ಪುಟ:ನಡೆದದ್ದೇ ದಾರಿ.pdf/೩೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಿರುಕಾದಂಬರಿಗಳು/ಶೋಷಣೆ,ಬಂಡಾಯ ಇತ್ಯಾದಿ... ಬರಬೇಕಾಗೇದ.ಈ ಪ್ರೋಗ್ರ್ಯಾಮಿನಿಂದ ಬಂದ ರೂಕ್ಕಾ ಎಲ್ಲಾ ಅನಾಥಾಶ್ರಮಕ್ಕೆ ಕೊಡವ್ರಿದ್ದೀವಿ.ಸುಮಾರು ಎರಡು ಸಾವಿರ-ಮೂರು ಸಾವಿರ ಆದೀತು ಕಲೆಕ್ಷನ್ನು,ಅಷ್ಟಲ್ಲದ ಕ್ಲಬ್ಬಿನ ಮೆಂಬರ್ಸೂ ವಂತಿಗೆ ಹಾಕಿ ಒಟ್ಟು ಐದು ಸಾವಿರ ಹ್ಯಾಂಗಾರ ಕೂಡಿಸಿ ಕೂಡಬೇಕಂತೀವಿ.ಅಂದ್ರ ಆ ಹುಡುಗ್ರಿಗೆಲ್ಲಾ ಎರಡೆರಡು ಜೋಡಿ ಅಂಗಿ-ಚಡ್ಡಿ ಹೊಲಿಸಬಹುದು.ಏನಂತೀರಿ ನೀವು?" ಮೊಧಲಿ ದಿನಗಳ ತಮಾಷೆಯೆನ್ನಿಸಿದ್ದ ಅವಳ 'ಏನಂತೀರಿ ನೀವು'ಗೆ ಈಗ ಹೂಂದಿಕೊಂಡಿದ್ದ ಶಶಿ ಮುಗುಳ್ನಕ್ಕು ಅಂದಳು,"ಚಂದಾವಸೂಲಿ ಬಿಟ್ಟು ಕೋರ್ಟಿಗೆ ಹೊರಟೀರಿ ಅಂದ ಮ್ಯಾಲೆ ಕೇಸು ಭಾಳ ಮಹತ್ವದ್ದೇ ಇರಬೇಕಲ್ಲ." ಅವಳ ಧ್ವನಿಯಲ್ಲಿ ವ್ಯಂಗ್ಯವಿರವಿಲ್ಲ.ಶಾಂತಾ ಆಪ್ಟೆಯ ಕೆಲಸದಲ್ಲಿನ ಪ್ರಾಮಾಣಿಕತೆ-ನಿಷ್ಟೆಯ ಬಗ್ಗೆ ಅವಳಿಗೆ ಗೊತ್ತಿದ್ದರಿಂದ ವ್ಯಂಗ್ಯವಾಡುವ ಪ್ರಶ್ನೆಯೇ ಇರಲಿಲ್ಲ. "ಹೌದು,ಭಾಳ ಇಂಪಾರ್ಟಂಟ್ ಕೇಸು.ಮೊನ್ನೆ ಹೇಳಿದ್ನೆಲ್ಲ ನಿಮಗ ನಮ್ಮ ಮನೆಯೊಳಗ ಅಡಿಗೆ ಮಾಡೋ ಬ್ರಾಹ್ಮಣ ವಿಧವೆ,ಸಕೇಶಿ,ಆಕೀ ಕೇಸು.ಆಕೀ ಗಂಡ ಸತ್ತ ಮ್ಯಾಲ ಆಕಿನ್ನ ಭಾವ-ಮ್ಯದುನಂದಿರು ಜುಲುಮೀ ಮಾಡಿ ಹೆಬ್ಬಟ್ಟು ಒತ್ತಿಸಿಕೂಂಡು ಆಕಿಗೆ ಬರಬೇಕಾದ ಚೂರುಪಾರು ಆಸ್ತಿ ಎಲ್ಲಾ ಎತ್ತಿ ಹಾಕಿ ಆಕಿನ್ನ ಮನೀಬಟ್ಟು ಹೊರಗೆ ಹಾಕ್ಯಾರ.ಆಕಿ ವತಿಯಿಂದ ಕೇಸು ಹಾಕೀನಿ ಅವರ ಮ್ಯಾಲ.ಇನ್ನೇನು ಮುಗೀಲಿಕ್ಕೆ ಬಂತು.ಆಕೀ ಗಂಡನ ಪಾಲಿನ ಹೂಲಾ,ದುಡ್ಡು,ಬಂಗಾರ ಎಲ್ಲಾ ಸಿಗತದ.ಏನಂತೀರಿ ನೀವು?" "ಪರೋಪಕಾರದ ಕೆಲಸ".ಶಶಿ ನಿಜವಾದ ಪ್ರಶಂಸೆಯಿಂದ ಅಂದಳು.ಅಡಿಗೆಯವಳಿಯಿಂದ ಈ ಕೇಸಿಗಾಗಿ ಏನೂ ಹಣದ ಅಪೇಕ್ಷಯಿಲ್ಲದೆ ಶಾಂತಾ ಈ ಕೆಲಸ ಮಾಡೀದ್ದಾಳೆಂಧು ಆಕೆಗೆ ಗೊತ್ತು. "ಮತ್ತ ಮಾಡ್ಲಕ್ಕೆ ಬ್ರೆಕಲ್ರೀ.ನಮಗ ಅದಷ್ಟು ಎಲಾರಿಗೂ ಸಹಾಯ ಮಾಡೋದರೆಪಾ.ನಮ್ಮ ಆಪ್ಪೆ ಸಾಹೇಬ್ರೂ ಈ ಕೇಸಿನ್ಯಾಗ ಭಾಳ ಇಂಟರೆಸ್ಟ್ ತಗೊಂಡಾರ.ಅವ್ರೇ ಕೇಸ್ ಪೇಪರ್ಸ್ರೆಲ್ಲಾ ರೆಡೀ ಮಾಡೀ ಕೋಟ್ಟದ್ದು.ಏನಂತೇರಿ ನೀವು ?"ಹೌದು,ಆಕೆ ಹೇಳದಿದ್ದರೂ ಕೆಳದ ಆರೇಳು ವರ್ಶ್ಃಗಳಿಂದ ಆಕೆಯ ನೆರೆಯಲ್ಲಿದ್ದುದರಿಂದ ಶಶಿಗೆ ಗೋತ್ತು.ಶಾಂತಾ ಆಪ್ಪೆಯ ಗಂಡನೂ ಹೆಂಡನೂ ಹೆಂಡತಿಯ