ಆಂರೋಮ್ಯಾನಿಟಿಕ್ ರೀತಿಯಲ್ಲಿ ಆಕೇ ಹೇಳಿದಳು. "ಸತೀಶ, ನಿನ್ನ ಪ್ರಪೋಜಲ್ ಒಪ್ಪಿದೆ ,ನಡಿ,ನಾವು
ಲಗ್ನ ಆಗೋಣ".
"ಖರೇನೆe ಶಶಿ ?" ಸತೀಶನಿಗೆ ಅನುಮಾನ, ಆಚ್ಚರಿ. "ಖರೇನೆe ".-ಶಶಿ ಆತನಿಗೆ ಆತು ನಿಂತು ಹೇಳಿದಳು.ನಂತರ ಎಲ್ಲ್ ಭಾರ ಇಳಿದವಳಂತೆ ಧೀರ್ಘವಾಗಿ ನಿಟ್ಟುಸಿರು ಬಿಟ್ಟಳು. "ವಂಡರ್ಫುಲ್ ,ದಿಸ್ ಮುಸ್ಟ್ ಬಿ ಸೆಲೆಬ್ರೇಟೆಡ್ -"
-ಸತೀಶ ಒಂದು ಕೈಯಿಂದ ಅವಳನ್ನು ಬಳಸಿ ಹಿಡಿಯುತ್ತ ಹೇಳಿದ ,"ಈಗ ಮೊದ್ಲ ಹಾಸ್ಟಿಟಲಿಗೆ ಹೋಗೋಣ. ನೀ ಇವತ್ತು ರಜಾ ಹಾಕು .ಆಮ್ಯಾಲೆ ಇಬ್ಬರೂ ಊಟಕ್ಕೆ ತಾಜ್ಗ್ಗೆಹೋಗೋಣ.ಆಮ್ಯಾಲೆ ನನ್ನ ಫ್ಲ್ಯಾಟಿಗೆ ಆರಾಮ ತಗೊಳ್ಳೋಣ . ನಡೀ."
ಎಂದಿನಂತೆ ಆತ ' ಏನಂತೀ ಶಶಿ ?' ಅಂತ ತನ್ನ ಅಭಿಪ್ರಾಯ ಕೇಳಲಿಲ್ಲ ವೆಂಬುದೂ ಶಶಿಯ ಗಮನಕ್ಕೆ ಬರಲಿಲ್ಲ .ಆತನ ಧ್ವನಿಯಲ್ಲಿ ಎಂದಿನ ಆನುನಯ - ಆಜ್ರ್ವತೆ ಒಮ್ಮೆಲೆ ಮಾಯವಾಗಿ ಆಗಲೇ ಅಧಿಕಾರದ ಸೆಳಕು ಮಿಂಚಿದಂತೆ ಒಂದು ಕ್ಷಣ ಆನಿಸಿದರೂ ಆ ಅನಿಸಿಕೆಯನ್ನು ಆಚೆ ಕೊಡಹುವಂತೆ ತಲೆ ಅಲ್ಲಾಡಿಸಿ ಶಶಿ ಆತನಿಗಂಟಿಕೊಂಡಂತೆಯೇ ಆತನನ್ನು ಹಿಂಬಾಲಿಸಿದಳು .ಯಾವಾಗಲೂ ನಡೆಯುವಾಗ ಬಿರುಸಿನಿಂದ ರಪ್ ಸದ್ದು ಮಾಡುತ್ತಿದ್ದ ಆಕೆಯ ಚಪ್ಪಲಿಗಳು ಇಂದು ಒಮ್ಮೆಲೆ ವಿಧೇಯವಾಗಿ , ನೀ:ಶಬ್ಧವಾಗಿ, ಮೌನವಾಗಿರುವಂತೆ ಒಂದು ಕ್ಷಣ
ಆನಿಸಿದರೂ ,ಪ್ರಯತ್ನಪೂರ್ವಕವಾಗಿ ಎಲವನ್ನೂ ಅಲಕ್ಷಿಸಿ ಆತನಿಗಿಂತ ಎರಡು ಹೆಚ್ಚು ಹಿಂದೆ-ಹಿಂದೆ ಆಕೆ ನಡೆದಳು.