ಪುಟ:ನಭಾ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಷಯಕವಾಗಿ ನಾವು ನಮ್ಮ ಶಕ್ಕನುಸಾರವಾಗಿ ವಿಚಾರಮಾಡಿದಮಟ್ಟಿಗೆ ನಮ್ಮ ವಿಚಾರಗಳನ್ನು ಜನರಮು೦ದೆ ಇಡುವುದು ನಮ್ಮ ಕರ್ತವ್ಯವಾಗಿರು ವದೆಂದು ತಿಳಿದು ಸತೀಹಿತ್ಯ ಷಿಣೀ ಗ್ರಂಥಮಾಲೆ”ಯನ್ನು ಪ್ರಕಟಿಸಲು ಉದ್ಯುಕ್ತರಾಗಿರುವೆವು, ನಿಬಂಧರೂಪದಿಂದ ಬರೆದಿರುವ ಲೇಖನಗಳು ಸಾಮಾನ್ಯವಾಗಿತಕರಿಗೆ ನೀರಸವಾಗಿರುವುದರಿಂದ ಅವುಗಳಿಂದ ಲೇಖನಗಳ ಉದ್ದಿಷ್ಟ ಹೇತುವು ಸಫಲವಾಗುವುದಿಲ್ಲವೆಂದು ತಿಳಿದು, ನಮ್ಮ ವಿಚಾರಗ ಳನ್ನು ಕಥಾರೂಪವಾಗಿ ಪ್ರತಿಪಾದಿಸುವ ಸಂಕಲ್ಪವನ್ನು ದೈವಬಲದಿಂದ ತಳೆ ದಿದ್ದು ಆ ಸಂಕಲ್ಪದ ಫಲವೇ ಈ ನಭಾ ” ಕೃತಿಯಾಗಿರುವುದು, ಈ ಫಲವು ಸೀಯಾದುದೋ ಕಹಿಯಾದುದೊ ನನ್ನ ಸೋದರಿಯರ ಮಾನ ಸಿಕ ಉನ್ನತಿಗೆ ಪಥ್ಯಕರವಾದುದೋ ಅಪಥ್ಯಕರವಾದುದೋ ಎಂಬುದನ್ನು ನಿರ್ಣಯಿಸುವ ಭಾರವನ್ನು ನಾವು ಜನತಾತ್ಮನಿಗೆ ಒಪ್ಪಿಸಿ, ವಿರಮಿಸುವೆವು. ಇತಿ, ದೇಶಿಯ ಸೋದರಿ ಹಿತೈಷಿಣಿ.