ಪುಟ:ನಭಾ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

59 ಸತೀಹಿತ್ಯ ಷಿಣಿ ಶರಾವತಿ «ಹೊರಡಮ್ಮ, ಹೊರಡು; ಮನಸ್ಸು ಬಂದಂತ ಸುಖವಾ ಗಿರಮ್ಮ!” ಎಂದು ಪಡನಾಲೆಗೆ ಬಂದು • ಮನೆಗೆ ಹಿಡಿದಿದ್ದ ಶನಿ ತೊಲ ಗಿತು. ಗೃಹವು ಪವಿತ್ರವಾಯಿತು, ಹಾಳು ರಂಡೆ ಸಾಯಲಿ.” ಎಂದು ನೆಟ್ಟಗೆಮುರಿದಳು, ಭಳಿರೇ! ಮಾತ್ಸರ್ಯಮಹಾಪುರುಷ! ನೀನೇನು, “ ನಾನೇಧನ್ಯ! ಧನ್ಯ!! ” ಎಂದು ಧನ್ಯವಾದಗಳನ್ನು ಹೇಳಿಕೊಳ್ಳುತ್ರಿ ರುವೆಯೋ? ನಿಜ! ನಿಜ! ಸದ್ಯಕ್ಕೆ ನೀನೇ ಧನ್ಯ! ಭಾರತವರ್ಷದ ಇಂತಹ ಸ್ತ್ರೀಯರ ಹೃದಯದಲ್ಲಿ ವಾಸಸ್ಥಳವು ಇರುವವರೆಗೂ ನೀನೇ ಧನ್ಯ! ಧನ್ಯ!! ಆನಂತರ ?" ಸ ಪ ಮ ಪ ರಿ ಲೈ ದ. ( ಪಾತ್ರಾ ಪಾತ್ರ. ) | - - ನಭೆ ಶಾಮನಗರದ ತಹಸೀಲ್ದಾರ್ ಶ್ರೀಯುತ ಚಿದಾನಂದ ಮಹಾಶಯನ ಗೃಹವನ್ನು ಸೇರಿ ಇ೦ದಿಗೆ ಎರಡು ತಿಂಗಳಾಗಿರಬಹುದು. ಈಗ ಅವಳು ಮೊದಲಿನ ನಭೆಯಲ್ಲ; ಅವಳಾ ಕೃಶಾಂಗವು ಸುಸಂಸ್ಕೃತ ವಾದ ಮಣಿದರ್ಪಣದಂತೆ ಪ್ರಕಾಶವನ್ನು ಹೊಂದಿರುವುದು, ಶರಾವತಿ ಯ ಶರಘಾತವು ತಪ್ಪಿ ಸುಖವುಂಟಾಗುತಿರುವುದು, ಅವಳನ್ನು ಆವರಿಸಿದ್ದೆ ಚಿಂತಾಮೇಘವು ಗೃಹಿಣೀ ಕುಲಾದರ್ಶ ೪ಾದ ಚಿದಾನಂದನ ಪ್ರಿಯ ಪತ್ನಿ ರಮಾಮಣಿಯ ಆದರೋಪಚಾರವೆಂಬ ಮಾರುತನ ಆಘಾತದಿಂದ ಚದರಿ ಸಲ್ಪಟ್ಟು ಅವಳ ಆ ಹೃದಯವು ಸುನೀತಿ-ಸುಭಾಷಣೆಗಳೆಂಬ ಮಳೆಯಿಂದ ಶುಭ್ರವಾಗಿ ಅಲ್ಲಿ ಜ್ಞಾನಸೂರ್ಯನು ಪ್ರಕಾಶಮಾನನಾಗಿರುವನು. ವಿನೋದ ಪರಿಹಾ ಸಾದಿ ಪ್ರಾಪಂಚಿಕ ವಿಚಾರವನ್ನೆಲ್ಲ ತ್ಯಜಿಸಿದ್ದ ನಭೆ, ಈಗ ಚಿದಾನಂದ-ರಮಾಮಣಿಯರ ಸುಶಿಕ್ಷಣೆಯ ಪ್ರಭಾವದಿಂದ ದೃಢಮನಸ್ಟೈರ್ಯ, ಸಾಹಸ, ಸಂಕಲ್ಪ ಸಾಧನೆಗಳಲ್ಲಿ ಅದ್ವಿತೀಯಳೆನಿಸಿ ದ್ದಳು, ಈಗ ನಭೆಯ ಮುಖದಲ್ಲಿ ಚಿಂತೆ, ಶೋಕ, ಕಳವಳ, ಭಯಗಳ ಚಿಹ್ನೆಯಿಲ್ಲ; ಆಕಡೆ ಕ್ಷಮೆ, ಸತ್ಯ, ಸದಾಚಾರ, ಸಾಕ್ಷಾತ್ಕಾರಲಾಭಾ ಕಾ೦ಕ್ಷ, ಅಮೋಘತರಶಾ೦ತಿ-ಇತ್ಯಾದಿಗುಣಗಳ ಕುರುಹು ಇದ್ದುವು.