ಪುಟ:ನಭಾ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

28 ಸತೀಹಿತೈಷಿಣೀ. ನಿರಂಜನ:-ಅಹುದು, ದೇವರ ಕೃಪೆಯಿಂದ ಎಲ್ಲರೂ ಕ್ಷೇಮವಾ ಗಿರುವರು. ನಭಾ:- ಆಜ್ಞಾ ? ನೀನು ಬರುವಾಗ ಚಿಕ್ಕಪ್ಪ-ಚಿಕ್ಕಮ್ಮನವರನ್ನು ನೋಡಿದ್ದೆಯಷ್ಟೆ? ನಿರಂಜನ:-ಬರುವಾಗ ನೋಡಿದ್ದೇನು, ಅವರ ಇಷ್ಟಾನುಸಾರ ವಾಗಿಯೇ ಇಲ್ಲಿಗೆ ಬಂದೆನು. ನಭಾ:-ಚಿಕ್ಕಪ್ಪನು ಏನನ್ನಾದರೂ ಹೇಳಿ ಕಳುಹಿದನೆ ? ನಿರಂಜನ:-ಅವನು ನಿನ್ನ ದುಃಸ್ಥಿತಿಗಾಗಿ ಬಹಳ ಕೊರಗುತಿರು ವನು. ಇಲ್ಲಿಗೆ ಬರಲು ಒಂದೆರಡುಸಾರಿ ಪ್ರಯತ್ನಿಸಿಯ ಪ್ರಯತ್ನಿ ಸಿದನು. ರಜೆ ದೊರೆಯಲಿಲ್ಲ. ನಿನಗೆ ಖರ್ಚಿಗಾಗಿ ಎರಡುಮೂರು ಸಲ ಹಣವನ್ನು ಕಳುಹಿಸಿದನಂತಲ್ಲ; ಕಾಗದಗಳಿಗೆ ನೀನು ಉತ್ತರವನ್ನೇ ಕೆ ಬರೆವುದಿಲ್ಲ ? ನಿನ್ನ ವಿಚಾರವೇ ತಿಳಿಯಬರಲಿಲ್ಲವಾದ ಕಾರಣ ನೋಡಿ ಕೊಂಡು ಬಾರೆಂದು ಅವರೇ ನನ್ನನ್ನು ಕಳಿಸಿದನು. ನಭಾ:-ಸೇವಾ ವೃತ್ತಿ ಬಹುಕಷ್ಟ, ನನಗೆ ನಿಮ್ಮ ಊರಿನಿಂದ ಆವ ಕಾಗದವೂ ಬಂದಿಲ್ಲ. ಖರ್ಚಿಗೆ ಕಳುಹಲ್ಪಟ್ಟ ರೂಪಾಯಿ ಎಲ್ಲಿ ಹೋ ಯಿತೋ ಬಲ್ಲವರಾರು ? ಮುಖ್ಯ, ಬೇಕಾದುದು ಕ್ಷೇಮಲಾಭ, ನಿನ್ನ ತಂದೆತಾಯಿಗಳ ವಿಚಾರವು ನಿನಗೆ ತಿಳಿದೇ ಇರುವುದು. ನಿರಂಜನ:-ತೃಷ್ಣಾ ಭರದಿಂದ ತಪಿಸುತಿರುವ ನನ್ನ ತಂದೆತಾಯಿಗಳು ನಿನ್ನ ಖರ್ಚಿಗಾಗಿಬಂದ ದ್ರವ್ಯಕ್ಕೂ ಭಾಗಿಗಳಾಗಬೇಕೆ? ಅಯ್ಯೋ, ನನಗೆ ಈತನು ಜನಕಪಿತೃ; ಆತನೇ ಪಾಲಕಪಿತೃ, ಆತನನ್ನೇ ನಾನು ಪಿತೃ ದೇವನೆಂದು ನಂಬಿರುವೆನು, ನಭಾ,-ಜನಕನಲ್ಲಿ ಉದಾಸೀನವು ಧರ್ಮವೆ? ನಿರಂಜನ:-ಧರ್ಮವಲ್ಲ, ಆದರೆ, ಶುನಕ್ಕೇಫನು ತಾಯಿ ತಂದೆಗೆ ಳನ್ನು ಬಿಟ್ಟು, ಗಾಧೇಯನನ್ನೇಕೆ ಸೇರಿದನು? ನಭಾ:- ನೈಜವಾದ ಪುತ್ರವಾತ್ಸಲ್ಯವನ್ನು ತೊರೆದು ಯಾಗೆ ಪಶುವಿ ಗಾಗಿ ವಿಕ್ರಯಿಸಿದುದರಿಂದ. ನಿರಂಜನ'- ಅಹುದಷ್ಟೆ? ಅವರೇನೋ ರಾಜಾಜ್ಞೆಯಿಂದ ಬಂಧಿ