ಪುಟ:ನಭಾ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

36 ಸತೀಹಿತೈಷಿ. ನಭೆಯು ಬೀದಿಯ ಬಾಗಿಲಿಗೆ ಹೋಗಿ ಕೂಗಿದಳು, ನಿರಂಜನನ ಕಿವಿಗೆ ಕೂಗು ಕೇಳಿಸಿದೊಡನೆಯೇ ಹಿಂದಿರುಗಿ ಬಂದು, ( ನಭಾ ! ಏನು?” ಎಂದನು, ನಭೆ ಅಮ್ಮನು ಕರೆಯುತ್ತಾಳೆ.” ಎಂದಳು. ನಿರಂಜನನು ಸಂತೋಷದಿಂದ ಮನೆಯೊಳಕ್ಕೆ ಪ್ರವೇಶಿಸಿದನು. ಶರಾವತಿಯು ಕೋಪದಿಂದಲೇ, ಕೊಡವನ್ನು ಹೊತ್ತಂತೆಯೇ ( ಅದೇನು, ಕಂಡರೂ ಕಾಣದಂತಹ ದ್ರೋಹ? ನಾನೇನು ಅಂತಹ ದ್ರೋಹವನ್ನು ಮಾಡಿರುವೆನು? ಈ ದ್ವೇಷವೇಕಪ್ಪ? ಮಾತನಾಡಿಸದೆ ಹೋಗುವಷ್ಟು ದುರಹಂಕಾರವೆ? » ನಿರಂಜನ:-ನೀನು ಬೇಕಾದುದನ್ನು ಹೇಳಬಹುದು, ನಿನ್ನ ಸ್ವಭಾ ವವು ನನಗೆ ತಿಳಿಯದೆ? ಈಗ ಕರೆಯಿಸಿದುದೇಕೆ? ಸುಮ್ಮನೆ ವ್ಯಾಜ್ಯ ತೆಗೆ ಯಲೊ? ಇಲ್ಲ-ಕೆಲಸವೇನಾದರೂ ಉಂಟೆ? ಶರಾವತಿ:-ನಿನಗೇನು, ತಲೆ ತಿರುಗುವುದೊ? ನನ್ನ ಸ್ವಭಾವವು. ನಿನಗೇನು ತಿಳಿದಿದೆಯೊ? ಏನು ತಲೆಯಲ್ಲಾ ಹರಟುವೆ? ನಿರಂಜನ:-ಅಮ್ಮಾ ! ತಪ್ಪಾಯಿತು, ಕ್ಷಮಿಸು. ಹೋಗಲಿ. ನನಗಾಗಿ ಎಷ್ಟು ಹೊತ್ತು ಕೊಡವನ್ನು ಹೊತ್ತುಕೊಂಡು ನಿಂತಿರುವೆ ? ಕೆಳಗಿಡಬಾರದೆ ? ಶರಾವತಿಯು ಹುಬ್ಬು ಗಂಟುಹಾಕಿಕೊಂಡು ಕಣ್ಣೀರನ್ನು ಸುರಿ ಸುತ್ತ, “ ಹೋಗು, ಹೋಗು, ನನ್ನ ಮುಂದಿನ ಹುಡುಗರೂ ನನ್ನನ್ನು ಅನ್ನು ವಂತಾದರು, ಅಯ್ಯೋ! ಹಣೆಯಬರಹ! ಏಕೆ ಬಂದಿದ್ದೆ?” ನಿರಂಜನ:- ಕೆಲವು ಮಂದಿ ಸ್ನೇಹಿತರೊಡನೆ ಶಾಲಾ ಕಾರ್ಯ ಗೌರವದಿಂದ ಬಂದಿದ್ದೆನು, ಹಾಗೆಯೇ ನಿಮ್ಮನ್ನೂ ಸಭೆಯನ್ನೂ ನೋಡಿ ಕೊಂಡು ಹೋಗಬೇಕೆಂದು ಇತ್ತ ಬಂದೆನು. ಶರಾವತಿ:-ನಮ್ಮನ್ನು ನೋಡಲೆಲ್ಲಿ ? ನಭೆಯನ್ನು ನೋಡಲೆನ್ನ ಬಾರದೆ ? ನಿರಂಜನ-ಹಾಗೆಯೇ ಆಗಲಿ! ಈಗ ನಿಮ್ಮಿಂದ ಆವ ಕಾರ್ಯವು ತಾನೇ ಆಗಬೇಕಾಗಿದೆ? ಅದಕ್ಕಾಗಿಯೇ ಹೋಗುತಿದ್ದೆ!