ಪುಟ:ನಂಜಕವಿಯ ಕಪೋತ ವಾಕ್ಯಂ.djvu/೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪೀಠಿಕೆ ಕಪೋತವಾಕ್ಯವೆಂಬ ಈ ಸಾಂಗತ್ಯದ ಗ್ರಂಥಕರ್ತನು ತನ್ನ ಹೆಸರನ್ನು ಗ್ರಂಧದಲ್ಲಿ ಎಲ್ಲಿಯೂ ಹೇಳಿಕೊಂಡಿಲ್ಲ. ಮೆ|| ರೈಸ್‌ರವರು “ ಕಂಠೀರವನರಸ ರಾಜಚುತ್ರೆ ಯನ್ನು ಒರೆದ ನಂಜಯ್ಯ ಕವಿಯೆ ಈ ಗ್ರಂಧವನ್ನೂ ಒರೆದವನೆಂದು ಹೇಳುತ್ತಾರೆ. ಕವಿಚರಿತ್ರಕಾರರೂ ಗ್ರಂಥಾನುಬಂಧದಲ್ಲಿ 60 ಕಪೋತವಾಕ್ಯಸಾಂಗತ್ಯ-ನಂಜಕ' ೧೭ನೆಯ ಶತಮಾನದಲ್ಲಿ ಹುಟ್ಟಿದ್ದು ಎಂದು ಬರೆಯುತ್ತಾರೆ, ನಮಗೆ ಸಿಕ್ಕಿದ ಪ್ರತಿಯಲ್ಲಿ ರಕ್ಷಾ ಪತ್ರದಲ್ಲಿ ಮಾತ್ರ ನಂಜಕವಿಯ ಎಂದು ಬರೆದಿದೆ. ಈ ಗ್ರಂಥಕರ್ತನು ವೀರಶೈವ ಮತದವನು. ಆದುದರಿಂದಲೇ ಗ್ರಂಥಾದಿ ಯಲ್ಲಿ ಕೋರೆಣ್ಯದಯ್ಯ, ಬಸವರಾ, ಮಡಿವಳ, ಸಪ್ಪಣ್ಣ, ಪ್ರಭುರಾಜ. ಮುಂತಾದವರನ್ನು ಸ್ಮರಿಸುವುದಲ್ಲದೆ, ಕೈಲಾಸದಿಂದ ಮರೆಮಲೆ ಪರ್ವತಕ್ಕೆ ಇಳಿದ ಒಂದು ಕಪೋತಸಕ್ರಿಯ ಮುಖಾಂತರ ಶಿವನ ಸ್ನಾನವನ್ನು ವರ್ಣಿಸಿ ಪ್ರರುಷಾ ರ್ಧದ ಕಧೆಯಾದ ಈ ಗ್ರಂಧವನ್ನು ಹೇಳಿಸಿ, ಶಿವನಿಗೆ ಗ್ರಂಧಾಂತದಲ್ಲಿ ಮಂಗಳ ಮಾಡಿರುವನು. ಮತ್ತು ತಾನು ಚಂಪಕಸಿದ್ದಲಿಂಗೇಶಗುರುವಿನ ಶಿಷ್ಯನೆಂದೂ ಗ್ರಂಥಾಂತದಲ್ಲಿ ಹೇಳಿರುವನು. ಈ ಕವಿಯು “ ಕಂಠೀರವನರಸರಾಜ ಚತ್ರೆ' ಯನ್ನು ಬರೆದವನೇ ಆಗಿದ್ದ ಪಕ್ಷದಲ್ಲಿ ಕಂಠೀರವನರಸರಾಜ ಒಡೆಯರ (ಕ್ರಿ. ಶ. ೧೬೩೮-೧೬೨೪೮) ಸಮಾನಕಾ ಲಿಕನಾಗಿ, ಎಂದರೆ ೧೨ ನೆಯ ಶತಮಾನದ ಪೂರ್ವಭಾಗದಲ್ಲಿ ಇದ್ದಿರಬೇಕು. ಗ್ರಂಧದ ಶೈಲಿಯನ್ನು ನೋಡಿದರೆ ೧೨ ನೆಯ ಶತಮಾನಕ್ಕಿಂತ ಹಿಂದಕ್ಕೆ ಈ ಗ್ರಂಧದ ಕಾಲವನ್ನು ನೂಕುವುದಕ್ಕಾಗುವುದಿಲ್ಲ. ಕವಿಡುತ್ರಕಾರರೂ, ಮೆ|| ರೈಸ್‌ರವರೂ ಈ ಕಪಿಯು ೧೭ ನೆಯ ಶತಮಾನದವನೆಂದು ಅಭಿಪ್ರಾಯಪಟ್ಟಿದ್ದಾರೆ. ಕಪೋತವಾಕ್ಯದ ಇತಿಹಾಸವು ಬಹಳ ಪುರಾತನ ಕಾಲದಿಂದ ನಮ್ಮ ಭರತ ಖಂಡದಲ್ಲಿ ಪ್ರಚಾರದಲ್ಲಿದೆ. ವಾಲ್ಮೀಕಿ ಕೃತ ಶ್ರೀಮದ್ರಾಮಾಯಣದಲ್ಲಿ ಶರಣಾ ಗತರಕ್ಷಣವು ಯಾರಿಗೂ ಅವಶ್ಯ ಕರ್ತವ್ಯವು ಎಂದೂ ಶರಣಾಗತನಾದ ವಿಭೀಷಣ ನನ್ನು ತಾನು ಬಿಡಕೂಡದು ಎಂದೂ ನಿರೂಪಿಸುವ ಸಮಯದಲ್ಲಿ ಶ್ರೀರಾಮಚಂ