ಪುಟ:ನಭಾ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಭ 59 ನಭೆ, ರಮಾಮಣಿಯನ್ನು ಮಾತೆಯಂತೆ ಪ್ರೀತಿಸುವಳು. ರಮೆಯ ಹತ್ತು ಹನ್ನೆರಡು ವರ್ಷ ವಯಸ್ಸಿನ ಇಬ್ಬರು ಗಂಡುಮಕ್ಕಳನ್ನೂ ತಮ್ಮಂದಿ ರ೦ತೆ ಆದರಿಸುವಳು, ಚಿದಾನಂದ ರಮಾಮಣಿಯರು ತಮ್ಮ ಗತಿಸಿದ ಅನೇಕ ಹೆಣ್ಣು ಮಕ್ಕಳಿಗಾಗಿ ಚಿಂತಿಸಿಚಿ೦ತಿಸಿ, ಸಭೆಯನ್ನೆ ಮಗಳೆಂದು ಭಾವಿಸಿ ಪೋಷಿಸುತ್ತೆ ದುಃಖವನ್ನು ಮರೆತಿದ್ದರು, ರಮಾಮಣಿಯ ತಮ್ಮನಾದ ('ರಾಜಶೇಖರ” ನೆಂಬವನೊಬ್ಬನೂ ಇವರ ಗೃಹವನ್ನೇ ಸೇರಿ ಧ್ವನು, ಇವರು ನಾಲ್ಕಾರು ಮಂದಿ ಆಳುಕಾಳುಗಳಲ್ಲದೆ ಮತ್ತಾರೂ ಆ ಮನೆಯಲ್ಲಿ ಇರಲಿಲ್ಲ, - ರಮಾಮಣಿ, ನೋಡುವದಕ್ಕೆ ನವನಾಗರಿಕರಂತಿದ್ದ ರೂ, ಗುಣದಲ್ಲಿ ಆರ್ಯೆ! ಶ್ರೀನಂತಪುತ್ರಿಯ ನಾಗರಿಕ ಸಮಾಜಸುಧಾರಣೆಯಲ್ಲಿ ಸುಶಿ ಕ್ಷತೆಯ ಆರ್ಯ ಮಾರ್ಗದ ವಿದ್ಯಾಭ್ಯಾಸದಲ್ಲಿ ನಿರತೆಯೂ ಆಗಿದ್ದುದ ರಿಂದ ಗೃಹಕಾರ್ಯ ನಿರ್ವಾಹ, ಸ್ವಕರ್ತವ್ಯ ಪಾಲನಾಸಕ್ತಿ, ಸ್ತ್ರೀ ಸಾಮಾನ್ಯ. ಗುಣಾದರ್ಶ ವಾದ ಕೋಮಲತೆ, ಗಾಂಭೀರ್ಯಾದಿ ಸದ್ಗುಣಗಣವ ಇವ ಆ• ದೇವದುರ್ಲಭವಾದ ಹೃದಯದಲ್ಲಿ ನೆಲೆಗೊಂಡು ಇವಳ ಸೌಂದರ್ಯ ವನ್ನು ಮತ್ತೂ ಹೆಚ್ಚಿಸುವಂತಿದ್ದು . ಚಿದಾನಂದನು ಪತ್ನಿ ಗೆ ಅನುಗುಣಿಯಾದ ಪತಿ, ರೂಪ, ಗುಣ, ವಿದ್ಯೆ, ಕೌಶಲ್ಯ, ಔದಾರ್ಯ, ಸಾಹಸಾದಿಗಳಲ್ಲಿ ಅದ್ವಿತೀಯನಾದ ಇವ ನೇ ಸಜ್ಜನಾದರ್ಶ: ಉನ್ನತ ಪದವೀಧಾರಣೆಗೆ ಅತ್ಯಾವಶ್ಯವಾದ ಕಾರ್ಯ ದಕ್ಷತೆ, ನ್ಯಾಯೋಕ ಪಕ್ಷಪಾತ ಬುದ್ಧಿ, ಸ್ವಾಮಿಕಾರ್ಯ ನಿರ್ವಾಹಶಕ್ತಿ, ದೇಶ ವಾತ್ಸಲ್ಯ, ಭೂತದಯೆಯೇ ಇವನಲ್ಲಿ ಮೊದಲಾದ ಸದ್ಗುಣಗಳು ಮೂರ್ತಿಭವಿಸಿದ್ದುವು, ದೇಶೋನ್ನತಿಗೆ, ಭಾದೋನ್ನತಿಯ, ಭಾಷೆ ನೃತಿಗೆ ಮಹಿಳಾ ಸಮ್ಮೇಳನವೂ ಅದಕ್ಕಾಧಾರವಾದ ಸ್ತ್ರೀವಿದ್ಯಾಭ್ಯಾಸವೂ ಮುಖ್ಯವಾದುವೆಂಬ ದೃಢಾಭಿಪ್ರಾಯವು ಈತನ ಹೃತ್ಯೋಶದಲ್ಲಿ ಭದ್ರೀ ಕರಿಸಲ್ಪಟ್ಟಿದ್ದುದರಿಂದ ದೇಶೋದ್ಧಾರಕ್ಕೆ ಕಂಟಕಪ್ರಾಯವಾದ ಸ್ತ್ರೀಯರ ಮೌಧ್ಯಾದಿಗಳನ್ನು ತೊಲಗಿಸಿ, ಸ್ತ್ರೀಸದ್ವಿದ್ಯಾಭ್ಯಾಸವನ್ನು-ಅದರಲ್ಲಿ ಯ ವಿತಂತುಸೋದರಿಯರಿಗೆ ಬ್ರಹ್ಮಚರ್ಯಾ ದಿ ಸುಶಿಕ್ಷಣವನ್ನು ಕೊಡುವದು ಪ್ರೋತ್ಸಾಹಿಸುವುದರಲ್ಲಿ ಈತನಿಗಿದ್ದ ಆಸಕ್ತಿ ಅನಿರ್ವಚನೀಯವೇಸರಿ.