ಪುಟ:ನಭಾ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಭಾ. 43. ಯಲ್ಲ.” ಎಂದಳು. ಹಾಗೆಯೇ.. ಅಳುತಲೇ ಕಾಗದವನ್ನು ಬರೆದು ಮುಗಿಯಿಸಿ, ನಭೆಯ ಕೈಗೆ ಕೊಟ್ಟ ಓದುವಂತೆ ಹೇಳಿದನು. ನಭೆಯು ಓದಿದಳು ಚಿರಂಜೀವಿ ನಿರಂಜನನಿಗೆ ವೇದೋಕ್ತ ಆಶೀರ್ವಾದಗಳು. - ನಿರಂಜನ! ನಿನ್ನ ಪತ್ರವು ಈಗತಾನೆ ಕೈಸೇರಿದೆ. ನಿನ್ನ ಸಂಕಲ್ಪವೂ. ಇಲ್ಲಿಯ ವಿದ್ಯಮಾನಗಳೂ ನನಗೆ ತಿಳಿಯದೇಇದೆ, ನನ್ನ ಹೃದಯದಲ್ಲಿ ಈಗ ಇರುವ ಸ್ಥಿತಿಯನ್ನು ವರ್ಣಿಸಲು ಕೇವಲ ಅಶಕ್ತನಾಗಿರುವೆನು. ನಿನ್ನ ಕಾಗದಕ್ಕೆ ಏನು ಉತ್ತರವನ್ನು ಬರೆಯಬೇಕೊ ತಿಳಿಯದವನಾಗಿರು ವೆನು, ಆದರೆ, ಇಹದಲ್ಲಿ ಪುತ್ರಸುಖವನ್ನು ನಾನೂ ಪಿತ್ರಸುಖವನ್ನು ನೀನೂ ತಿಳಿಯಲಸಮರ್ಥರಾಗಿರುವೆವು. ಮತ್ತೇನು ಬರೆಯಲಿ? ಭಗವಂತನೇ ನಿನಗೆ ಶರಣನಾದುದರಿಂದ ಅವನೇ ನಿನ್ನನ್ನು ಕುಲವರ್ಧನನ, ಯಶಸ್ವಿಯ, ಧರ್ಮರತನೂ, ಚಿರ ಜೀವಿಯ ಆಗಿರುವಂತೆ ಮಾಡಲೆಂದು ಅವನನ್ನೇ ಅನನ್ಯಭಾವದಿಂದ ಪ್ರಾರ್ಥಿಸುತಿರುವೆನು.' ಇಂತು ಆಶೀಲ್ಡದಿಸುವ, ನಿನ್ನ ಜನಕ ಶಂಕರನಾಥ” ನಭೆಯು ಶಂಕರನಾಥನ ಇಷ್ಟಾನಾಸವಾಗಿ ಪತ್ರವನ್ನು ಮಡಿಸಿ, ನಿಯೋಗಿಯ ಕೈಯಲ್ಲಿಟ್ಟ, ನಿರಂಜನನಿಗೇ ಕೊಡುವಂತೆ ಹೇಳಿದಳು; ನೃತ್ಯನು ಆಶ್ವರಚಕಿತನಾಗಿ ಹೊರಟುಹೋದನು. - ಸಹೃದಯರೆ ! ಶಂಕರನಾಥ ಶರಾವತಿಯರ ಗುಣಗಳ ವಿಚಾರ ವಿಮರ್ಶೆಯು ನಿಮ್ಮ ಹೃದಯದಲ್ಲಿ ನಡೆಯುತಲಿರಬಹುದಲ್ಲವೆ? ನಿಮ್ಮಲ್ಲಿ ಅನೃತವಾಡಲು ನಮಗಿಷ್ಟವಿಲ್ಲ. ಇದ್ದ ಸ್ಥಿತಿಗಳನ್ನು ಸಹಜವಾಗಿಯೇ ನಿಮ್ಮ ಮುಂದೆ ಇಟ್ಟಿರುವೆವು, ಅನ್ಯವಿಧವಾದ ಭಾವನೆಗೆ ಅವಕಾಶವಿಲ್ಲ ದಿದ್ದರೆ, ಒಳ್ಳೆಯದಲ್ಲವೆ ? ಅಲ್ಲಿ ಗಲ್ಲಿ ಗೆ ಕಾಣಿಸುತ್ತಿರುವ ಶರಾವತಿಯರಂ `ತಹ ಹೆಂಗಸರನ್ನು ನೀವು ಹುಟ್ಟಿದಂದಿನಿಂದ ನೋಡಿಯೇ ಇಲ್ಲದಿದ್ದರೆ, ಅದು ನಮ್ಮ ಲೇಖನಿಯದಾಗಲೀ ನಮ್ಮದಾಗಲೇ ದೋಷವಲ್ಲ. ಅದು ನಿಮ್ಮ ಅನುಭವದ ದೋಷ.