ಪುಟ:ಧರ್ಮಸಾಮ್ರಾಜ್ಯಂ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೦ ಧರ್ಮಗಾಮಾ ಜ್ಯರ್ [ಸಂಧಿ ದಿಂದ ಬರೆದು ರಾಜಮುದ್ರೆಯನ್ನು ಹಾಕಿ ಪತ್ರವನ್ನು ಕಳುಹಿರುವದ ರಿಂದ, ಅದರಮೇಲೆ ತರ್ಕಮಾಡುವುದು ಪ್ರಜೆಗಳಾದೆಮಗೆ ಧಮ ವಲ್ಲ ! ಅದರಿಂದ ಹಾನಿಯೇ ಆಗಲಿ ವೃದ್ಧಿಯೇ ಆಗಲಿ ಅದನ್ನು ನ- ವ್ರ ಅನು ಭವಿಸಿಯೇ ತೀರಬೇಕು. ” ಎಂದು ಹೇಳಲು ಇಂದುವ ದು ಸಂಕಟ ದಿಂದ: ಈ ಕೃತ್ರಿಮವೆಲ್ಲ ಇಲ್ಲಿಗೆ ಪರೀಕ್ಷೆಗೆ ಬಂದಿರ್ದ ಆ ಬ್ರಾಹ ೧ರಿಂದಲೇ ನೆರವೇರಿಸಲ್ಪಟ್ಟಿರುವಂತೆ ತೋರುವುದು! ಭಕ್ತಿಗೌರವಗಳಿಂದ ಉಪಚರಿಸಿ ಕಳುಹಿಸಿದುದಕ್ಕೆ ಇದೇ ಅವರು ಮಾಡಿದ ಪ್ರತಿಫಲವ? ಎಮ್ಮ ದುಃಖವೆಲ್ಲ ಅವರಿಗೇ ಕಟ್ಟಲಿ! ಎಂದು ಕೈನೆಟ್ಟಿಗೆಗಳನ್ನು ಮುರಿಯಲು, ಕಿರೀಟವನು ಕುಪಿತನಾಗಿ: ಛೇ! ಭ್ರಷ್ಟ ಹಂಗುಸೆ! ಬ್ರಾಹ್ಮಣನಿ೦ದೆ ಯನ್ನು ಮಾಡದಿರು! ಈ ವಿಷಯದ ಒಳಮರ್ಮವ ಹೇಗಿರುವುದೊ ಏನೋ! ಅವರೇನು ಎಮಗೆ ದ್ವೇಷಿಗಳೆ ? ಸುಮ್ಮನೆ ವಿವೇಚನೆಯಿಲ್ಲದೆ ವಿಕಲ್ಪಗೊಳ್ಳದಿರು! ಮುಂದಿನ್ನಾರಿಗಾದರೂ ಕೊಟ್ಟು ವಿವಾಹವಾಡುವ ಪ್ರಯತ್ನವನ್ನು ಮಾಡಬೇಕೆ ಹೊರತು ಇತರರನ್ನು ನಿಂದಿಸಬಾರದು ? ಎಂದು ಹೇಳಿ ಗದರಿಸಲು, ಇಂದುಮತಿಯು ಹುಬ್ಬುಗಂಟಿಕ್ಕಿ “ ನಿನಗೇಕೆ ಕೋಪ ? ನಾನು ಹೋಗುವೆನು !” ಎಂದು ಹೇಳಿ ಬಿರಿಬಿರನೆ ಒಳಕ್ಕೆ ಹೊರಟುಹೋದಳು. ಆ ಬಳಿಕ ಕಿರೀಟವತ್ಸನು ಈ ದುಸ್ಸಂಭವಗಳಿಂದ ಧೈರ್ಯಗುಂದಿದ ವನಾಗಿ ಏನೂ ತೋರದೆ ಒಂದು ಕ್ಷಣಕಾಲ ಸ್ತಬ್ಬನಾಗಿರ್ದು, ಅನಂತರ ಈರೀತಿ ತನ್ನೋಳಗಾಲೋಚನೆಯಂ ಮಾಡಿಕೊಂಡನು:- ಮಹಾರಾಜ ನಾದರೋ, ಇ೬೦ರ ಮಾತನ್ನು ನಂಬಿ ಉನ್ಮಾದಿನಿಯನ್ನು ಕುಲಕಣೆಯೆಂ ದು ವರಿಸದೆ ಅನ್ಯಾಯವಾಗಿ ಧಿಕ್ಕರಿಸಿದನು; ಇವಳಾದರೂ ರಾಜನ ಹೊರತು ಇನ್ನಾ ರನ್ನೂ ವರಿಸೆನೆಂದು ಹಠವನ್ನು ಹಿಡಿದಿರುವಳು; ಮಹಾ ರಾಜನಾರೋಪಿಸಿದ ನಿಂದೆಯ ಬಂಧು ಒನರಿಗೆ ತಿಳಿದುಬಂದರೆ ಅಪಹಾ ಸ್ಯಕ್ಕೆಡೆಯಾಗುವುದು ಮಾತ್ರವಲ್ಲದೆ ಇವಳನ್ನು ಮುಂದಿನ್ನಾ ರೂ ವಿವಾ ಹಮಾಡಿಕೊಳ್ಳುದೂ ಇಲ್ಲವ: ಒಂದು ವೇಳೆ ವಿವಾಹವೇ ಬೇಡವೆಂದು