ಪುಟ:ನಭಾ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

56 ( ಸತೀಹಿತೈಷಿಣೀ ಗಳನ್ನೂ ತೆಗೆದುಕೊಟ್ಟನು, ಅವನ್ನು ತಿಂದಳಿಕ ಸಭೆಯು ಚೇತರಿಸಿ ಕೊಂಡು ಹಾಸುಗೆಯನ್ನು ಬಿಟ್ಟು ಸ್ವಲ್ಪ ದೂರದಲ್ಲಿ ಕುಳಿತಳು. ಚಿದಾನಂದನು ಸಂತೋಷ ಪಟ್ಟು ರೋಗದ ಕಾರಣವನ್ನು ಆಮ ಲಾಗ್ರವಾಗಿ ತಿಳಿಯಲು ತನ್ನಲ್ಲಿಯೇ ವಿಮರ್ಶೆ ಮಾಡುತ್ತ ಕ್ಷಣಹೊತ್ತು ಸುಮ್ಮನೆ ಕುಳಿತನು. ನಭೆ ನಿಂತಿದ್ದ ಶರಾವತಿಯನ್ನು ನೋಡಿ : ಅಮ್ಮಾ ! ಇನ್ನೂ ನಿಂತೇ ಇರುವೆಯಲ್ಲ, ಕುಳಿತುಕೊಳ್ಳಬಾರದೆ? " ಎ೦ದಳು. ಶರಾವತಿ:-ಸಾಕಮ್ಮಾ ಸಾಕು; ನಿಮ್ಮ ಮರುಕವ ಎಲ್ಲರಿಗೂ ತಿಳಿದೇ ಇದೆ. ನಾನು ಕೊಡಲುಬಂದ ಹಾಲು, ಗಂಜಿ, ಔಷಧಿಗಳೆಲ್ಲ ವಿಷ, ನಿಮ್ಮ ಚಿಕ್ಕಪ್ಪನು ಕೊಟ್ಟುದು ಮಾತ್ರ ಅಮೃತ, ಅಲ್ಲವೆ ? ನಭಾ: - ಅಮ್ಮಾ ! ಅನ್ಯಾಯವನ್ನಾ ಡಬೇಡ, ನಾನು ಮಲಗಿ ದಂದಿನಿಂದ ಒಮ್ಮೆಯಾದರೂ ಈ ಕಿರುಮನೆಯೊಳಕ್ಕಾದರೂ ಪ್ರವೇಶಿ ಸಿರುವೆಯಾ ? ಈವರೆಗೆ, ನಿನ್ನ ಮಾತನ್ನು ನಾನೆಂದು ವಿಾರಿರುವೆನು? ಶರಾವತಿ:-ಹೇಗಾದರೂ ಆಗಲಿ, ಈಗ ಬದುಕಿಕೊಂಡೆಯಲ್ಲ! ಇನ್ನು ಪ್ರಪಂಚವನ್ನು ಉದ್ಧಾರಮಾಡು. ಶಂಕರನಾಥನ ಈಗಿನ ಸ್ಥಿತಿಯನ್ನು ಹೇಳಲಳವಲ್ಲ ಅವನು ಶರಾ ವತಿಯ ಮುಖವನ್ನು ಒಮ್ಮೆ ದುರುದುರನೆ ನೋಡಿದನು. ಚಿದಾನಂದನು ( ಅಣ್ಣಾ ! ಈಗ ನೋಡಿ ಫಲವೇನು ? ಸಸಿಯಲ್ಲಿ ಬಗ್ಗದುದು ಮರದಲ್ಲಿ ಬಗ್ಗಿತೇ? ಎಂಬಂತೆ ಆಗಿದೆ. ಕಾಲವು ಮೀರಿದೆ.” ಎಂದು ಅಲ್ಲಿಂದೆದ್ದು ಹೊರಗೆ ಹೋಗಿ, ಗಾಡಿಯವನನ್ನು ಒಳಗೆ ಕರೆದು, ಅವನ ಕೈಗೆ ಬುಟ್ಟಿ ಹಾಸುಗೆಗಳನ್ನು ಕೊಟ್ಟನು. 'ಶಂಕರನಾಥನು ಕುತೂಹಲದಿಂದ « ಏನು, ಇದೇನು ಪ್ರಯತ್ನ ??? ಎಂದನು. ಚಿದಾನಂದ:-ಮತ್ತೇನು, ಹೊರಡುವೆನು, ಕತ್ತಲೆಯಾಗುವುದು. ಶಂಕರ:-ನಾಳೆಯದಿನ ಹೊರಟರಾಗದೆ ? ಚಿದಾನಂದ:-ಇಲ್ಲಿ, ಏನು ಕೆಲಸ ? ಶಂಕರ:--ಹುಡುಗಿಯು ಸ್ವಲ್ಪ ಚೇತರಿಸಿಕೊಳ್ಳಲಿ.