ಪುಟ:ಧರ್ಮಸಾಮ್ರಾಜ್ಯಂ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಿ] ಎರಡನೆಯ ಅಂಗ ೨೯

  • * *

• ••••••••••••••••••• ••••wrnersey ಜ ರಾಜನಿಗೆ ಸೇರಿಸುವುದು ಅಯುಕ್ತವು !” ಎಂದು ಆಲೋಚಿಸಿದ ಬಳಿಕ ಸ್ತ್ರೀಲಕ್ಷಣಜ್ಞನನ್ನು ಕುರಿತು:-“ ಮಿತ್ರನೇ ! ಈ ಕಸ್ಯೆಯನ್ನು ಮಹಾ ರಾಜನಿಗೆ ಸೇರಿಸುವುದರಿಂದ ರಾಜ್ಯಕ್ಕೆ ಹಾನಿಯುಂಟಾಗುವಂತೆ ಎನಗೆ ತೋರುವುದು ; ಈ ವಿಷಯದಲ್ಲಿ ನಿನ್ನ ಅಭಿಪ್ರಾಯವೇನು ? ” ಎಂದು ಕೇಳಿದನು. ಈರೀತಿ ಬೆಸಗೊಳಲ್ಪಟ್ಟ ಸ್ತ್ರೀಲಕ್ಷಣಜ್ಞನು ಆಶ್ಚರ್ಯದಿಂದ:- (ಇದೇನೈ ಈರೀತಿ ಶಂಕಿಸುವೆ ? ಲಕ್ಷ್ಮಿಯನ್ನು ಎಷ್ಟು ವೂ, ಗೌರಿ ಯನ್ನು ಶಂಕರನೂ, ವಾಣಿಯನ್ನು ಪದ್ಮಜನೂ, ಪಡೆದುದರಿಂದಲ್ಲ ವೆಅವರಿಗೆ ಲಕ್ಷ್ಮೀಪತಿ ಗೌರೀಪತಿ ವಾಣೀಪತಿಗಳೆಂಬ ಮಂಗಳನಾಮಗ ಳುಂಟಾಗಿ, ಈ ದಂಪತಿಗಳ ವಾಸಸ್ರರಿಗಳು ವೈಕುಂಠ ಕೈಲಾಸ ಸತ್ಯ ಲೋಕಗಳೆಂಬ ಪ್ರಣ್ಯಭೂಯಿಷ್ಟವಾದ ಕೀರ್ತಿಯನ್ನು ಪಡೆದು, ಇವು ಗಳ ನಿವಾಸಸುಖವನ್ನು ಅನುಭವಿಸಬೇಕೆಂಬ ಕುತೂಹಲವನ್ನು ಸರ್ವ ಲೋಕದವರಿಗೂ ಉಂಟುಮಾಡಿದುವು? ಅದರಂತೆಯೇ ನಿರ್ದುಷ್ಟನಾದ ಎಮ್ಮ ಮಹಾರಾಜನು ಶಕ್ತಿತ್ರಯಸ್ವರೂಪಿಣಿಯಾದ ಈ ಕಸ್ಯೆಯನ್ನು ಸೇರಿ ಸುಖಿಸುವುದರಿಂದ ಎಮ್ಮ ಪುಣ್ಯ ಭೂಮಿಯಾದ ಭರತಖಂಡಕ್ಕೂ ಅದರ ರಾಜಧಾನಿಯಾದ ಎಮ್ಮಿರಾಜಗೃಹಕ್ಕೂ ಮಹಾಕೀರ್ತಿಯುಂ ಟಾಗುವುದಿಲ್ಲವೆ?” ಎಂದು ಹೇಳಿದನು. ಪುನಃ ಪುರೋಹಿತನು ನಗುತ್ತ:-( ಮಿತನೇ! ನೀನು ಹೇಳಿದುದೆ ಲ್ಲವೂ ನಿಜವೇ ಅಹುದು, ಆದರೆ ತ್ರಿಮೂರ್ತಿಗಳಲ್ಲಿ ಓರೋರ್ವರನ್ನು ಒಂದೊಂದು ಶಕ್ಯಂಶವು ಸೇರಲಾಗಿ ಓರೋರ್ವರೊಂದೊಂದು ಸ್ವಪರ ಹಾನಿಯನ್ನು ಂಟುಮಾಡುವವರಾದರು, ಹೀಗಿರುವಲ್ಲಿ ಶಕ್ತಿತ್ರಯಾಂಶ ವನ್ನೂ ಒಳಗೊಂಡಿರುವಳೆಂದು ನೀನು ಹೇಳಿದ ಈ ಕನೆಯನ್ನು ಮಹಾ ರಾಜನು ಸೇರಿದುದೇ ಆದರೆ, ತ್ರಿಗುಣವಾಗಿ ಸ್ವಿ ಪರಹಾನಿಗಳನ್ನು ಉಂಟುಮಾಡುವವನಾಗಬಹುದೆಂಬ ಶಂಕೆಯುಂಟಾಗುವುದು. ಇದ ಕೇನು ಹೇಳುವೆ ? ” ಎಂದು ಹೇಳಲು ಸ್ತ್ರೀಲಕ್ಷಣಜ್ಞನು ಕುತೂಹಲ