ಪುಟ:ನಭಾ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಭಾ. ಇವರ ಸಂಭಾಷಣೆಯನ್ನು ಕೇಳುತ್ತಿದ್ದ ನೆರೆಮನೆಯ ವೃದ್ದಳು “ಇದೇನಮ್ಮ? ಶರಾವತಿಬಾಯಿಯವರೆ! ಇಂತಹ ಸಂಕಟಕಾಲದಲ್ಲಿಯೂ ಒಂದಾದರೂ ಮೃದುವಾಕ್ಯವು ಬೇಡವೆ? ಅಯ್ಯೋ ಪಾಪ! ಈ ಹುಡುಗಿಗೆ ಈ ವಯಸ್ಸಿನಲ್ಲಿ ಇಂತಹ ಅವಸ್ಥೆಯು ಪ್ರಾಪ್ತವಾಗಬಹುದೆ?” ಎಂದಳು. ಶರಾವತಿಯು ಸಿಟ್ಟಿನಿಂದ ಏನು? ಏನಿರೆ, ಅದು? ನಿಮ್ಮನ್ನೆಲ್ಲ ಕರಸಿ ದವರಾರು ? ಮೃದುವಾಕ್ಯವನ್ನು ಬಲ್ಲವರು ನೀವೇನೋ ? ಆ ಸುಟ್ಟು ಮೋರೆಯವಳು, ಈಗ ಉರಿದು ಬೂದಿಯಾಗುವ ಆ ಬಜಾರಿಯು, ಕೊಟ್ಟಿ ರುವ ಯಾತನೆಗಳನ್ನು ಸ್ಮರಿಸಿಕೊಂಡರೆ, ಮೈ ಉರಿದು ಹೋಗುವುದು. ಏನೋ ಹುಡುಗಿ-ಎಂದು ಬಂದರೆ, ಒಳ್ಳೆ ಮರ್ಯಾದೆಯನ್ನೇ ಕೊಟ್ಟ ರಮ್ಮ! ತಾವೇ ನಭೆಗೆ ಬಂಧುಗಳು, ನಾವೇನು? ನಭಾ! ನಾನು ಹೋಗ ಲೇನಮ್ಮ? ನಿನ್ನ ಹಿತಚಿಂತಕರಿವರೇ ಇದ್ದಾರಲ್ಲ.” ಎಂದು ಕೇಳಿದಳು. ನಭಾ:-ಅಮ್ಮಾ ! ನಾನಿಂದು ನಿಸ್ಸಹಾಯಕಳು, ನಿಮ್ಮನ್ನೇ ಮರೆ ಹೊಕ್ಕಿರುವೆನು. ಅವರಿವರ ಮೇಲಿನ ಸಿಟ್ಟಿನಿಂದ ನನ್ನನ್ನು ಬಿಟ್ಟು ಕೊಡ ಬೇಡಿರಿ. ಶರಾವತಿ:- ನ್ಯಾಯ! ಅದೀಗ ಒಪ್ಪತಕ್ಕ ಮಾತು, ಊರವರೆಲ್ಲರೂ ಬೇಕಾದುದನ್ನು ಹೇಳಲಿ. ನಮಗಿರುವ ಅಭಿಮಾನವು ಎಲ್ಲಿ ಹೋಗುವುದು? ಇಷ್ಟು ಹೊತ್ತಿಗೆ ಶವವನ್ನು ತೆಗೆದುಕೊಂಡು ಹೋಗಲು ಸಮಸ್ತ ವನ್ನೂ ಸಿದ್ಧ ಪಡಿಸಿ, ಶಂಕರನು ಒಳಹೊಕ್ಕು ಶವದ ಬಳಿಗೂ ಹೋದನು. ಶರಾವತಿಯು ಅಡ್ಡ ಕಟ್ಟಿ « ಏನು ಮಾಡುವಿರಿ ? ಆವಾಗಲೂ ದುಡುಕೆ! ನಿಮ್ಮ ಹಣೆಯ ಬರೆಹವೇ ಇಷ್ಟು ? ಎಲ್ಲಾದರೂ ಒಂದೇ” ಎಂದು ಆರ್ಭ ಟಿಸಿದಳು. ಶಂಕರ:-ಏನು! ನಾನು ಆತುರಿಸಿದುದೇನು? ಶರಾವತಿ:-ಶವವನ್ನು ಮುಟ್ಟುವಿರಲ್ಲ; ಮುಂದಿನ ಕೆಲಸಗಳನ್ನು ನಡೆಯಿಸುವರಾರು? ಶಂಕರ:-ಸದ್ಯಕ್ಕೆ ನಾನಲ್ಲದೆ ಮತ್ತಾರೂ ಇಲ್ಲ. ಶರಾವತಿ:-ಯಾಕೆ? ಎಲ್ಲರೂ ಹಾಳಾದರೋ? ಆಲೋಚನೆಮಾಡಿ ಕೆಲಸಮಾಡಿರಿ, ದುಡುಕಬೇಡಿರಿ -ತಾಳಿ,