ಪುಟ:ಧರ್ಮಸಾಮ್ರಾಜ್ಯಂ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬] ಎರಡನರಯ ಅಂಗ ೪೩ •••wh ••••••••••••••••••••••n ನಾರಿಕೇಳವು ಜಲಗರ್ಭಿತವಾಗಿರ್ದರೂ ಚಿಪ್ಪಿನಿಂದ ಮುಚ್ಚಲ್ಪಟ್ಟಿರುವು ದರಿಂದ ಹೊರಗೆ ಕಠಿಣವಾಗಿ ತೋರುವಂತೆ, ಉನ್ಮಾದಿನಿಯು ಒಳಗೆ ಆನಂದರಸದಿಂದ ಭರಿತೆಯಾಗಿರ್ದರೂ ಸಹಜಲಜ್ಜೆಯಿಂದಾವೃತೆಯಾಗಿ ಮೇಲೆ ಕೋಪಗೊಂಡವಳಂತೆ ನಟಿಸುತ್ತಿರುವಳು.”ಎಂದು ಹೇಳಲು ಕುಂತ ಳೆಯು ನಗುತ್ತ ಉನ್ಮಾದಿನಿಯನ್ನು ನೋಡಿ ಸಹಾಸ್ಯಕವಾಗಿ:- “ ಸಖೀ ಉನ್ಮಾದಿನಿ ! ಮದುವೆಯಾಗುವುದಕ್ಕೆ ಮುಂಚೆಯೇ ಎಮ್ಮನ್ನು ಈ ರೀತಿ ಅಲಕ್ಷಿಸುವೆ : ಗಂಡನನ್ನು ಸೇರಿದಮೇಲೆಯಾದರೂ ಎಮ್ಮನ್ನು ದೃಷ್ಟಿಸುವುದೂ ಇಲ್ಲವೆಂದು ತೋರುವುದು; ಒಳ್ಳೆಯದು ! ನಿನ್ನ ಇಷ್ಟ ಬಂದಂತೆ ಮಾಡು ; ಸದ್ಯ ವಿವಾಹಮಂಟಪದಲ್ಲಿ ಸರ್ವರೂ ಕಾದು ಕೊಂಡಿರುವುದರಿಂದ, ನಿನ್ನಲ್ಲಿ ಪರಿಹಾಸ್ಯವಾಡಲು ಕಾಲವಿಲ್ಲ ; ಕುಳಿ ತುಕೋ, ಜಡೆಯನ್ನು ಹಾಕುವೆನು.” ಎಂದು ಇತ್ತ ತಿರುಗಿ ಕನಕಲತೆ ಯನ್ನು ಕುರಿತು ತವಕದಿಂದ:- ಎಲೌ ಕನಕಲತೆ ! ಜಾಜೇಮೊಗ್ಗಿ ನಿಂದ ಒಂದು ದಂಡೆಯನ್ನು ಜಾಗ್ರತೆಯಾಗಿ ರಚಿಸು. ” ಎಂದು ಹೇಳಿ ಉನ್ಮಾದಿನಿಯ ತಲೆಯ ಕೂದಲನ್ನು ಹಿಡಿದುಕೊಂಡಳು. ಆ ಬಳಿಕ ಉನ್ಮಾದಿನಿಯು ತನ್ನಂತರಂಗವನ್ನು ತಿಳಿಯದೆ ತನ್ನ ಸಖಿ ಯರು ಈ ರೀತಿ ಪರಿಹಾಸಮಾಡುತ್ತಿರುವುದನ್ನು ಸಹಿಸಲಾರದೆ, ಅವ ರಲ್ಲಿ ತನ್ನ ಅಂತರಂಗವನ್ನು ತಿಳುಹುವುದು ಅಯುಕ್ತವೆಂದು ಭಾವಿಸಿ, ಈ ಹಿಂಸೆಯಿಂದ ತಪ್ಪಿಸಿಕೊಳ್ಳುದಕ್ಕೆ ಇವರನ್ನು ಕಟುಭಾಷೆಗಳಿಂದ ಧಿಕ್ಕರಿಸುವುದೇ ಯುಕ್ತವೆಂದು ನಿಶ್ಚಯಿಸಿ, ತನ್ನ ತಲೆಯ ಕೂದಲನ್ನು ಹಿಡಿದಿರ್ದ ಕುಂತಳೆಯ ಕೈಯನ್ನು ಕಿತ್ತು ಬಿಸುಟು ಮುನಿಸಿನಿಂದ:- “ ಛೇ ! ತೆಗೆ ! ಎನ್ನನ್ನು ಹಿಂಸಿಸಬೇಡ ; ನಿಮ್ಮ ಮನೆಗೆ ಹೋಗಿ ಏನಾ ದರೂ ಕೆಲಸವಿರ್ದರೆ ಅದನ್ನು ಮಾಡು ; ಹೋಗು ! " ಎಂದು ಹೇಳ ಲು ಕುಂತಳೆಯು ಖಿನ್ನಳಾಗಿ ಇತ್ತ ಸರಿದು ಕೋಪದಿಂದ:- “ಎಲ್‌ ಕನಕ ಲತೆ ! ಈರೀತಿ ಇವಳು ಗಜರಿದಮೇಲೆ ಎಮಗೇನು ಇವಳಲ್ಲಿ ಕೆಲಸ ? ನಡೆ; ಹೋಗಿ ಇವಳು ಮಾಡಿದ ಅಪಮಾನವನ್ನು ಅವಳ ತಾಯಿಗೆ ಹೇಳಿ