ಪುಟ:ನಭಾ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

52 ಸತೀಹಿತೈಷಿಣೀ ಚಿದಾನಂದ:- ಅತ್ತಿಗೆ ನಿಮ್ಮ ಯುಕ್ತಿಗಳೆಲ್ಲವನ್ನೂ ನಾನು ಬಲ್ಲೆನು, ನಾನು ಇಲ್ಲಿಗೆ ನೀವು ಊಹಿಸಿರುವಂತೆ ಹಣಕಾಸುಗಳಿಗಾಗಿ ಬಂದವನಲ್ಲ; ನನಗವು ಬೇಡವೂಬೇಡ, ನಭೆಯೆಲ್ಲಿ ? ಶರಾವತಿ:- ಇದೇಕೆ? ನೀವು ಹೊರಗಿನವರಂತೆ ಮಾತನಾಡುವಿರಿ? ಚೆನ್ನಾ ಯ್ತು, ನೀವೇನು ಮಾಡ್ತೀರಿ? ನಮ್ಮ ಗ್ರಹಚಾರ !! ಚಿದಾನಂದ:~ ಅತ್ತಿಗೆಯವರೆ ! ನನ್ನನ್ನು ವೃಥಾ ಸಿಹಿ, ಗುವಂತೆ ಮಾಡಬೇಡಿರಿ, ನಾನು ವಿಚಾರಹೀನನಾದ ಮಾನವನಲ್ಲ. ಎಲ್ಲವೂ ತಮ್ಮ ಗ್ರಹಚಾರವೇಆಗಲಿ; ಈಗ ನಭೆಯೆಲ್ಲಿ ? ಶರಾವತಿಯು ಮತ್ತೆ ಅದೇ ಮಾತನಾಡಲು ಪ್ರಯತ್ನ ಪಟ್ಟಳು. ಚಿದಾನಂದಸು ಜಿಗುಪ್ಪೆಯಿ೦ದ ಅಣ್ಮನಕಡೆಗೆ ತಿರುಗಿ ( ಆಣಾ ! ಇದೇನು ರಗಳೆ ? ನಭೆಯಿರುವಳೋ ? ಸತ್ಯಳೊ ? ಇದ್ದರೆ, ಏಲ್ಲ ? ಮೊದಲು ಹೇಳು.” ಎಂದನು. ಶಂಕರನು ನಿಟ್ಟುಸಿರು ಬಿಡುತ್ತೆ “ ಅಪ್ಪಾ ! ನನ್ನ ಅದೃಷ್ಟವೇ ಅಂತ ಹುದು ? ಬುದ್ಧಿಯಿಲ್ಲದೆ ಕೆಲಸಮಾಡಿದುದಕ್ಕೆ ಅನುಭವಿಸುವೆನು, ನಭೆಯು ಹಿತ್ತಲಕೋಣೆಯಲ್ಲಿ ಮಲಗಿರುವಳು.” ಎಂದನು. ಇಲ್ಲಿ ನಾವು ಶಂಕರನಾಥನ ಗೃಹದ ಪರಿಚಯವನ್ನು ಪಾಠಕರಿಗೆ ಉಂಟುಮಾಡಿಕೊಡದಿದ್ದರೆ ದೈಹಿಗಳಾಗಬಹುದು, ವಿಶಾಲವಾದಮನೆ; ಆದರೂ, ಮಹಡಿಯದಲ್ಲ, ಮಧ್ಯದಲ್ಲಿ ಅಂಗಳ, ಅಂಗಳಕ್ಕೆ ಪೂರ್ವ ಪಶ್ಚಿ ಮಗಳಲ್ಲಿ ಪಡಸಾಲೆ, ಪಶ್ಚಿಮಕ್ಕೆ, ಪಡಸಾಲೆಯ ಹಿಂದೆಯೇ ಅಡುಗೆಯ ಮನೆ, ಅದರ ಮಗ್ಗುಲಿನಲ್ಲಿ ಯೇ ಬಚ್ಚಲಮನೆ, ಮುಂಭಾಗದ ಪೂರ್ವ ಪಡಸಾಲೆಯ ಮುಂದೆ ನಡುವೆ ನಡುವೆಗೆ ಸೇರಿದಂತಯೇ ಬೀದಿಯ ಬಾಗಿಲು, ಅಂಗಳದ ಉತ್ತರ ದಕ್ಷಿಣಗಳಿಗೂ ಒಂದೊಂದು ಕಿರು ಮನೆಯಿ ದ್ದು ವ, ಹಿಂದೆ ವಿಶಾಲವಾದ ಹಿತ್ತಿಲು, ಹಿತ್ತಲಲ್ಲಿ ಬಲಭಾಗದ ಅಂತ್ಯದಲ್ಲಿ ಮಲಮೂತ್ರವಿಸರ್ಜನಾದಿಗಳಿಗೆ ಸ್ಪಳ, ಅದರ ಮಗ್ಗಲಿನಲ್ಲೊಂದು ಚಿಕ್ಕಮನೆ ಅದು ಸೌದೆ ಬೆರಣಿಗಳನ್ನಿಡಲು ಏರ್ಪಡಿಸಿದಸ್ಥಳ.