿಕ ಸುಖವನ್ನು ಬಹುಕಾಲ ಅನುಭವಿಸಿದೆವು: ಅರ್ಹರಾದವ ರಿನ್ನಾರಾದರೂ ದೊರೆತರೆ ಮರ್ಯಾದಾಪುರಸ್ಸರವಾಗಿ ನಾವುಗಳೇ ಅವರಿ ಗೆಮ್ಮ ಅಧಿಕಾರವನ್ನು ವಹಿಸಿ, ಅವರ ಕೃತಜ್ಞತೆಯನ್ನು ಅರ್ಜಿಸೋಣ, ಅದ ಲ್ಲದೆ, ಈ ಚಿಂತಾಮಯವಾದ ಭಾರದಿಂದ ವಿಮುಕ್ತರಾಗಿ, ಧರ್ಮಾಶ್ರಯ ಬಲದಿಂದ ಮುಂದಿನ ಶ್ರೇಯೋಮಾರ್ಗಕ್ಕನುಕೂಲಿಸುವ ಶಾಂತಿಸುಖ ವನ್ನನುಭವಿಸೋಣ. ಎಂದು ಸಮಾಧಾನಪಡಿಸಿದಳು, ಬಳಿಕ ಶುಕ್ರನು ಸಂತೋಷದಿಂದೆದ್ದು:-It ಸಹಸ್ರಾಕ್ಷನೇ ! ಅಂಜದಿರು; ದಂಡನೀತಿಗನು ಸಾರವಾಗಿ, ಅವರುಗಳ ನಡೆತೆಯಲ್ಲಿ ಅನೇಕ ದೋಷಗಳು ಕಂಡುಬರು ವವು; ನಾನವುಗಳನ್ನು ಎತ್ತಿತೋರುವೆನು; ನೀನೇ ಅವುಗಳನ್ನೆಲ್ಲ ವಿಚಾರಿ ಸುವ ಅಧಿಕಾರವನ್ನು ವಹಿಸಿ, ಎನ್ನ ಅಭಿಪ್ರಾಯಗಳನ್ನೆಲ್ಲ ಅನುಮೋದಿ ಸಿಬಿಡು; ಆಗ್ಗೆ ಯಮನು ಅವರುಗಳನ್ನು ಹಿಂದಿನವರಂತೆ ನರಕಕ್ಕೇ ತಳ್ಳಿ ಬಿಡುವನು; ಆಗ್ಗೆ ನಿನ್ನ ಶತ್ರು ನಾಶವಾಗುವುದರಿಂದ ನಿನ್ನಾಧಿಪತ್ಯಕ್ಕೆ ಚ್ಯುತಿಯೇ ಉಂಟಾಗಲಾರದು. ” ಎಂದು ಅಟ್ಟಹಾಸದಿಂದ ಹೇಳಲು; ಇದನ್ನು ಕೇಳಿದ ಬೃಹಸ್ಪತಿಯು, ಈ ಅಧರ್ಮಾಲೋಚನೆಯನ್ನ ರಿತು ಸಹಿಸಲಾರದೆ ಇಂದ್ರನನ್ನು ಕುರಿತು ವಿನಯದಿಂದ: ದೇವೇ ಶ್ವರನೇ ! ಈ ಶುಕ್ರನು, ಧರ್ಮರಹಸ್ಯವನ್ನೂ ಮುಂದಣ ಸರಿಣಾಮ ವನ್ನೂ ತಿಳಿಯದೆ, ನಿನಗೆ ಹಿತವನ್ನು ಂಟುಮಾಡಬೇಕೆಂಬ ಮನೋ ತ್ಸಾಹವನ್ನು ಮಾತ್ರವೆ ಹೊಂದಿ, ಅದುಂದುಂಟಾಗುವ ಅಪಕೀರ್ತಿ