ಪುಟ:ನಭಾ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸತೀ ಹಿತೈರ್ಷಿಣಿ. ಷ ಷ ಪ ರಿಚ್ಛೇ ದ. .ಟೀ ( ಮಾತ್ಸರ್ಯ ಸಾಮ್ರಾಜ್ಯ ) ಆರುಮಂದಿ ಶತ್ರುಗಳಲ್ಲಿ ಮಾತ್ಸರ್ಯ ಮೂರ್ತಿಯ ಶಕ್ತಿಯು ಅನ್ಯಾದೃಶವಾದುದು, ಮಾತ್ಸರ್ಯ ಮಹಾರಾಯನ ವೀರಾವೇಶವನ್ನು ಹೊಂದಿದ ಮಹನೀಯರು ಸ್ವ ಸುಖವನ್ನು ನಾಶಮಾಡಿಕೊಳ್ಳುವರಲ್ಲದೆ, ಪ್ರಪಂಚವನ್ನೂ ಹಾಳು ಮಾಡಬೇಕೆಂದು ಬಹುವಾಗಿ ಪ್ರಯತ್ನಿ ಸುವರು. ಮಾತ್ಸರ್ಯಮಹಾಪುರುಷನು ಹೃದಯದಲ್ಲಿ ಪ್ರವೇಶಿಸಿ, ಅಲ್ಲೇ ಬೆಳೆದು ಪ್ರಬಲಿಸಿ ಹೃದಯಕೋಶವನ್ನು ಒಡೆದು, ದೇಹವನ್ನೇ ನಾಶಮಾಡ ೪೦ ಜನು.

  • ಪ್ರಾಯಃ, ನಮ್ಮ ಭಾರತವರ್ಷದ ಸ್ತ್ರೀಮಂಡಳಿಯಲ್ಲಿ ಮಾತ್ಸರ್ಯ ಠಾಯನ ವಿಲಾಸವು ಅಧಿಕವಾಗಿರುವುದರಿಂದಲೇ ಮಾತೃಭೂಮಿಯ ಇಂತಹ ಶೋಚನೀಯ ಸ್ಥಿತಿಯನ್ನು ಹೊಂದಿದೆಯೆನ್ನ ಬಹುದು. ಆ ದುಷ್ಟನನ್ನು ಜಯಿಸಿ, ಕೆಳಗೆಹಾಕಿ ತುಳದಿರುವ ಸ್ತ್ರೀಯರು ಬಹು ವಿರಳ ರೆನ್ನಬಹುದು. ಆ ದುಷನ ಸಹವಾಸವು ಜನಾಂಗಕ್ಕೆ ಅತಿಯಾಗಿರು ವುದರಿಂದಲೇ “ ನಾರೀ ಪ್ರತ್ಯಕ್ಷ ರಾಕ್ಷಸಿ ” ಇತ್ಯಾದಿ ವಚನಗಳು ರೂಢಿಗೆ ಬಂದವೆನ್ನ ಬೇಕಾದೀತು. ಹೇಗಾದರೂ ಆಗಲಿ!! ಆ ನೀಚನ ಸ್ನೇಹವನ್ನು ಬೆಳೆಯಿಸಿರುವ ಸ್ತ್ರೀಯರಾಗಲೀ, ಪುರುಷರಾಗಲೀ ರಾಕ್ಷಸ

ಸ್ವಭಾವದವರೆಂದು ಹೇಳಲು ಅಡ್ಡಿಯಿಲ್ಲ. ಪ್ರಕೃತ, ನಮ್ಮ ಶರಾವತಿಗೆ ನಾವು 1 ಆಭಿನವಶೂರ್ಪನಖಾ ” ಎಂಬ ಬಿರುದನ್ನು ಬಹ:ಖೇದದಿಂದ ಕೊಡುವೆವು, ಅವಳು ಸಂಕುಚಿತ ಹೃದಯಕೋಶದಲ್ಲಡಗಿದ ಮಾತ್ಸರ್ಯ-ಕ್ರೋಧ ಮಹಾಪುರುಷರು ಬೆಳೆದು ಹೃಶವನೊ ಡೆದು ಹೊರಹೊಮ್ಮಿದರು. ಅಜೇಯರೆಂದೆ ನಿಸಿಕೊಂಡಿರುವ ಅವರನ್ನು ಚಿಂತಿಸಲಾರದ ಶರಾವತಿಯು ಸಂಪೂರ್ಣ ವಾಗಿ ಅವರ ವಶವಾದಳು. ”