ಪುಟ:ಧರ್ಮಸಾಮ್ರಾಜ್ಯಂ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೊದಲನೆಯ ಅಂಗ ೧ ವನ್ನು ಮಾಡುವವನು ತಾನೇಆಗಿರ್ದರೂ ಕ್ಷಮಾಗುಣವೇ ವ್ರತವುಳ್ಳವನಾ ಗಿಯ, ಯೌವನಸಮನ್ವಿತನಾಗಿರ್ದರೂ ಚಿಂತೇಂದ್ರಿಯನಾಗಿಯ ಇರುವನು, (೧೫) ಎಮ್ಮಿ ಮಹಾರಾಜನ ಧರ್ಮಬದ್ಧ ವಾದ ನೀತಿಯು ತನ್ನ ಬಂಧುಗಳಲ್ಲಿಯೂ ಇತರ ಪ್ರಜೆಗಳಲ್ಲಿಯ ಸಮಾನೋಪಯೋಗ ವುಳ್ಳವಾಗಿರುವುದರಿಂದ, ಪ್ರಜೆಗಳಿಗೆ ತೃಪ್ತಿಯನ್ನುಂಟುಮಾಡಿ, ಅವರು ಅಧರ್ಮಕಾರ್ಯಗಳಲ್ಲಿ ಪ್ರವೇಶಿಸಲು ಅವಕಾಶವನ್ನೀಯದೆ (ರಾಜ ಪ್ರಜೆಗಳೀರ್ವರಿಗೂ) ಸ್ವರ್ಗಕ್ಕೆ ಹಾಕಿದ ಸೋಪಾನಸಂಖ್ಯೆಯೋ ಎಂಬಂ ತಾಗಿರುವುದು (೧೬)ಮತ್ತಮ್ಮ ಮಹಾರಾಜನು ತನ್ನ ಪ್ರಜೆಗಳನ್ನು ದುಃಖ ಗೊಳಿಸಲು ಯತ್ನಿಸಿದ (ದಾರಿದ್ರರೋಗಗಳೆಂಬ) ಶತ್ರುಗಳ ಗರ್ವವನ್ನು ಸಹಿಸದವನಾಗಿ, ತನ್ನ ಕಾರುಣ್ಯವೆಂಬ ಮಹಾಧನಸ್ಸನ್ನು ಹಿಡಿದು, (ಧನ ಧಾನ್ಯ ಔಷದಿ) ಗಳೆಂಬ ಬಾಣಂಗಳ ಮಳೆಗರೆಯುತ್ತ ಅವರುಗಳೊಡನೆ ಯುದ್ಧ ಮಾಡುವುದರಲ್ಲಿಯೇ ನಿರತನಾಗಿರುವನು] ಬಳಿಕ ಚಿತ್ರನು ಗುಪ್ತನನ್ನು ಹಿಂದಿಟ್ಟು, ಕುರುಬನನ್ನು ಕುರಿತು ಕುತೂಹಲದಿಂದ ಇಂತೆಂದನು:-“ಮಿತ್ರನೇ ! ನಿನಗೆ ಗೀರ್ವಾಣಭಾಷೆ ಯಲ್ಲಿಯ ಪರಿಚಯವಿರುವುದನ್ನು ತಿಳಿದು ಸಂತುಷ್ಟರಾದೆವು. ನೀನಿ ದನ್ನು ಹೇಗೆ ಕಲಿತೆ? ” ಕುರುಬ:-“ಎಮ್ಮ ಮಹಾರಾಜನು ತನ್ನ ಪ್ರಜೆ ಗಳಲ್ಲಿ ಓರ್ವನೂ ಅವಿದ್ಯಾವಂತನಾಗಿರಕೂಡದೆಂಬುದಾಗಿಯ ದೇವ ಭಾಷೆಯನ್ನು (ಸಂಸ್ಕೃತವನ್ನು ) ಸರ್ವರೂ ಕೂಡಿದಮಟ್ಟಿಗೂ ತಿಳಿದಿರ ಬೇಕೆಂಬುದಾಗಿಯೂ ಆಜ್ಞೆ ಮಾಡಿರುವುದರಿಂದ, ಪಶುಪಾಲಕನಾದ ಎನಗೆ ಸಂಸ್ಕೃತಭಾಷೆಯಲ್ಲಿ ಸಂಪೂರ್ಣಪಾಂಡಿತ್ಯವಿಲ್ಲದಿರ್ದರೂ ಸ್ವಲ್ಪಮಟ್ಟಿಗೆ ತಿಳಿಯುವುದು.” ಚಿತ್ರ:- ನೀನು ಇಷ್ಟು ವಿದ್ಯಾವಂತನಾಗಿರ್ದರೂ ಇನ್ನೂ ಪ್ರಾಕೃತನಂತೆ ಪಶುಪಾಲಕನವೃತ್ತಿಯನ್ನೇ ಅವಲಂಬಿಸಿರುವೆ? ಕುರುಬ:- ಇದು ಎನ್ನ ಕುಲವೃತ್ತಿಯು; ಇದನ್ನು ಬಿಟ್ಟು ಪರಕರ್ಮ ವನ್ನು ಅವಲಂಬಿಸುವುದು ಕುಲಪುತ್ರರಿಗೆ ಯೋಗ್ಯವೆ ? ಅದಲ್ಲದೆ ಪ್ರಜೆ ಗಳು ಅನುಭವಸಿದ್ದ ವಾದ ಸ್ವವೃತ್ತಿಗಳನ್ನು ತ್ಯಜಿಸಿ ಅಪರಿಚಿತವಾದ