ಪುಟ:ನಭಾ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

102 ಸತೀಹಿತೈರ್ಷಿಣೀ ನಭಾ! ಆಶೀರ್ವಾದಗಳು. ಇಲ್ಲಿ ಅಣ್ಣನ ಕಾಯಿಲೆಯು ಕ್ರಮಕ್ರಮವಾಗಿ ಗುಣವಾಗುತಿರ: ಇದು, ಜಾಗ್ರತೆಯಾಗಿಯೇ ಹೊರಟುಬರುವೆನು. ಇಲ್ಲಿಗೆ ಬಂದುದು ಮೊದಲು ಅತ್ತಿಗೆಯ ಅಸೂಯೆಯು ಅತಿಯಾಗುತ್ತಿರುವುದು, ಮಾಡತ ಕುದೆ(ನು? ಅಣ್ಣನಿಗಾಗಿ ಪ್ರಾಣವನ್ನಾದರೂ ಕೊಡುವುದು ನನ್ನ ಕರ್ತ ವ್ಯ ಕರ್ಮ, ಮನೆಯ ಕಡೆ ಎಚ್ಚರವಾಗಿರುವುದು. ಇತಿ- ನಿನ್ನ ಚಿಕ್ಕಪ್ಪ ಚಿದಾನಂದ” ಪರಮಾನಂದದಿಂದ ಈ ಸಂಗತಿಯನ್ನು ಸೋದರರಿಗೆ ತಿಳಿಸಿದಳು. ಅಷ್ಟರಲ್ಲಿಯೇ ಭಗವಾನಂದನ ಮಿತ್ರನೊಬ್ಬನು ಬಂದು ಅವನನ್ನ ರಮಾನಂದನನ್ನೂ 'ಫುಟ್ ಬಾಲ್ ಮ್ಯಾಚ್ ” ನೋಡಲು ಕರೆದುಕೊಂಡು ಹೊರಟುಹೋದನು, ನಭೆಯೊಬ್ಬಳೆ ತೋಟದ ಹಿಂದುಗಡೆ ಉಳಿದಳು. ಸ ವ್ಯನು ಅಸ್ತಂಗತನಾಗುವುದರಲ್ಲಿದ್ದರೂ ಕೃಷ್ಣ ಪಕ್ಷವಾದುದರಿಂದ ಕತ್ರ ಲೆಯಾಗುತ್ತಿದ್ದಿತು, ನಭೆ ಶಂಕಿತೆಯಾಗಿ ಗೃಹಾಭಿಮುಖಳಾದಳು, ಒಂದೆ ರಡಡಿಗಳಿಡುವುದರೊಳಗಾಗಿಯೇ ಹಿಂದಿನಿಂದ ಯಾರೋ ತನ್ನ ತಲೆಯ ಕೂದಲನ್ನು ಹಿಡಿದು ನಿಲ್ಲಿಸಿದಂತಾಯಿತು. ಹಿಂದಿರುಗಿ ನೋಡಿದಳು. ಭಯ, ವಿಸ್ಮಯ, ಕೇಶ, ರೋಷಗಳು ಏಕಕಾಲದಲ್ಲಿ ಉತ್ಪನ್ನವಾಗಿ ಭಾ೦ ತಳ೦ತಾದಳು. ಅವಳ ಕಣ್ಣು ಮುಚ್ಚಿತು. ಪ್ರಯತ್ನ ಪುರಸ್ಸರ ವಾಗಿ ತೆರೆದಳು. ನೋಡಿದಳು, ಉನಾದರೋಗ ಪೀಡಿತನಾದ ರಾಜಶೇ ಖರನು ತನ್ನ ತಲೆಕೂದಲನ್ನು ಹಿಡಿದಿರುವುದನ್ನು ಕಂಡಳು. " ಈಗೇನು ಮಾಡಬೇಕು?” ಎಂಬ ಪ್ರಶ್ನೆಯು ಅವಳ ಹೃದಯದಲ್ಲಿ ಉತ್ಪನ್ನ ವಾಯ್ತು. ದರ್ಪದಿಂದ ಕಾರ್ಯ ವು ಕೆಡುವುದೆಂದು ತಿಳಿದಳು. ಸತೀತ್ವರಕ್ಷಣೆಗೆ ಸಮ ಯೋಚಿತ ಉಪಾಯವೂ ಬೇಕೆಂದು ದೃಢವಾಡಿ ಕೇಳಿದಳು:- ರಾಜಿ ಶೇಖರ? ಇಷ್ಟು ದಿವಸ ಎಲ್ಲಿ ಹೋಗಿದ್ದೆ? ನನ್ನ ತಲೆಯ ಕೂದಲನ್ನು ಬಿಡು.” ರಾಜ:- ಬಿಡುವೆನು, ಈಗಲಾದರೂ ನಿನ್ನ ಇಷ್ಟವೇನು? ಹೇಳು!