ಪುಟ:ನಭಾ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

82 ಸತೀಹಿತ್ಯ ಷಿಣೀ ಸುವರು. ಅವರು ಹಾಗೆ ಮಾಡದೆ ತಮ್ಮ ನಡತೆಗಾಗಿ ಅನುತಾ ಸಹೊ೦ದಿ, ಮುಂದೆಯಾದರೂ ನಡತೆಯನ್ನು ಸರಿಪಡಿಸಿಕೊಂಡರೆ, ಸರ್ಕಾರದವರ ಉದ್ದೇಶವೂ, ದೇಶಭಕ್ತರ ಮನೋರಥವೂ ಸಮ್ಮಿಳನವಾಗಿ ಸುಖವು ದೊರೆವುದರಲ್ಲಿ ಸಂಶಯವಿಲ್ಲ. ಭಗ:- ಅಕ್ಕ ! ಮನಸ್ಸಾಕ್ಷಿಗೆ ವಿರೋಧವಾಗಿ ಅವರು ನಡೆವರೆಂತು? ನಭಾ:-ಮಹನೀಯರು ಮನೋವಾಕ್ಕಾಯಗಳಲ್ಲಿ ಒಂದೇ ವಿಧ ವಾಗಿಯೂ, ನೀಚರು ಮನೋವಾಕ್ಕಾಯಗಳೊಂದೊಂದರಲ್ಲಿ ಒಂದೊಂ ದು ಬಗೆಯಾಗಿ ನಡೆವರು, ಅವರಿಗೆ ಹಿತಾಹಿತಗಳಾಗಲೀ, ಮನಸ್ಸಾ ೩ಗೆ ಸಮ್ಮತ ಅಥವಾ ಆಸಮ್ಮತವಾಗಿಯಾಗಲೀ ನಡೆಯಲು ಬುದ್ದಿಯಿರು ವುದಿಲ್ಲ. ಭಗ:-ರಾಮು ! ನೋಡಿದೆಯೋ ? ಸುಳ್ಳು ಹೇಳಬಾರದೆಂದು ನಾನು ಹೇಳಿರಲಿಲ್ಲವೆ ? - ರಮ:-- ಅಕ್ಕನ ಬುದ್ದಿಯನ್ನು ನೋಡಿದೆಯೋ ? ಅವಳಿಗೆ ತಿಳಿದ ಯಾವುದನ್ನೂ-ಎಷ್ಟೇ ಸಣ್ಣ ವಿಷಯವಾದರೂ-ವರೆಯದೆ ಜ್ಞಾಪಕವಿ ಟ್ಟುಕೊಂಡಿರುವಳು | ನಭಾ:- ನೀವೂ ಪ್ರಯತ್ನ ಪಟ್ಟರೆ ಅಸಾಧ್ಯವಾಗಲಾರದು. ಈಗ ಹೊತ್ತಾಯಿತು; ಮಲಗಿರಿ. ಭಗವಾನಂದ ರಮಾನಂದರು ಸಮಯ ನಿರೀಕ್ಷಣೆಯಲ್ಲಿದ್ದ ವಿಶ್ರಾಂ ತಿದೇವಿಯ ಮಾಯಾಪಾಶಕ್ಕೊಳಗಾಗಿ ಮೈಮರೆತು ಶಯ್ಯಯ ಮೇಲೆ ಮಲಗಿದರು. ನಭೆ, ಭಗವದ್ಗೀತೆಯನ್ನು ಕೈಯಲ್ಲಿ ಹಿಡಿದು ವಿರಾಮಾಸನ ( Easy-chair ) ದ ಮೇಲೆ ಕುಳಿತು, ಒಂದೆರಡು ಶ್ಲೋಕಾರ್ಥಗಳನ್ನು ಮಥಿಸಿದಳು; ಅಷ್ಟರಲ್ಲಿಯೇ ನಿದ್ರಾಂಗನೆಯ ಬಲವದ್ದಂಧನದಿಂದ ಕರ ದಲ್ಲಿದ್ದ ಪುಸ್ತಕವನ್ನು ಕರದಲ್ಲೆ ಹಿಡಿದು ಪರವಶಳಾದಳು.