ಪುಟ:ನಂಜಕವಿಯ ಕಪೋತ ವಾಕ್ಯಂ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫ ಕರ್ಣಾಟಕ ಕಾವ್ಯಕಲಾನಿಧಿ ಮಾನಿನಿ ಸಿಕ್ಕಿದೊ ಮಾನಭಂಗದ ದುಕ್ಕ | ತಾನೊಬ್ಬನುಳಿದೇನು ಫಲವು || ಏನೆಂಬಳಯ್ಯ ಏಣಾಕ್ಷಿ ತನ್ನರಸಿಯು | ತಾನೆನ್ನ ಬಿಟ್ಟ ನೆಂದವಳು || ೪೦ ಹಣ್ಣನೊಳ್ಳಿತ ಕಂಡು ಉಣ್ಣಳಾನಿಲ್ಲದೆ | ಹೆಣ್ಣ ನಾ ಹೇಗೆ ಮರೆಯಲಿ | ಪುಣ್ಯಳಾದೆಲೆ ನೀನು ಹರುಷಳು ಮುತ್ತೈದೆ | ಕಣ್ಣಿಲ್ಲದಂತಾದೆ ನಾನು || ೪೧ ಊಟವಿನ್ನೇತಕೆ ಯೋಲಪಿನೊಳಿಲ್ಲದೆ | ಪಾಟಿಪ ಮುಪ್ಪಿಗಾರುಂಟು || ಕೋಟಲೆ ಕೊರಲನು ಕಿತ್ತು ಗೂಡಿನ | ಗೋಟಿಗೆ ಸೊಪ್ಪಿತವಾದೆ || ೪೨ ಅಯ್ಯಯ್ಯೋ ಶಿವಶಿವ ಕಯ್ಯಾ ಸೆಹಗೊಟ್ಟಿ / ಮುಯ್ಯಾದೆ ದುಕ್ಕಕ್ಕೆ ನಾನು | ಹುಯ್ಯಲಿಟ್ಟಲವೊಡೆ ಕೇಳುವರಿಲ್ಲೆಂದು | ಬಾಯ ಬಿಟ್ಟುದು ಕಪೋತಕನು || ೪೩ ನಾಯಕಿ ಮನೆಮನೆಸೇವಕಿ ಪರಹಿದ | ದಾಯ ಕಿಮ್ಮಡಿ ಮಾಡುವಾಕೆ || ಬಾಯಾಖ* ಸತ್ತಡೆ ಮನದೆ ಚಿಂತಿಸ ಹ | ನಾಯೆಂದು ಸೀಯೆನಾನವಳ || ೪೪ ಬಡತನ ಬಂದಡೆ ಯೆಡರು ಆಪತ್ತಿಲ್ಲ | ದೆಡೆಗೆಡೆದಲ್ಲಿರುತಿರುವ | ಬಡಮನವಿಲ್ಲದೆ ಸಡಗರದೊಳಗಿಹ | ಮಡದಿಯಾದಡೆ ನಿನ್ನ ನೆನೆಯೆ || ಮಂಡಲದೊಳಗಿಲ್ಲ ಮಾನಿನಿ ನಿನ್ನ೦ತೆ | ಪಂಡಿತವಕ್ಕಿಯ ಕಾಣೆ | ಖಂಡುಗವನೆ ಮಾಡಿ ಬಳಸುವ ಸತಿ ಕುಲ | ಭಂಡೆಯಾದಡೆ ನಿನ್ನ ನೆನೆಯೆ || ೪೬ ಮಥನಿಸಿ ಮನೆಯೊಳು ಕದನ ಕಲಹದಿಂದೆ | ಮತಿಗೇಡಿತನದೊಳಗಿಹಳ ! ಗತಿಗೇಡಿ ಗಂಡನ ಖತಿಮಾಡಿ ಬೈವಂತ | ಸತಿಯಳಾದಡೆ ನಿನ್ನ ನೆನೆಯೆ || ೪೭ (ಸರಸದ) ಸಮಯದೆ ಕರೆಕರೆ ಹೋರಾಟ | ಬಿ ದೆ ಮುನಿದು ಮುನಿಸುವಳ | ಕಾಬತನದಿನುತ ಗರುವಿಸಿ ಕೊಂಡಿರ್ಪ | ತರುಣಿಯಾದಡೆ ನಿನ್ನ ನೆನೆಯೆ || ೪೮ ಗಂಡನ ಮಾತಿಗೆ ಗಣನೆಗೊಳ್ಳದೆ ಸಿರಿ | ದಂಡಲೆಯುತೆ ಕೆಲದಾಡಿ | ಕಂಡುದ ಬಯಸುತೆ ಬಹುಕಾಮದೊಳಿರ್ಪ | ಭಂಡೆಯಾದಡೆ ನಿನ್ನ ನೆನೆಯೆ || ೩೯ ಘುಡಿಘುಡಿಸುತೆ ಬಂದು ನುಡಿಗೆ ಮಚ್ಚರಿಸುವ | ತುಡುಗಣಿ ಮನದ ಪ್ರಿಯಳಿಗೆ | ನುಡಿಗೆ ನುಡಿಗೆ ಗಂಡನ ಕಡೆ ಬೈವಂತ | ಮಡದಿಯಾದಡೆ ನಿನ್ನ ನೆನೆಯೆ || ೫೦ ಹೆಡ್ಡನ ಮಾಡಿಸುತೇಡಿಸಿ ಗಂಡನ | ಕಡು ಹೊತೆ ಕಾಡುವಳ | ದಡ್ಡತನದಿ ಹೀಗೆ ಹೆಜ್ಜೆಯಾಗಿರುವಂತ | ಮಡ್ಡಿಯಾದಡೆ ನಿನ್ನ ನೆನೆಯೆ || ೫೧ ಪುರುಷಗೆ ಮಮಾತುಗಳನು ಕುಡುವಳ | ಪೆರೊಳು ದೂರುವೇಟವಳ | ಮಾತು ಪರಸಂಗ ಜಾರೆಯಾಗಿರುವಂತದುರುಳೆಯಾದಡೆ ನಿನ್ನ ನೆನೆಯೆ|| ೫೨ ಗಂಡ ಹೋಗದ ಮುನ್ನ ಮಿಂಡರ ಕರೆಯುತೆ | ಕಂಡೀಲಿ ಸಿಲುಕಿ ನೋಡುವಳ 1 ಕಂಡಕಂಡವರೊಳು ಭಂಡಾಟವಾಡುವ | ಪುಂಡೆಯಾದರೆ ನಿನ್ನ ನೆನೆಯೆ || ೫೩ ಹರೆಯದವರ ನೋಡಿ ಗುರುಕುಚವನೆ ತೊ ಸರಸವಾಡುತ್ತೆ ವಿರಹದಿ |