ಪುಟ:ಧರ್ಮಸಾಮ್ರಾಜ್ಯಂ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೊದಲನಯ ಅಂಗ ೨೧ wwwmmm wwwxxxx ಇದನ್ನು ಕೇಳಿದೊಡನೆಯೇ ಕುರುಬನು, ಕೈಗೊಡಲಿಯನ್ನು ಕೆಳ ಗಿಟ್ಟು ಅತಿದೈನ್ಯದಿಂದೀರೀತಿ ಪ್ರಾರ್ಥಿಸಿದನು:-* ಪೂಜ್ಯರೇ ! ಮಧ್ಯಾ ಈ ಕಾಲವಾಗಿರುವುದು ; ಈಗೆನ್ನ ಆತಿಥ್ಯವನ್ನು ಕೃಪೆಯಿಂದ ಸ್ವೀಕರಿಸಿ, ಎನ್ನ ಧರ್ಮಕ್ಕೆ ಸಾಚಿತ್ಯವನ್ನು ಮಾಡಬೇಕೆಂದು ಬೇಡುವೆನು; ಇದೆ ಅಲ್ಲಿ ಕಾಣುವುದೇ ಎನ್ನ ಕುಟೀರವು ; ಬಿಜಯಮಾಡಬೇಕು ; ನಾನೂ ಚದರಿಹೋಗಿರುವ ಈ ದನಕುರಿಗಳನ್ನು ಅಟ್ಟಿ ತರುವೆನು. " ಚಿತ್ರ:- “ ಒಳ್ಳೆಯದು ! ನೀನು ಮುಂಚಿತವಾಗಿ ನಡೆ ; ನಾವೂ ಹಿಂದೆಬರುವೆವು..? ಎಂದು ಹೇಳಲು ಕುರುಬನು ನಮಸ್ಕರಿಸಿ ಅತ್ತ ತೆರಳಿದ ಬಳಿಕ, ಚಿತ್ರ ನನ್ನು ಕುರಿತು ಪರಮ ವಿಸ್ಮಯದೊಡನೆ ಇಂತೆಂದನು:- 66 ಚಿತ್ರನೇ ! ಈ ಕುರುಬನ ಧೈರ್ಯವನ್ನೂ ವಿದ್ಯಾಪ್ರೌಢಿ ಮೆಯನ್ನೂ ನೆಲೆಗೊಂಡಿರುವ ರಾಜಭಕ್ತಿಯನ್ನೂ ವಿನಯಾದಿ ಗುಣಸಂಪ ತಿಯನ್ನೂ ನೋಡಿದೆಯಾ ! ಇಂತಹ ಪ್ರಜೆಗಳನ್ನು ಪಡೆದಿರುವ ಈ ಭೂಪಾಲನು ಇನ್ನೆಂತಹ ಮಹಾತ್ಮನಾಗಿರಬೇಕು ! ನಾವು ಹಿಂದೆನೋ ಡಿದ ರಾಜ್ಯಗಳಲ್ಲಿನ ಪಳ್ಳಿಕಾರರು ನಮ್ಮನ್ನು ದೂರದಿಂ ನೋಡಿದೊಡನೆ ಯೇ ಭೀತರಾಗಿ ಓಡಿಹೋದರು; ಮತ್ತೆ ಕೆಲವು ಪ್ರದೇಶಗಳಲ್ಲಿ ಎಮ್ಮ ದೇವಭಾಷೆಗಳನ್ನು ಕೇಳಿದೊಡನೆಯೇ ಭಯಗ್ರಸ್ತರಾಗಿ, ಮಾತನಾಡ ತೋರದೆ, ನಡುಗುತ್ತ ಭೂತಗ್ರಸ್ತರಂತೆ ಸ್ತಬ್ಧವಾಗಿ ತದ್ವಾರಾ ತಮ್ಮ ಮೌಡ್ಯವನ್ನೂ ಅನಾರ್ಯತ್ವವನ್ನೂ ಪ್ರಕಾಶಗೊಳಿಸಿದರು; ಇಲ್ಲಿ ಕುರುಬನಾದರೆ, ನಮ್ಮ ಸಂಸಾಮಾನ್ಯರಿಗಿಂತಲೂ ಪ್ರೌಢನಾಗಿಯ ಧೈರ್ಯಶಾಲಿಯಾಗಿಯ, ಆರ್ಯವಿಹಿತವಾದ ಸದಾಚಾರಗಳನ್ನು ಅರಿ ತವನಾಗಿಯೂ ಇರುವನು, ಮುಖ್ಯವಾಗಿ ಈ ರಾಜ್ಯದಲ್ಲಿ ಪ್ರಜೆಗಳಿಗೆ ಜೋರರಿಂದಾದರೂ, ಘೋರಕೃತ್ಯಗಳನ್ನು ಎಸಗುವ ರಾಕ್ಷಸಸದೃಶರಾದ ದುಷ್ಟರಿಂದಾದರೂ, ಅಧಿಕಾರಮತ್ತರಾದ ರಾಜಕರಿಂದಾದರೂ, ಲಂಚವ ಣಿಗರಾದ ಸೇವಕರಿಂದಾದರೂ, ಭೀತಿಯೇ ಆಗಲಿ ಉಪದ್ರವವೇ ಆಗಲಿ ಸ್ವಲ್ಪವೂ ಇಲ್ಲ ಎಂದು ತೋರುವುದು ಮತ್ತಿದು ಇದೇಶದ ರಾಜನ ಆಜಾ