ಪುಟ:ನಭಾ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಭಾ 51 ಚಿದಾನಂದ:- ಸರಿಯಾಗಿಯೇ ಇದೆ. ನಭೆಯೆಲ್ಲಿ? ಬದುಕಿರು ವಳೊ, ಸತ್ತಳೊ?. ಶಂಕರ:- ಇದೇಕೆ ಹೀಗೆ ಕೇಳುವೆ? ಚಿದಾನಂದ:- ಮತ್ತೇನೂ ಇಲ್ಲ. ಅವಳ ಮುಖವನ್ನಾದರೂ ನೋಡುವ ಭಾಗ್ಯವಿದೆಯೋ, ಇಲ್ಲವೋ, ಯಾರುಬಲ್ಲರು? ಶಂಕರ:- ಇದೇಕೆ ಹೀಗೆ ಮಾತನಾಡುವೆ? ಚಿದಾನಂದ: -- ನಾನು ಬರೆದ ಒಂದು ಕಾಗದವಾದರೂ ನಿಮಗೆ ಮುಟ್ಟಲಿಲ್ಲವೋ? ಒಂದಕ್ಕಾದರೂ ಏಕೆ ಉತ್ತರವಿಲ್ಲ? ಮನಿಯಾರ್ಡರನ್ನು ತೆಗೆದುಕೊಂಡುದಕ್ಕೂ ಉತ್ತರ ಬೇಡವೆ? ಅದೂಹೋಗಲಿ; ಹುಡುಗಿಯ ಸಾಯುವಂತಾಗಿದ್ದರೂ ವರ್ತಮಾನಕೊಡಬೇಡವೆ? ಹೆಣ್ಣು ಮಕ್ಕಳೇನು. ಬೀದಿಯಲ್ಲಿ ಬಿದ್ದಿರುವರೆ? ಗಂಡಸತ್ಯ ಮಾತ್ರಕ್ಕೆ ಅವರೇನು, ಮನುಷ್ಯಜಾ ತಿಯನ್ನು ಬಿಟ್ಟಂತೆಯೇ?ಅಂತವರಲ್ಲಿರುವ ಸದ್ದುಣಗಳು ಹೋಗುವುದೇ? ಅವರಲ್ಲಿ ಜೀವಾತ್ಮನಾದರೂ ಇಲ್ಲವೆ? ಅವರ ವಿಷಯದಲ್ಲಿ ಇಷ್ಟು ಬೇಸಿ ರವು ಸರಿಯಲ್ಲ, ಶಂಕರ:- ಅಪ್ಪಾ! ನಾನೇನು ಮಾಡಲಿ? ನನ್ನ ಸ್ವಭಾವವ ನಿನಗೆ ತಿಳಿದುದೇ ಆಗಿದೆ. ಶರಾವತಿ:- ಅವರು ಬರೆಯದಿದ್ದರೇನು? ನಿಮಗೆ ಈಗ ತಿಳಿಯಲಿ ಲ್ಲವೆ? ನೀವು ಬರಲಿಲ್ಲವೆ? ಅವರನ್ನೆ ಕೆ ನಿಂದಿಸುವುದು? ಚಿದಾನಂದನಿಗೆ ಕೋಪವು ಮಿತಿಮೀರಿತು. ಉತ್ತೇಜಕಸ್ವರದಿಂದ 4: ಅಹುದು, ನಿಮ್ಮನ್ನೇಕೆ ನಿಂದಿಸಬೇಕು?” ನೀವು ತಿಳಿಸದಿದ್ದ ಮಾತ್ರಕ್ಕೆ ಪ್ರಪಂಚವೇ ಪಾಳೆ? ನೀವೇನು ಮಾಡ್ತೀರಿ? ನಿಮಗೆ ತಟ್ಟಿರುವ ಧನಪಿಶಾ ಚಿಯ ಮಹಾತ್ಮಯು ಅಂತಹುದು; ಆ ನಿರ್ಭಾಗ್ಯಳ ಹಣೆಯಬರಹವು ಅಂತಹುದು! ನಾನು ಈಗ ಇಲ್ಲಿಗೆ ವ್ಯಾಜ್ಯ ವನ್ನು ಹೂಡಲು ಬಂದವನಲ್ಲ! ಸಭೆಯಲ್ಲಿ ಮಲಗಿರುವಳೋ ತೋರಿಸಿರಿ. ಶರಾವತಿ:- ತೋರಿಸದೆ ಓಡಿಹೋಗುವೆವೇನು? ಸ್ವಲ್ಪ ವಿಶ್ರಮಿಸಿ ಕೊಳ್ಳಬಾರದೆ?