ಪುಟ:ಧರ್ಮಸಾಮ್ರಾಜ್ಯಂ.djvu/೨೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೦ ಧರ್ಮಸಾಮ್ರಾಜ್ಯಮ್ [ಸಂಧಿ ತೋರ್ಪಡಿಸದೆ ಪರಾಕ್ರಮವನ್ನು ತೋರ್ಪಡಿಸಿದ, ಅ»ಶಸ್ತ್ರವಿಶಾರದ ರಿಂದ ಕೂಡಿದ, ತನ್ನ ಚತುರಂಗಬಲವನ್ನು ಸನ್ಮಾನಿಸದೆ, ಅಧಿಕಾರಮತ್ತ ತೆಯಿಂದ ಉಪೇಕ್ಷಿಸಿದುದೇ ಆದರೆ ಅವನು ಯುದ್ದ ಕಾಲದಲ್ಲಿ ಜಯಲ ಕೈಯಿಂದ ತಿರಸ್ಕರಿಸಲ್ಪಡುವನು, (೧೦೭) ಇಷ್ಟೇ ಅಲ್ಲದೆ ರಾಜನಾ ದವನು, ಸದಾಚಾರ ವೇದಾಧ್ಯಯನ ಯೋಗ ಇವುಗಳನ್ನರಿತ ಸಾಧುಗ ಇನ್ನೂ, ಗುಣಮಾಹಾತ್ಮಗಳಿಂದ ಶೋಭಿಸುವ ಇತರ ಸಾಧು ಪುರುಷ ರನ್ನೂ ಸತ್ಕರಿಸುವ ವಿಷಯದಲ್ಲಿ ಗರ್ವದಿಂದ ಔದಾಸೀನ್ಯವನ್ನು ವಹಿಸಿದರೆ, ಸಮಸ್ತ ಸುಗಳಿಂದಲೂ ಬಾಹಿರನಾಗುವನು.] ಆದಕಾರಣ, ಎಲೈ ರಾಜರುಗಳಿರಾ ! ನಿರಂತರವೂ ನಿಮ್ಮ ನಡತೆ ಗಳಿಗೆಲ್ಲ ಧರ್ಮವನ್ನೇ ಆಧಾರವನ್ನಾಗಿ ಇಟ್ಟು ಕೊಂಡು, ಪ್ರಜೆಗಳಿಗೆ ಹಿತ ವನ್ನುಂಟುಮಾಡುವುದರಲ್ಲಿಯೇ ಮನವುಳ್ಳವರಾಗಿ, ದಂಡನೀತಿಯನ್ನು ಪಯೋಗಿಸುವ ವಿಷಯದಲ್ಲಿ ಪಕ್ಷಪಾತವ್ಯಸನವನ್ನೂ ದ್ವೇಷವನ್ನೂ ತಾಳದೆ, ಪ್ರಜೆಗಳನ್ನೂ ನಿಮ್ಮನ್ನೂ ಮತ್ತು ಲೋಕಗಳನ್ನೂ ಕೂಡ ಪರಿಪಾಲಿಸುವರಾಗಿರಿ.” ಎಂಬದಾಗಿ ಬೋಧಿಸಿದ ದಿವ್ಯರಾಜಧರ್ಮವನ್ನು ಕೇಳಿದ ಬಳಿಕ ಅ ರಾಜರುಗಳೆಲ್ಲರೂ ಸಂತುಷ್ಟರಾಗಿ, ಮಹಾತ್ಮನಾದೀಬೋಧಿಸತ್ವನನ್ನು ಕುರಿತು ಭಕ್ತಿವಶದಿಂದ:-ಮಹಾತ್ಮನೇ! ನಿನ್ನೆ ಧರ್ಮೋಪದೇಶದಿಂದ ಎಮ್ಮ ಅಜ್ಞಾನಾಂಧಕಾರವೆಲ್ಲವೂ ತೊಲಗಿ ಶುದ್ಧರಾದೆವು ; ನಾವು ಭೂಲೋ ಕದಲ್ಲಿ ಪುನಃ ರಾಜರಾಗಿ ಆವಾಗ ಜನಿಸುವೆವು ? ” ಎಂದು ಪ್ರಶ್ನೆ ಮಾಡಲು, ಬೋಧಿಸತ್ವನು: - ಎಲೈ ರಾಬುರಾ ! ನೀವು ಕೆಲಕಾಲ ಎನ್ನೊಡನೆ ಸ್ವರ್ಗಸುಖವನ್ನನುಭವಿಸಿರಿ! ಬಳಿಕ ನಾನು ಮುಂದಣ ಜನ ದಲ್ಲಿ ಕಪಿಲವಸ್ತುರಾಜ್ಯಾಧಿಪನಾದ ಶುದ್ಧೋದನಮಹಾರಾಜನ ಧರ್ಮ ಪತ್ತಿ ಯಾದ ಮಾಹಾಮಾಯಾದೇವಿಯ ಗರ್ಭದಲ್ಲಿ ಎನ್ನ ಅನ್ಯಜನ್ನ ತಥೈವ ಶೀಲಶ್ರುತಯೋಗಸಾಧುಷು ಪ್ರಕಾಶಮಾಹಾತ್ಮಗುಣೇಸು ಸಾಧುಷು | ಚರನ್ನವಜ್ಜಮಲಿನೇನ ವತನಾ ನರಾಧಿಪಃ ಸರ್ವಸುಖ್ರ್ವಿರುಧ್ಯತೆ ||೧೦೭||