ಪುಟ:ನಭಾ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಭಾ. ಅವನ ಕೈಗೆ ಕೊಟ್ಟನು. ಅದನ್ನು ನೋಡಿದೊಡನೆಯೇ ನಿರಂಜನನ ಹಸ್ತಾಕ್ಷರವೆಂದು ಬೋಧೆಯಾಯಿತು, ಶಂಕರನು ನಭೆಯನ್ನು ಕರೆದು, (• ನಭಾ! ಈ ಪತ್ರವನ್ನು ಓದು; ನನಗೆ ಚೆನ್ನಾಗಿ ಕಾಣಿಸುವುದಿಲ್ಲ; ಇಲ್ಲ ವಾದರೆ, ಕನ್ನಡಕವನ್ನು ತೆಗೆದುಕೊಂಡು ಬಾ ! ” ಎಂದನು. ನಭೆ, ಓದಲುಪಕ್ರಮಿಸಿದಳು. ಅದು ಈ ರೀತಿ ಬರೆಯಲ್ಪಟ್ಟಿದ್ದಿತು. 44 ಪೂಜ್ಯತಮ ಜನಕ' ಮನೆಗೆ ಬಂದ ನಾನು ತಮ್ಮನ್ನು ನೋಡದೆ ಹೊರಟುದಕ್ಕೆ ಅನೇಕ ಕಾರಣಗಳಿವೆಯೆಂಬುದು ತಮಗೆ ತಿಳಿಯದ ಅಂಶವಲ್ಲ. ಆ ಕಾರಣಗಳನ್ನು ಇಲ್ಲಿ ತಿಳಿಸುವುದಕ್ಕಿಂತ ತಮ್ಮ ದರ್ಶನವಿಲ್ಲದೆ ಹೊರಟುದಕ್ಕಾಗಿ ಕ್ಷಮೆ ಬೇಡುವೆನು. ತಮ್ಮ ಬಳಿಯಲ್ಲಿ ನನ್ನ ಹೃದಯದ ಕೋಶಗಳನ್ನು ಹೊರಪಡಿಸಿ ಅವಿಧೇಯತೆಯನ್ನೂ, ಹಿಂದಿನ ವಿಚಾರಗಳ ದೆಸೆಯಿಂದ ತಾಯಿಯ ವಿಷ ಯದಲ್ಲಿ ನನಗಿರುವ ಅಸಂತುಷ್ಟಿಯನ್ನೂ ತೋರ್ಪಡಿಸಿಕೊಳ್ಳಲು ಇಷ್ಟವಿಲ್ಲ ವಾದುದರಿಂದ ನೋಡಲಿಲ್ಲ. ಪ್ರಿಯಜನಕ ತಾವು ನನಗೆ ಚಿರಸ್ಮರಣೀಯರು; ವಂದನೀಯರು; ಪರದೇವತಾ ಸ್ವರೂಪರು, ಈ ವಿಷಯದಲ್ಲಿ ನಾನು ತಮಗೆ ಸ್ವಲ್ಪವಾ ದರೂ ಅವಿಧೇಯನಾಗಿರುವೆನೆಂದು ಭಾವಿಸಬಾರದು, ಮನಸ್ಸಿನಲ್ಲಿ ನಾಟಿರುವ ಕ್ಷೇಶವನ್ನು ತೊಲಗಿಸಿಕೊಳ್ಳಲು ಪ್ರಯತ್ನ ಪಡುತ್ತಿರುವೆನು. ಪ್ರಯತ್ನ ಸಾಫಲ್ಯವಾಗುವವರೆಗೂ ತಮ್ಮ ಸಮ್ಮುಖದಲ್ಲಿ ಬಂದು ನಿಲ್ಲ ಲಾರದಿರುವೆನು. ಪೂಜ್ಯ ತಮ! ಧರ್ಮ, ದಯಾ, ದ್ರಾಕ್ಷಿಣಾದಿಗಳನ್ನು ತೊರೆದು ಲೋಕಾಪವಾದ ಭೀತಿಯನ್ನು ಳಿದು, ಹೀಗೆ ಸ್ವರೂಪನಾಶಕಾರಿಗಳಾದ ತೃಷ್ಣಾ ಲೋಭಗಳೆಂಬ ಕೂರಪಿಶಾಚಿಗಳ ಕ್ಷುದ್ರಪಾಶಕೊಳಗಾಗಿ, ವಿಚಾರವಿಮರ್ಶೆಯಿಲ್ಲದೆ, ತಾವು ಅಧೀರರಾಗಿರುವುದಕ್ಕಾಗಿ ವಿಪಾದಿಸು ವೆನು. ಆದರೆ, ಮಾಡತಕ್ಕುದೇನು ? ಹೀಗೆ ಉದ್ವಿಗ್ರತೆಯಿಂದ ಮರಾದೆ ಮಿಾರಿ ಬರೆದಿರುವೆನೆಂದು ಆಗ್ರಹಿಸಿ ಶಪಿಸದೆ, ಕ್ಷಮಿಸಲು ಬೇಡುವೆನು.