ಪುಟ:ನಭಾ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಭ 15 ರಾಜಿ:- ಅದೇಕೆ? ಭಯವೇ? ನಾನೇನು ಹುಲಿಯೋ ? ನಭಾ:- ಹುಲಿಗೆ ಹೆದರುವ ಪ್ರಾಣಿಯು ನಾನಲ್ಲ, ನೀನು ಹುಲಿ ಮಾತ್ರವಲ್ಲ; ಪರನಾರಿಯ ಕುಲ, ಕೀರ್ತಿ, ಪ್ರಾಣ, ಮಾನಗಳನ್ನು ಸುಲ ಭವಾಗಿ ಅಪಹರಿಸಬಲ್ಲ ಹೆಬ್ಬುಲಿ. ರಾಜಿ:- ಅಹುದಹುದು, ನಾನು ಹೀಗೆ ಹೇಳು ವರನೇಕರನ್ನು ಬಲ್ಲೆನು. ಇವೆಲ್ಲವೂ ಹೆಂಗಸರ ಶುಷ್ಕವೈರಾಗ್ಯನೀತಿ! ನಭಾ:- ಹಾಗೆಂದರೆ, ನಿನ್ನ ಅಭಿಪ್ರಾಯವೇನು? ರಾಜ: ಪರಿಹಾಸದಿಂದ ಚಿತ್ರವೇ ಆಶೆಗೆ ಜನ್ಮಸ್ಥಾನ; ಅವರ ಸ್ವಭಾವವೇ ಚಾಂಚಲ್ಯ ಬಾಣಪೀಠ, ಅವರಿಂದ ಹೊರಹೊರಡುವ ಬಾಹ್ಯ ವಿರಕ್ತಿಯ ಸ್ವಭಾವವನ್ನು ಅರಿಯದವನು ನಾನಲ್ಲ, ಬಾ, ಹತ್ತಿರಬಾ!!” ನಭಾ:- ಹೇಗೆಬೇಕಾದರೂ ಹೇಳಿಕೊ: ನಾನು ಹೊರಡುವೆನು. ಸ್ತ್ರೀಸ್ವಭಾವವು ನೀನು ಊಹಿಸಿರುವಂತೆ ಕೆಟ್ಟದೆಂದೇತಿಳಿ; ಅದರಿಂದ ಉಂಟಾಗುವ ಫಲವೇನೆಂಬುದನ್ನಾದರೂ ಬಲ್ಲೆಯಾ? ರಾಜ:- ಫಲವೇನು? ಪುರುಷರ ಚಿತ್ರದಲ್ಲಿ ತಮ್ಮ ವಿಷಯಕವಾದ ಪ್ರೇಮವು ಎಷ್ಟಿರುವುದೆಂಬುದನ್ನು ತಿಳಿಯಬೇಕೆಂದೇ ಹಾಗೆಮಾಡುವರು. ಪುರುಷರೂ ಅವರನ್ನು ಕಪಿಗಳಂತೆಭಾವಿಸಿ, ಅನೇಕ ಚೇಷ್ಟೆಗಳನ್ನು ಮಾಡಿ ಆಟವಾಡಿಸಿಬಿಡುವರು. ಆದರೆ, ನಭಾ! ನಾನು ನಿಜವಾಗಿಯೂ ಹೇಳು ವೆನು; ಕೇಳು ನಿನ್ನ ಮೇಲೆ ನನಗೆ ಅಪ್ರತಿಮ ಪ್ರೇಮವಿದೆ. ನನ್ನಿ ಅನಂತ ಪ್ರೀತಿಗೆ ಪ್ರತಿಯಾಗಿ ನಿನ್ನ ಹೃದಯದಲ್ಲಿ ಒಂದು ರವೆಯಪ್ಪಾ ದರೂಎಡೆಕೊಟ್ಟೆಯಾದರೆ, ಅದನ್ನೇ ನಾನು ಅನಂತವಾಗಿ ಭಾವಿಸುವೆನು. ನಭಾ:- ನನ್ನ ಹೃದಯದಲ್ಲಿ ನಿನ್ನ ವಿಷಯವಾಗಿರುವ ಪ್ರೀತಿಗೆ ಅಂತವಿಲ್ಲವೆಂದು ಭಾವಿಸು. ರಾಜಶೇಖರ : ನಾನು ನಿಜವನಾ ಡುವೆ ನೆಂದು ತಿಳಿ. ರಾಜ:- ಎಂತಹ ಪ್ರೀತಿ? ನಭಾ:-ನೈಜವಾದ ಸೋದರಪ್ರೇಮ, ಚ್ಯುತಿಯಿಲ್ಲದ ಸೋದರ ವಾತ್ಸಲ್ಯವು ಈ ಹೃದಯಾವರಣದಲ್ಲಿ ದೆ. ರಾಜ:- ಬೇಡ, ಆ ಪ್ರೇಮವು ನನಗೆ ಬೇಡ.