ಪುಟ:ಧರ್ಮಸಾಮ್ರಾಜ್ಯಂ.djvu/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಐದನೆಯ ಅಂಗ ೧೪೬ 3] • : ೧೧ • • • : ಗಿದುಕೊಂಡು:-ಬ್ರಹ್ಮದೇವನೇ! ನಾನು ಮಲೋಕದಲ್ಲಿ ಎಮ್ಮ ಮಹಾರಾಜನ ರಾಷ್ಟ್ರದ ಪ್ರಜೆಯಾಗಿಯ, ರಾಜಭಕ್ತಿನಿರತನಾ ಗಿಯ, ರಾಜಕಾರ್ಯಕ್ಕಾಗಿ ತನುಧನಪ್ರಾಣಗಳನ್ನು ಹಿಂದೆಗೆಯದೆ ಅರ್ಪಿಸುವ ಸತ್ನ ಚಾಸಂಪತ್ತಿಯುಳ್ಳವನಾಗಿಯೂ ಎಂತಿರ್ದೆನೋ, ಆದ ರಂತೆಯೇ, ಈಗಲೂ ಮುಂದಿನ ಜನ್ಮಗಳಲ್ಲಿಯ ಆಗುವಂತೆ ಎನಗೆ ವರ ವನ್ನು ಅನುಗ್ರಹಿಸಬೇಕೆಂದು ಬೇಡುವೆನು. ” ಎಂದು ಪ್ರಾರ್ಥಿಸಿದನು. - ಇವನಂತೆಯೇ ಆ ದ್ವಿಜರೀರ್ವರೂ ಎದ್ದು ನಿಂತು ವಂದಿಸಿ:- Cಪಿತಾಮಹನೇ! ಮತ್ಯಲೋಕದಲ್ಲಿ ಧರ್ಮಪ್ರಿಯನಾದ ಎಮ್ಮ ಮಹಾ ರಾಜನ ಆಸ್ತಮನಿಗಳಾಗಿಯೂ, ಅವನೆ ಮತ್ತು ಅವನ ಪ್ರಜೆಗಳ ಹಿತ ವನ್ನೆ ಬಯಸುವವರಾಗಿಯೂ, ಎಂತಿರ್ದೆವೋ ಅದರಂತೆಯೇ, ಈ ಲೋ ಕದಲ್ಲಿಯ ಮುಂದಿನ ಭವಗಳಲ್ಲಿಯ ಆಗುವಂತೆ ವರವನ್ನೆ ಮಗೆ ಕರು ಣಿಸುವನಾಗು. ” ಎಂದು ಪ್ರಾರ್ಥಿಸಿದರು. ಬಳಿಕ ಕಿರೀಟವತ್ಸನೂ ಅವನ ಭಾರ್ಯೆಯಾದ ಇಂದುಮತಿಯಲ ಎದ್ದು ನಿಂತು ಗೈನ್ಯದಿಂದ:“ಪರಮೇಷ್ಟಿಯೇ! ನಾವಾ ಭೂಲೋಕ ದಲ್ಲಿ ಎಮ್ಮ ಪ್ರಜೇಶ್ವರನ ಪುರನಿವಾಸಿಗಳಾಗಿಯೂ ರಾಜಯೋಗ್ಯವಾದ ಕಸ್ಯೆಯನ್ನು ಪಡೆದವರಾಗಿಯೂ ಎಂತಿರ್ದೆವೊ ಅದರಂತೆಯೇ, ಇಲ್ಲಿಯ ಮುಂದಿನ ಭವಗಳಲ್ಲಿಯ ಆಗುವಂತೆ ವರವನ್ನು ಅನುಗ್ರಹಿಸುವ ನಾಗು, ಎಂದು ಬೇಡಿದರು. ಅನಂತರ ಅಭಿಪಾರಗನು ಶೌರ್ಯವನ್ನು ವ್ಯಕ್ತಗೊಳಿಸುತ್ತ ಎದ್ದು ನಿಂತು, ವಿನಯದಿಂದ:-'ಕಮಲಾಸನನೇ ! ನಾನು ಮನುಷ್ಯಲೋಕ ದಲ್ಲಿ ಎನ್ನೊಡೆಯನ ಆಸ್ತಸೇವಕನಾಗಿಯ, ಪತಿ ಕಾರ್ಯಕ್ಕಾಗಿ ತನು ಧನಮನಃಪ್ರಾಣಗಳನ್ನಾದರೂ ಅರ್ಪಿಸಲು ಪ್ರಮೋದಗೊಳ್ಳ ನೃತ್ಯ ನಾ ಗಿಯೂ, ಮಹಾರಾಜನನ್ನಗಲಿ ಒಂದು ಕ್ಷಣವೂ ಜೀವಿಸತಕ್ಕವನಲ್ಲವಾ ಗಿಯ, ಎಂತಿರ್ದೆನೊ ಆದರಂತೆಯೇ, ಇಲ್ಲಿಯ ಮುಂದಿನ ಜನ್ಮಗಳ ಲ್ಲಿಯ ಆಗುವಂತೆ ಎನಗೆ ನರವನ್ನು ಕರುಣಿಸು. ” ಎಂದು ಬೇಡಿದನು.