ಪುಟ:ನಭಾ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸತೀಹಿತೈಷಿನೇ. ವೆನು; ಆದರೇನು ಮಾಡಲಿ? ನನ್ನ ಆತ್ಮನು ಈ ಕರ್ಮ ಭೂಮಿಯನ್ನು ಈ ಅಸ್ಸಿ ಮಾಂಸಗಳ ಪಂಜರವನ್ನು ಇಲಿ ಯೇ ತೊರೆದು, ಪರಂಧಾಮ ವನ್ನು ಸೇರುವ ಪ್ರಯತ್ನದಲ್ಲಿ ರುವನು, ಹೆಚ್ಚು ವಿಳಂಬವಿಲ್ಲ, ಶಕ್ತಿ ಕುಂಠಿ ತವಾಗುತಿದೆ. ನಾನು ಸಾಂಕ್ರಾಮಿಕ ರೋಗಶಕ್ತಿಯಿಂದ ಮರಣೋನ್ಮು ಖನಾಗಿರುವೆನು, ನಾನು ಸತ್ತೇ ಸಾಯುವೆನು, ನನ್ನ ಜೀವಿತಾಶೆಯಿಲ್ಲ! ನಭಾ! ನಾನು ಸಾಯುವುದಕ್ಕಾಗಿ ಸಂಕಟಪಡುವುದಿಲ್ಲ; ಈ ಅಂತ್ಯಕಾಲದಲ್ಲಿ ಒಂದು ತಡವೆ, ಒಂದೇ ಒಂದು ತಡವೆ, ನಿನ್ನ ಶಾಂತ ಮೂರ್ತಿಯನ್ನು ಅವಲೋಕಿಸುವಷ್ಯರ ಭಾಗ್ಯವಾದರೂ ದೊರೆಯದುದ ಕ್ಯಾಗಿ ಸಂಕಟಪಡುವೆನು, ಹೃದಯೇಶ್ವರಿ! ಅಂತಹ ಅದೃಷ್ಟವಂತನು ನಾನಲ್ಲವೆಂಬುದೊಂದೇ-ನನಗೆ ಸಮಾಧಾನದ ಮಾತಲ್ಲವೆ? ಹೇಗಾದರೂ ಆಗಲಿ! ನಾನು ಸಾಯುವೆನು; ನಿಜವಾಗಿಯ ಸಾಯುವೆನು, ಈ ಲೋಕವನ್ನೇ ಬಿಟ್ಟು ಹೋಗುವುದರಲ್ಲಿರುವೆನು. ಆದರೂ, ನನ್ನ ಮನಸ್ಸಿ ನಲ್ಲಿರುವ ಒಂದೆರಡು ಮಾತುಗಳನ್ನು ತಿಳಿಸದೆ ಸಾಯಲು ಮನಸ್ಸು ಬಾರದು, ಕಯ್ಯಲ್ಲಾಗುವವರೆಗೂ ಬರೆದು ಸಾಯುವೆನು. - ಪ್ರಿಯನಭಾ ! ನಿನ್ನ ನ್ನು ಅತ್ಯುನ್ನ ತಾನಾಧಿಷ್ಠಾತೃದೇವಿ ಯನ್ನಾಗಿ ಪ್ರತಿಷ್ಠಿ ಸಬೇಕೆಂದು ಮಾಡಿದ್ದೆನು, ಆ ನನ್ನ ಅಪಾರ ವಾದ ಆಶೆಯಲ್ಲಿ ಅಣುಮಾತ್ರವಾದರೂ ನನ್ನಿಂದ ನಡೆಸಲ್ಪಡಲಾರದೆ ಹೋದುದಕ್ಕಾಗಿ ಎಷ್ಟು ಚಿಂತಿಸಿದರೂ ಸ್ವಲ್ಪವೇ! ವಿವಾಹವಾದಂದಿ ನಿಂದ ಒಂದು ಬಾರಿಯಾದರೂ ನನ್ನ ಮನೆಗೆ ಕರೆಯಿಸಿಕೊಳ್ಳಲಾಗಲಿಲ್ಲ. ಒಂದು ನಿಮಿಷವಾದರೂ ನಿಮ್ಮೊಡನೆ ವಿನೋದವಾಗಿ ಮಾತನಾಡಲಿಲ್ಲ. ಅಯ್ಯೋ, ನಭಾ!! ಆ ನನ್ನ ಅಪಾರವಾದ ಆಶೆಯು ಇಂದು ಕೃಶಾನು ವಶ ವಾಗುವುದು. ಈ ನತದೃಷ್ಟನನ್ನು ಕೈವಿಡಿದು, ಅವಸುಖವನ್ನು ತಾನೆ ಅನುಭವಿಸಿದೆ ? ಇಹದಲ್ಲಿ ಚಿರದುಃಖಿನಿಯಾಗಿ ಬಾಳಬೇಕಾದುದಲ್ಲವೇ ನಿನಗಾದಫಲವು ? ಈ ಸುಬ್ರಹ್ಮಚರೈಯಲ್ಲಿಯೇ, ಈಗಿನ ದೃಢಪ್ರಜ್ಞೆಯ ಲ್ಲಿಯೇ ಕಾಲಚಕ್ರವನ್ನು ನೂಕಿ, ಈ ಸೃಥ್ವಿಯನ್ನು ತ್ಯಜಿಸಬಲ್ಲೆ ಯಾ ದರೆ, ಪರಸಾಮ್ರಾಜ್ಯವನ್ನು ಸೂರೆಗೊಳ್ಳು ವೆ, ನೀನು ನಿಜವಾಗಿಯೂ ಹಾಗೆಯೇ ಇರಲುಳ್ಳ ವಳೆಂದು ನಂಬಿರುವೆನು.