ಪುಟ:ನಭಾ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

80 ಸತೀಹಿತೈಷಿಣೀ ಕ್ಷೌರಮಾಡುವನು. ” ಎಂದು ಮೊದಲಾದ ವಿಷಯಗಳನ್ನು ಹೇಳುವುದು. ಹೊಸದಾಗಿ ಮದುವೆಯಾದ ಒಂದು ಹುಡುಗಿಯು ಈ ಪಾಠವನ್ನು ಶುಕ್ರ ವಾರ ರಾತ್ರಿಯವೇಳೆಯಲ್ಲಿ ಓದುತ್ತಿದ್ದರೆ, ಆ ಮನೆಯಲ್ಲಿಯೇ ಆ ಹುಡು ಗಿಯ ಅಜ್ಜಿಯೊಬ್ಬಳಿದ್ದರೆ, ಆ ಹುಡುಗಿಯಪಾಡುಕೇಳಬೇಕೆ? ಆ ಪಾಠ ದಿಂದೇನು ಫಲ? ಮುದುಕಿಯು ಈ ಪಾಠಪಠನವನ್ನು ಕೇಳಿದ ಮಾರನೆಯ ದಿನದಿಂದಲೇ ತನ್ನ ಮೊಮ್ಮಗಳನ್ನು ಪಾಠಶಾಲೆಗೆ ಕಳುಹುವುದಿಲ್ಲ. ಪಾಠದಫಲವ ಹೀಗಿರುವಲ್ಲಿ ಏನು ಹೇಳಬಹುದು? ಬಾಲಿಕೆಯರಿಗೆ ಇಂತಹ ಪಾಠದಿಂದ ಏನು ಪ್ರಯೋಜನ ? ಭಗ:- ಅಕ್ಕ! ನಿಮಗೆ ಪಾಕಶಾಸ್ತಾದಿ ಗೃಹಕಾರ್ಯಗಳನ್ನು ಕಲಿಸುವುದಿಲ್ಲವೆ. ನಭಾ:- ನಿಜ; ಕಲಿಸುವರು ಪುಸ್ತಕ ವಿದ್ಯೆಯು ಸದ್ಯಕ್ಕೆ ನಮಗೆ ಬೇಡ, ಅನ್ನ ಮಾಡುವುದು ಹೀಗೆ; ಹುಳಿಮಾಡುವುದು ಹಾಗೆ; ಲಾಡು ಕರಿವುದು ಆರೀತಿ; ಚಿರೋಟಿಮಾಡುವುದು ಈರೀತಿಯೆಂದು ಹೇಳು ವುದು ಬಲು ಸುಲಭ. ಒಲೆಯನೆಂದೆ ಕುಳಿತು ಹೊಗೆಯನ್ನು ಬಡಿಸಿ ಕೊಂಡು ಶಖೆಯಲ್ಲಿ ಕೆಲಸ ಮಾಡುವುದು ಕಷ್ಟ ! ಒಬ್ಬಳು ಪಾಕಶಾಸ್ಕಾ ನುಸಾರವಾಗಿ ಅನ್ನವನ್ನು ಮಾಡಿ ಕಯ್ಯಲ್ಲಿ ಬಟ್ಟೆ ಅಥವಾ ಎಲೆಯನ್ನಾ ದರೂ ಹಿಡಿದುಕೊಳ್ಳದೆ ಹಾಗೆಯೇ-ಪಾಕಶಾಸ್ತ್ರದಲ್ಲಿ ಆರೀತಿ ಮಾಡಬೇ ಕೆಂದು ಹೇಳದುದರಿಂದ-ಆ ಅನ್ನವಾಗಿದ್ದ ತಪ್ಪಲೆಯನ್ನು ಇಳಿಸಲು ಪ್ರ. ಯತ್ನಿಸಿ ಕೈಸುಟ್ಟುಕೊಂಡಳಂತ! ಇಂತಹ ಪಾಕಶಾಸ್ತ್ರಾಭ್ಯಾಸದಿಂದೇನು? ಪಾಠಶಾಲೆಯ ಸಂಗಡಲೇ ಮರೆಯುವ ವಿದ್ಯೆಯಾದ ಭೂಗೋಳ, ಚರಿತ್ರ. ಮೊದಲಾದುವುಗಳಿಂದೇನು ಪ್ರಯೋಜನ? ಅಭ್ಯಾಸಕ್ಕೆ ತಂದ ವಿದ್ಯೆಯು ಬೇಕು, ಸದ್ಗುಣವನ್ನು ಅಭ್ಯಾಸಿಸಬೇಕೆಂದು ಹೇಳುವ ಅಸದೃಶ ಸಾಮ ರ್ಥ್ಯವನ್ನು ಪಡೆದು ದುರ್ಗುಣದ ಮೊಟ್ಟೆಯಾಗಿರುವುದಕ್ಕಿಂತ ಒಂದು ಸದ್ಗುಣವನ್ನಾಚರಿಸಿದವನೇ ಪರಮ ಶ್ರೇಷ್ಠನೆಂದು ತಿಳಿದವರಾಡುವರು. ಪುರುಷರಲ್ಲಿ ಉದಾಸೀನ,ಅಸೂಯೆ, ಅವಿಚಾರಗಳು ಹೆಚ್ಚಿದರೆ, ಸ್ತ್ರೀಯರು ಧೂರ್ತಯರೂ, ದುರಾಗ್ರಹಿಗಳೂ ಆಗಿ ಪರಿಣಮಿಸುವುದರಲ್ಲಿ ಅಭ್ಯಂತರ ವಿಲ್ಲ. ಹಾಗೆಯೇ ಈ ಕನ್ನಡ ನಾಡಿನ ಕೃತಿಯ ಆಗಿದೆಯೆನ್ನ ಬಹುದು.