ಪುಟ:ಧರ್ಮಸಾಮ್ರಾಜ್ಯಂ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಧರ್ಮಸಾಮ್ರಾಜ್ಯಮ್ [ಸಂಧಿ ಸ ನಾಲ್ಕನೆಯ ಸಂಧಿ. THE DIVINE DISPENSATION ದೈವಿಕತಂತ್ರ ಇತ್ತಲಾ ದೇವಸೇನಮಹಾರಾಜನು, ತನ್ನಾ ಲೋಚನಾ ಮಂದಿ ರದಲ್ಲಿ ಓರ್ವನೇ ಕುಳಿತು ಸಂತೋಷದಿಂದ:-“ಎನ್ನ ಮಂತ್ರಿ ಮುಂತಾದ ಸಮಸ್ತ ಅಧಿಕಾರಿಗಳೂ ಎನ್ನ ಆಜ್ಞೆಯನ್ನೇ ಅನುಸರಿಸುವವರಾಗಿಯ, ಎನ್ನಲ್ಲಿ ಭಕ್ತಿಗೌರವಗಳುಳ್ಳವರಾಗಿ, ಪ್ರಜೆ: ಹಿತವನ್ನು ಬಯಸು ವವರಾಗಿಯ ಇರುವರು. ಆದರೂ ಅವರುಗಳು ಮಾಡುವ ಕಾರ್ಯ ಗಳು ಧರ್ಮಸಂಮತವಾಗಿಯ, ಪಕ್ಷಪಾತದರವಾಗಿಯ, ರಾಜ ಪ್ರಜೆಗಳಿಗೆ ಹಿತಕರವಾಗಿಯ, ಸ್ವಪರಾರ್ಥಃ ಶಿಷ್ಟವಾಗಿಯ: ಇರು ವವೋ ಇಲ್ಲವೋ ಎಂಬುದನ್ನು ಪರೀಕ್ಷಿಸುವುದು ಎನ್ನ ಕರ್ತವಾ ಗಿರುವುದರಿಂದ, ಅವರೆನ್ನ ಸಿದ್ಧಾಂತಕ್ಕೆ ಕಳುಹಿರುವ ವಿಜ್ಞಾಪನಾ ಪತ್ರ ಗಳನ್ನು ಓದಿನೋಡುವೆನು.” ಎಂದು ಅವುಗಳೆಲ್ಲವನ್ನೂ ಓದಿದನಂತರ ತೃಪ್ತಿಯಿಂದ:-( ಆ81 ಚಿಕ್ಕ ಅಧಿಕಾರಿ ಮೊದಲ್ಗೊಂಡು ಎನ್ನ ಮುಖ್ಯ ಮಂತ್ರಿಯ ವರೆಗಿನ ಪ್ರತಿಯೋರ್ವನ ಅಭಿಪ್ರಾಯವೂ ಪ್ರಜಾಹಿತೈಕ ಪರಾಯಣವಾಗಿಯ, ದೋಷರಹಿತವಾಗಿಯೂ ಇರುವುದು, ನಾನು ಅವರುಗಳಿಗೆ ಎಷ್ಟು ಕೃತಜ್ಞನಾಗಿರ್ದ ತೀರದು. ದಿಗ್ಗಜಗಳ ಸತ್ಯ ಸಾಹಸಗಳಿಂದ ಈ ಪೃಥ್ವಿಯು ಎಂತು ಧರಿಸಲ್ಪಟ್ಟಿದೆಯೋ ಅದರಂತೆ ಎ ಅಧಿಕಾರಿಗಳ ಬುದ್ಧಿ ಶಕ್ತಿ ಸಾಹಸಗಳಿಂದ ಈ ರಾಜ್ಯವು ಅಚಲ ಸ್ಥಾಯಿಯಾಗಿಹುದು, ಮುಖ್ಯವಾಗಿ ನಾನು ಧನ್ಯನು.” ಎಂದು ಆತ್ಮಗತವಾಗಿ ಮಾತನಾಡಿಕೊಳ್ಳುತ್ತಿರುವ ಸಮಯಕ್ಕೆ ಸರಿಯಾಗಿ ದ್ವಾರಪಾಲಕನು ಬಂದು ತಲೆವಾಗಿವಂದಿಸಿ:-« ಮಹಾರಾಜನೇ ರಾಜ ದರ್ಶನಾರ್ಥವಾಗಿ ಪುರೋಹಿತಸ್ತ್ರೀಲಕ್ಷ್ಮಣಜ್ಞರು ಬಂದಿರುವರು.” ಎಂದು ವಿಜ್ಞಾಪಿಸಲು ದೇವಸೇನನು ಸಂತೋಷದಿಂದ:- ಅವರನ್ನು ಒಳಕ್ಕೆ