ಪುಟ:ಧರ್ಮಸಾಮ್ರಾಜ್ಯಂ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ಂ ಧರ್ಮಸಾಮ್ರಾಜ್ಯಮ್ [ಸಂಧಿ ತ್ಮರಿಂದ ನಿಯಮಿತವಾದ ರಾಜಧರ್ಮಕ್ಕೆ ಅನುಸಾರವಾಗಿ ನಡೆದು, ಅದ ರಿಂದ ಎನ್ನ ಕರ್ತವ್ಯವನ್ನು ನೆರವೇರಿಸಿರುವೆನೇ ಹೊರತು ಮತ್ತೇನೂ ಇಲ್ಲವು, ಅದಲ್ಲದೆ ಉನ್ನತವಾದೊಂದು ಸೌಧವು, ನಿರಪಾಯವಾಗಿಯ ಸ್ಥಿರವಾಗಿಯೂ ನಿಲ್ಲಬೇಕಾದರೆ ಭಿತ್ತಿ ಸ್ತಂಭ ಲೋವೆ ವೇದಿಕೆ ಮುಂ ತಾದುವುಗಳ ಪರಸ್ಪರಾನುಕೂಲ್ಯವುಳ್ಳ ಸಾಹಾಯ್ಯವೆಂತು ಅವಶ್ಯಕವೋ ಅದರಂತೆ, ಎನ್ಸಿ ರಾಜ್ಯ ರಕ್ಷಣೆಗೆ ಏಕಾಭಿಮತವುಳ್ಳ ನೀವುಗಳಲ್ಲದೆ ಸಹಾ ಯಕರು ಮತ್ತಾರಿರುವರು ? ನೀವುಗಳೆಲ್ಲ ಎನ್ನನ್ನು ನಿಮ್ಮ ಮುಖ್ಯ ನೆಂದು ಭಾವಿಸಿ, ಅನೇಕಮಕ್ಕಳುಳ್ಳ ತಂದೆಯ ಪುತ್ತುಪಾಲನಾ ಕಾರ್ಯ ಗಳಿಗೆ, ಪ್ರಾಪ್ತವಯಸ್ಕರಾದ ಹಿರಿಯ ಮಕ್ಕಳೆಂತು ಸಹಾಯಕರಾಗು ವರೋ ಅದರಂತೆಯೇ, ಎನ್ನು ಳಿದ ಪ್ರಜೆಗಳನ್ನು ರಕ್ಷಿಸುವ ಕಾರ್ಯಗಳಲ್ಲಿ .ಎನಗೆ ಸಹಾಯವನ್ನು ಮಾಡುತ್ತಲೇ ಇರುವಿರಿ, ಆ ವಿಷಯವಾಗಿ ನಿಮ್ಮಲ್ಲಿ ಎನ್ನ ಪ್ರೀತಿಮಮತೆಗಳು ವರ್ಧಿಸುತ್ತಿರುವುವು, ಮತ್ತು ನಾನು. ನಿಮಗೆ ಕೃತಜ್ಞನಾಗಿಯೂ ಇರುವೆನು ? ಬಳಿಕ ಅಭಿಪಾರಗನು ಮರಳಿ ತನ್ನಾ ಸನದಿಂದೆದ್ದು ಕೈಮುಗಿದು ಕೊಂಡು, ರಾಜಭಕ್ತಿಪರವಶನಾಗಿ ಈರೀತಿ ಗೌರವೋಕ್ತಿಗಳನ್ನಾಡಿದನುದೇವ! ನೀನು ಹಾಗೆ ಹೇಳಲಾಗದು; ನೀನೆಮ್ಮ ಪ್ರತ್ಯಕ್ಷದೈವವು; ಮತ್ತು ತಂದೆಯಂತೆ ವಂದ್ಯನು, ಇದಲ್ಲದೆ ದೇಹಕ್ಕೆ ಪ್ರಧಾನವಾದ ಶಿರವ ಇಲ್ಲದಮೇಲೆ ಉಳಿದ ಅಂಗಗಳು ಎಷ್ಟು ಬಲವಾಗಿರ್ದರೂ ಎಂತು ನಿಷ್ಪ ಯೋಜಕವಾಗುವುವೋ ಅದರಂತೆ, ಎಮ್ಮೆಲ್ಲರಿಗೂ ಶಿಖರಪ್ರಾಯನಾದ ನೀನುಮುಖ್ಯವೇ ಹೊರತು ನಾವುಗಳೆಂದಿಗೂ ಅಲ್ಲವು, ಇಂದ್ರಿಯಗಳು ತಂತಮ್ಮ ವ್ಯಾಪಾರಗಳನ್ನು ಜೀವಾತ್ಮನ ಪ್ರೇರಣಬಲದಿಂದ ಎಂತು ನಡೆ ಸುವುವೋ ಅದರಂತೆ ನಾವುಗಳೆಲ್ಲರೂ ನಿನ್ನ ಅನುಜೀವಿಗಳು.' ಬಳಿಕ ದೇವಸೇನಮಹಾರಾಜನು ಇಂತೆಂದನು:- ಎಲೈ ಅಭಿ ಪಾರಗನೇ! ನಿಮ್ಮ ಭಕ್ತಿಗೂ ಸ್ವಾಮಿಕಾರ್ಯಾಸಕ್ತಿಗೂ ಮೆಚ್ಚಿದೆನು.” ಎಂದು ಹೇಳಿದಬಳಿಕ ಪ್ರಜಾಪ್ರಮುಖರನ್ನು ಕುರಿತು ಈರೀತಿ ಪ್ರೀತಿಪೂ