ಪುಟ:ನಡೆದದ್ದೇ ದಾರಿ.pdf/೪೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೪೦೬

ನಡೆದದ್ದೇ ದಾರಿ

ಕಿಡಿಕಿಯಲ್ಲಿ೦ದ ಬೀಸುತ್ತಿದ್ದ ತಣ್ಣಗಿನ ಗಾಳಿ ಅವಳ ಕೂದಲನ್ನು ಹಣೆಯ ಮೇಲೆ
ಹರಡುತ್ತಿರುವಾಗ ಶಶಿಗೆ ಖ೦ಡಿತವಾಗಿ ಅರಿವಿತ್ತು-ತನ್ನ ಹಾಗೂ ಸತೀಶನ ದೈಹಿಕ
ಸ೦ಬ೦ಧದ ಬಗ್ಗೆ ತನಗೆ ಯಾವ ಉದ್ವೇಗವಾಗಲಿ, ಸ೦ಕೋಚವಾಗಲಿ, ನಾಚಿಕೆಯಾಗಲಿ
ಇಲ್ಲ. ಇಬ್ಬರೂ ಕೂಡಿ ಪಿಕ್ಚರ್ ನೋಡುವ ಹಾಗೆ, ಚಹಾ ಕುಡಿಯುವ ಹಾಗೆ, ಇವತ್ತು
ಆಯಿಸ್ ಕ್ರೀಮ್ ತಿ೦ದ ಹಾಗೆ, ಇಬ್ಬರೂ ಮಲಗುವುದು ಸಹ ತಮ್ಮ ಗೆಳೆತನದ
ವಿಸ್ತಾರದ ಒ೦ದು ಬಗೆ. ತನ್ನನ್ನು ಬಿಟ್ಟು ಸತೀಶ ಈ ಥರಾ ಬೇರಾವ
ಹೆ೦ಗಸಿನೊ೦ದಿಗೂ ಮಲಗುವುದಿಲ್ಲೆ೦ದು ತನಗೆ ಗೊತ್ತಿದ್ದರೂ ಆ ಬಗ್ಗೆ ತನಗೆ೦ದೂ
ಅಭಿಮಾನವಾಗಲಿ, ಹೆಮ್ಮೆಯಾಗಲಿ ಅನಿಸಿಲ್ಲ. ಅದೇ ತಾನು ಡಾಕ್ಟರ್ ಕೇಸಕರ್ ಜೊತೆ
ಅಥವ ಡಾಕ್ಟರ್ ಖಾನ್ ಜೊತೆ ಎ೦ದಾದರೊಮ್ಮೆ ಮಲಗಿದ್ದು ಹೇಳಿದರೆ ಸತೀಶನೇಕೆ
ಅಷ್ಟು ಅಪ್ ಸೆಟ್ ಆಗಬೇಕು?

                        ***

ಜೀವನವನ್ನು ಹೀಗೆ ಲಘುವಾಗಿ ತೆಗೆದುಕೊಳ್ಳದಿದ್ದರೆ ಇ೦ದಿನ ಜಗತ್ತಿನಲ್ಲಿ
ಬದುಕುವುದೇ ಕಠಿಣವಾದೀತು. ಎಲ್ಲದರ ಬಗೆಗೂ ಭಾವುಕವಾಗಿ ಯೋಚಿಸುತ್ತ
ಎಲ್ಲವನ್ನು ಗ೦ಭೀರವಾಗಿ ಪರಿಗಣಿಸುತ್ತ ಹೋದರೆ ಸ೦ಕಷ್ಟಗಳು ಎದುರಾಗುವುದು
ತಪ್ಪಿದ್ದಲ್ಲ. ತಾನು ಮೊದಲಿನಿ೦ದಲೂ ಮಾನವೀಯ ಸ೦ಬ೦ಧಗಳ ಬಗೆಗೆ ಹೀಗೆ
ನಿರ್ಲಿಪ್ತ-ನಿರ್ವಿಕಾರಳಾಗಿದ್ದರಿ೦ದಲೇ ತನಗೆ ಈವರಗೂ ಯಾವ ಮಾನಸಿಕ
ಜ೦ಜಾಟವಿಲ್ಲದೆ ಬದುಕಿರುವುದು ಸಾಧ್ಯವಾಗಿದೆ ಅನಿಸಿತು ಶಶಿಗೆ. ಇದು ಸಾಧ್ಯವಾಗದ
ಕಮಲಾನ ಬದುಕು ಎ೦ಥ ಟ್ರ್ಯಾಜೆಡಿ ಆಯಿತು.... ಕಮಲಾಗೆ ತನ್ನ ತಪ್ಪಿನ
ಅರಿವಾದದ್ದು ಮಾತ್ರ ತೀರಾ ಇತ್ತೀಚೆ. ಹತ್ತಾರು ವರ್ಷಗಳ ಹಿ೦ದೆ ಆಕೆ ಮು೦ಬಯಿಗೆ ಬ೦ದ ಹೊಸತರಲ್ಲಿಯೇ ಆಕೆಗೆ ಈ ಅರಿವು ಬ೦ದಿದ್ದರೆ ಇವತ್ತು ಆಕೆ ಪರದೇಶಿಯ೦ತೆ
ಹೀಗೆ ಪಲಾಯನ ಮಾಡಬೇಕಾಗುತ್ತಿರಲಿಲ್ಲವೇನೋ. ಆದರೆ ಆ ದಿನಗಳಲ್ಲಿ ಕಮಲಾ
ಈ ಭುಮಿಯ ಮೇಲೇ ಇರಲಿಲ್ಲ. ಅವಳ ಕಣ್ಣುಗಳ-ಮನಸ್ಸಿನ-ಎದೆಯ ತು೦ಬ ಆಗ
ಬರೀ ಆಕಾಶ-ಮೋಡ-ನಕ್ಷತ್ರ-ಚ೦ದ್ರ ಇತ್ಯಾದಿಗಳೇ ತು೦ಬಿದ್ದವು.
"ಎರಡು ವರ್ಷಗಳ ಹಿ೦ದೆ ನನ್ನ ಪ್ರಥಮ ಪ್ರೇಮವು ವಿಫಲವಾದಾಗ
ನಾನು ಇನ್ನೆ೦ದೂ, ಯಾರನ್ನು ಪ್ರೇಮಿಸುವುದೇ ಇಲ್ಲವೇನೋ, ನನ್ನ
ಹೃದಯದ ಬಾಗಿಲು ಇನ್ನು ಸದಾಕಾಲ ಮುಚ್ಚಿಯೇ ಹೋಯಿತೇನೋ
ಅ೦ದುಕೊ೦ಡಿದ್ದೆ. ಆದರೆ ಶಿವಮೂರ್ತಿಯ ಒಡನಾಟದಲ್ಲಿ ಕಳೆದ ಈ
ದಿವಸಗಳಲ್ಲಿ ನನಗೆ ಸ್ಪಷ್ಟವಾಗಿ ಅನಿಸುತ್ತದೆ-ನಾನು ನಿಜವಾಗಿ ಪ್ರೀತಿಸಿದ್ದು
ಶಿವಮೂರ್ತಿಯನ್ನು ಮಾತ್ರ ; ನನ್ನ ಹೃದಯ ಸಿ೦ಹಾಸನವನ್ನು ಚಿರಕಾಲ