ಪುಟ:ನಭಾ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಟ ವುದೇ ತಕ್ಕ ಪ್ರಾಯಶ್ಚಿತ್ತ, ಇಂದೇ ಸಾಯಲಿ! ಸತ್ತರೆ ಎಲ್ಲರಿಗೂ ಅನ್ನು ಕೊಲ! ನೀನೇ ಎಂದು ನನ್ನನ್ನು ಕೇಳುವರಿಲ್ಲದಂತಾಗುವುದು.”ಎಂಬಿ ಮೊದಲಾದುವೇ ಈ ಮೇಲೆ ಹೇಳಲ್ಪಟ್ಟ ಮೃದುಕರುಳಿನ ಮೃದುಲತೆಯಿಂ ದೊಗೆದಾ ಪುಷ್ಪನಿಚಯವಾದುದರಿಂದ ಶರಾವತಿಯ ಮನಸ್ಸೆ೦ತಹದಾ ಗಿದ್ದಿತೆಂಬುದನ್ನು ವಾಚಕರೇ ಊಹಿಸಿ ತಿಳಿದುಕೊಳ್ಳಲಿ! - ಇನ್ನು ಶಂಕರನಾಥನ ಪ್ರಕೃತಿಸ್ಥಿತಿಯನ್ನು ತಿಳಿದಿರುವ ವಾಚಕರಿಗೆ ನಾನೇನೂ ಹೇಳಬೇಕಾಗಿಲ್ಲ. ಅವನು ದೃಢಮನಸ್ಸು ಮಾಡಿ ನಭೆಯ ವಿಚಾರವಾಗಿ ಚಿದಾನಂದನಿಗೊಂದು ಕಾಗದವನ್ನು ಬರೆಯಲೇ?” ಎಂದು ಮೆಲ್ಲನೆ ರಾಣಿಯವರನ್ನು ಪ್ರಶ್ನೆ ಮಾಡಿದನು. ಶರಾವತಿಯು ಅತ್ಯಾಗ್ರಹದಿಂದ ಹೇಳಿದಳು:- * ನಿಮ್ಮ ಬುದ್ದಿಗೆ ಹಳಬೇಕು! ಅವನು ಬಂದರೆ,ಸುಮ್ಮನೆ ಹೋಗುವನೇನು? ಇಲ್ಲದೆ ಕಿತ್ತಾ ಟವನ್ನು ತಂದಿಟ್ಟು ಹುಡುಗಿಯನ್ನೂ ಕರೆದುಕೊಂಡು ಹೋಗುವನು; ಸ್ವತ್ತುಗಳನ್ನೂ ತೆಗೆದುಕೊಳ್ಳಲು ಪ್ರಯತ್ನ ಪಟ್ಟಾನು! ಕರ್ಮಾ೦ತರಗಳ ನ್ನು ನಾವು ಮಾಡಿರುವುದರಿಂದ ಅವನಿಗೆ ಅಧಿಕಾರವಿಲ್ಲವೆಂದರೂ ಅನ್ನ ಬಹುದು, ಆದರೂ ಇಲ್ಲದ ನಷ್ಟ ಕಷ್ಟ ನಿಷ್ಠರಗಳಿಗೆ ಒಳಗಾಗಲು ಗ್ರಹ ಚಾರವೇನು? ಸುಮ್ಮನಿರಲಾಗುವದಿಲ್ಲವೋ? ಶಂಕರ:- ಆದರೆ, ಹುಡುಗಿಯು ಅನ್ಯಾಯವಾಗಿ ಸಾಯುವಳಲ್ಲ! ತಿಳಿಸದಿರುವುದರಿಂದ ಆಕ್ಷೇಪವುಂಟಾದೀತಲ್ಲವೇ? ಶರಾವತಿ:- ರಂಡೆ, ಸಾಯುವುದರಲ್ಲಿ ನ್ಯಾಯವೇನು? ಅನ್ಯಾಯ ವೇನು? ಸತ್ತರೆ, ಲೋಕವೇ ಮುಳುಗಿ ಹೋಗುವುದೋ? ಆಕ್ಷೇಪವಾ ರದು? ಶಂಕರ:- ನಮಗೆ ಅಪವಾದವು ತಪ್ಪದಷ್ಟೆ? ಶರಾವತಿ: ~ ಅಪವಾದವನ್ನು ಹೊರಿಸುವರ ನಾಲಿಗೆಯು ಸೇದಿ ಹೋಗಲಿ! ನಿಂದಿಸುವರು ಹಣಕೊಡುವರೇನು? ಶಂಕರನಾಥನು ನಿಟ್ಟುಸಿರನ್ನು ಬಿಡುತ್ತೆ ಸುಮ್ಮನೆ ಕುಳಿತನು. ಶರಾವತಿಯು « ಎಚ್ಚರಿಕೆ ! ಎಚ್ಚರಿಕೆ!! ಅವನಿಗಾಗಲೀ ಆ ನಿಮ್ಮ