ಪುಟ:ನಭಾ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಭಾ. ಸಲ್ಪಟ್ಟು, ದಾರಿದ್ರೋಗಕ್ಕೆ ತುತ್ತಾಗಿ ಮಗನನ್ನು ತ್ಯಜಿಸಿದರು. ಇವ ರಾದರೋ ಕೇವಲ ದ್ರವ್ಯವೇ ಪ್ರಪಂಚದಲ್ಲಿ ದೊಡ್ಡದೆಂದು ನಂಬಿ, ಅನೇಕರ ದುರ್ಬೋಧನೆಯಿಂದ ನನ್ನ ವಿದ್ಯಾಭ್ಯಾಸಕ್ಕೆ ಎಷ್ಟು ಕಾರಿಗಳಾಗಿ ದಯೆ, ಧರ್ಮ, ಪುತ್ರವಾತ್ಸಲ್ಯಗಳನ್ನು ತೊರೆದು ನಿಷ್ಟುರತೆಯಿಂದ ನನ್ನನ್ನು ಹೊರಗೆ ಅಟ್ಟಿದರು. ನಭಾ:- ಹಿಂದಿನ ಮಾತು ಮರೆತುಹೋಗಲಿ, ಬಿಡು, ಇಲ್ಲಿ ನಿಮ್ಮ ಅಪ್ಪ ಅಮ್ಮನನ್ನು ನೋಡಿದ್ದಿಯೋ ? ನಿರಂಜನ:-ಇನ್ನೂ ಇಲ್ಲ. ಹೋಗುವಾಗ ನೋಡಿದರಾಯ್ದೆಂದು ಸುಮ್ಮನಿರುವೆನು. ನಭಾ:-ನೀನು ಹೊರಡುವುದಾವಾಗ? ನಿರಂಜನ:-ಈ ರಾತ್ರಿಯೇ ಹೊರಡುವೆನು. ನಭಾ:- ಅದೇಕೆ? ಎರಡುದಿನಗಳಿರಬಾರದೆ? ನಿರಂಜನ:-ನಾನು ಇಲ್ಲಿದ್ದು ಏನುತಾನೆ ಮಾಡಬಲ್ಲೆನು ? ನಭಾ! ಇದೇಕೆ, ನಿನ್ನ ಕೇಶವನ್ನು ಇಷ್ಟು ಬಿಗಿದು ಕಟ್ಟಿರುವೆ ? ಬಾಚಿಕೊಳ್ಳು ವುದೇ ಇಲ್ಲವೇನು? ಹೇಗೆಸಹಿಸುವೆ? ನಭೆಯು ಸ್ವಲ್ಪ ನಕ್ಕು " ನನ್ನ ಚಿರಸನ್ಯಾಸವ್ರತಧಾರಣೆಗೆ ಇದೇ ಪ್ರಥಮದೀಕ್ಷ, ಇದನ್ನೇ ನಾನು ನಿರ್ವಹಿಸಲು ಶಕ್ತಳಲ್ಲವಾದರೆ, ಮಿಕ್ಕ ವುಗಳನ್ನು ಸಹಿಸುವುದೆಂತು? ” ಎಂದಳು. ನಿರಂಜನ:- ಆವುದನ್ನಾ ದರೂ ತಡೆಯಬಹುದು, ತಲೆಯನ್ನು ಬಾಚಿಕೊಳ್ಳದಿದ್ದರೆ ತಲೆಯಲ್ಲಿ ಹೇನುಬರುವುಲ್ಲವೆ? ನಭಾ:-ಅಣ್ಣಾ ! ನಿಜ; ಏತರಿಂದ? ಎಣ್ಣೆ, ಪರಿಮಳ, ಉಷ್ಟೊದ ಕಾದಿಗಳಿಂದ ಹೇನು ಹುಟ್ಟುವುದು, ಶುದ್ಧೋದಕ ಸ್ಥಾನದಿಂದ ದುರ್ವಾ ಸನೆ, ದುಷ್ಟ ಕ್ರಿಮಿ ವಾಸನಾದಿಗಳು ನಾಶವಾಗಿ ಹೋಗುವುವು. ನಿರಂಜನ:-ನಭಾ ! ಹೇಗೇ ಆದರೂ ನಾನು ನಿನ್ನನ್ನು ನೋಡಿ ಸಂಕಟವನ್ನು ಸಹಿಸಲಾರೆನು; ನಮ್ಮ ತಂದೆಯಾದರೂ ತೊಂದರೆ ಕೊಡ ದಿರುವನೋ? ನಭಾ:- ಪಾಪ! ಆತನೇನೋ ಯಾವ ಮಾತನ್ನೂ ಆಡದೆ ಸುಮ್ಮ