ಪುಟ:ನಭಾ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

16 ಸತೀಹಿತೈಷಿಣೀ. ಬೇಕಾದುದನ್ನು ನೀನೇ ಮಾಡಬೇಕು.” ಎಂದು ಪ್ರಾರ್ಥಿಸಿಕೊಂಡಳು. ಶಂಕರ:-ನಡೆದ ಕಾರಕ ಮಿಡುಕಿ ಫಲವಿಲ್ಲ. ಸಂತಸಿಕೋ ! ನಿನ್ನ ತಾಯಿಗೆ ನಾನೊಬ್ಬನೇ ಮೈದುನನಲ್ಲ; ಚಿದಾನಂದನೂ ಇರುವನು. ನಾನು ಬಹು ಅಸಮರ್ಥನಾಗಿರುವನು. ನನಗೆ ಅನುಕೂಲವಿಲ್ಲ. ನಭಾ:-ನಾನೆಲ್ಲಿ , ಚಿದಾನಂದವೆಲ್ಲಿ ? ಆತನು ಬರುವ ವರೆಗೂ ಈ ಶವವನ್ನು ಇಲ್ಲಿಡಲಾಗುವುದೆ ? ಅನುಕೂಲವೆಂದರೇನು ? ಹಣಕ್ಕಾಗಿ ಆಲೋಚಿಸಬೇಕಾಗಿಲ್ಲ. ಶಂಕರ:-ಎಷ್ಟಿರುವುದು? ನಭಾ:- ಅಪ್ಪಾ! ಇಲ್ಲಿ ಇಪ್ಪತ್ತು ರೂಪಾಯಿಗಳಿವೆ, ಇಷ್ಟರ ಲ್ಲಿಯೇ ಕಾರಗಳೆಲ್ಲವನ್ನೂ ನೆರವೇರಿಸಿರಿ.” ಎಂದು ಹೇಳುತ್ತ ತಾಯಿಯ ತಲೆಗಿಂಬಿನಲ್ಲಿದ್ದ ರೂಪಾಯಿಯ ಗಂಟನ್ನು ಚಿಕ್ಕಪ್ಪನ ಕೈಯ್ಯಲ್ಲಿ ಟ್ಟಳು. ಶಂಕರ:-ಇದೇನು, ಎರಡು ದಿನಗಳಿಗಾಗಬಹುದು; ಮುಂದಕ್ಕೆ? ನಭಾ:-ಮುಂದಕ್ಕೆ ನೋಡಿಕೊಳ್ಳುವ ಮೊದಲು ಇಂದಿನ ಕೆಲ ಸವ ನಡೆಯಲಿ. ಶಂಕರನು ರೂಪಾಯಿಗಳನ್ನು ತೆಗೆದುಕೊಂಡು ಮನೆಗೆ ಹೋದನು. ಅಲ್ಲಿಂದ ಮುಂದೆ ಬ್ರಾಹ್ಮಣರಬಳಿಗೂ ಹೋದನು, ಅವನು ಹಿಂದಿರು * ಗುವುದರಲ್ಲಿ ಅವನ ಕಿವಿಹೆಂಡತಿಯು ಓಡಿಬಂದು, ನಭೆಯಮುಂದೆ ಕಣ್ಣೀ ರನ್ನು ಸುರಿಸುತ್ತ ನಿಂತಳು, ನಭೆಯು ಅವಳ ಆ ಅಶ್ರುವ ನಿಜಸಂತಾಪ ಸೂಚಕವಾದುದೆಂದು ನಂಬಿ ತನ್ನ ಕಷ್ಟಗಳನ್ನು ಹೇಳಲು ಸಕ್ರಮಿಸಿದಳು. ಅದಕ್ಕವಳು 'ನಭಾ! ಅತ್ತರೆ, ಸತ್ತವರು ಬರುವರೆ? ಏಕೆ ಅಳುವೆ! ಉಳಿ ವವರಾರು! ಎಲ್ಲರೂ ಸಾಯಬೇಕು, ಅಳಬೇಡ” ಎಂದು ಸಮಾಧಾನ ಪಡಿಸಿ ಒಳಗೆ ಕರೆತಂದಳು. ನಭಾ-ಅಮ್ಮ ! ಆವಾವುದಕ್ಕೆಂದು ಅಳಲಿ? ಚಿಕ್ಕಮ್ಮ:- ಅತ್ತರೆ ಕಷ್ಟಗಳು ತಪ್ಪುವುವೆ? ನಭಾ:-ಹಣೆಯಲ್ಲಿ ಬರೆದಿರುವುದನ್ನೆಲ್ಲಾ ಅನುಭವಿಸಲೇಬೇಕು. ಚಿಕ್ಕಮ್ಮ:-ನೀನು ಹುಟ್ಟಿದಂದಿನಿಂದಲೂ ನಮ್ಮ ವಂಶಕ್ಕೆ ಕಷ್ಟ ಗಳೇ ಬರುತಿವೆ, ಏನುಮಾಡುವುದು? ಕೆಲವರು ಹುಟ್ಟಿದವೇಳೆ.