ಪುಟ:ನಾಸ್ತಿಕ ಕೊಟ್ಟ ದೇವರು.pdf/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೧೫೨

ನಾಸ್ತಿಕ ಕೊಟ್ಟ ದೇವರು

ಗಾಡಿಯೂ ತಾಜಾ ಮಾಲು. ಪ್ರಯಾಣಿಕರು ಮಾತ್ರ ಹಳಬರೇ.
ಮುಖಗಳು ಬೇರೆ ಬೇರೆ. ಆದರೆ, ಒಟ್ಟಿನಲ್ಲಿ ಅವರೆಲ್ಲ ಒಂದೇ.
ಇಪ್ಪತ್ತು ವರ್ಷಗಳ ತನ್ನ ಒಟ್ಟು ಬದುಕಿನಲ್ಲಿ , ಅದರಲ್ಲೂ ತಿಳಿವಳಿಕೆ
ಮೂಡಿದ ಬಳಿಕ ತಾನು ಜೀವಿಸಿದ್ದ ಸುಮಾರು ಹದಿನೈದು ವರ್ಷಗಳ
ದೀರ್ಘ ಕಾಲ, ರಾಮನ್ ಗಾಗಿದ್ದ ಅನುಭವಗಳ ಮೊತ್ತ ಒಂದೇ ತತ್ತ್ವವನ್ನು
ಸಾರಿತ್ತು:
"ಜನ ಎಲ್ಲಿದ್ದರೂ ಒಂದೇ; ಒಟ್ಟಿನಲ್ಲಿ ಒಂದೇ."
ಘಂಟೆ. ನೀಳವಾಗಿ ಹೊರಟ ಶಿಳ್ಳು.
ಸದ್ದಿಲ್ಲದೆ ಗಾಡಿ ಚಲಿಸತೊಡಗಿತು.
ಹೃದಯದ ಹೊರೆ ಇಳಿದಂತಾಯಿತು ರಾಮನ್ ಗೆ. ನವದೆಹಲಿ
ಯನ್ನು ಬಿಟ್ಟು ಮುಂದಕ್ಕಿನ್ನು ಪ್ರಯಾಣ, ಮದರಾಸಿಗೆ. ಎತ್ತ ಹೋದರೂ
ಸರಿಯೆ, ಆ ಬಗೆಯ ಚಲನೆಯೇ ಅಪೂರ್ವವಾದ ಸುಖ ಅವನ ಪಾಲಿಗೆ .
ಗಾಡಿ ಚಲಿಸುತ್ತಿತ್ತು. ನಿಲ್ದಾಣವನ್ನು ಹಿಂದಿಕ್ಕಬೇಕು ಇನ್ನು .
"ಹಾ ! ಅಗೋ !"
ಸಹೋದ್ಯೋಗಿಗಳಲ್ಲಿ ಒಬ್ಬ ತೆಗೆದ ಉದ್ಗಾರ ಅದು.
ಎಲ್ಲರೂ ಕಿಟಕಿಯ ಗಾಜಿನಾಚೆಗೆ ದೃಷ್ಟಿ ಹರಿಸಿದರು.
ಪ್ಲಾಟ್ ಫಾರ್ಮಿನ ಮೇಲೆ ಅಲ್ಲಿ ಇಲ್ಲಿ ನಿಂತಿದ್ದ ಜನರ ಗುಂಪುಗಳನ್ನು
ಸೀಳಿ ಹಾದು, ಯುವಕನೊಬ್ಬ ಗಾಡಿಯ ಕಡೆಗೆ ಧಾವಿಸಿದ್ದ. ಕೈಯಲ್ಲೊಂದು
ಸೂಟ್ ಕೇಸ್ . ಗಾಡಿಯ ಕದಗಳೋ ಬಲು ದಪ್ಪ, ಬಲು ಭದ್ರ. ಹಿಡಿ
ಸಡಲಿದರೆ, ಅಡಿ ತಪ್ಪಿದರೆ, ಸಾವನ್ನು ಅಪ್ಪಿದಂತೆಯೇ.
ರಾಮನ್ ತಾನೂ ಉದ್ಗಾರವೆತ್ತಿದ:
"ಹಾ !"
ಬಾಗಿಲನ್ನು ತಳ್ಳಿದವನೆ ಮಗ್ಗುಲ ಡಬ್ಬಿಯೊಳಕ್ಕೆ ಬಂದೇ ಬಿಟ್ಟಿದ್ದ
ಗಟ್ಟಿಮುಟ್ಟಾದ ಆ ಮನುಷ್ಯ.
ಕೊಠಡಿಯ ಮ್ಯಾನೇಜರು ನುಡಿದ :
"ಚಾರ್ ಸೌಬೀಸೇ ಸರಿ. ಕೊಲೆಮಡಿಯೋ ಕಳವು ಮಾಡಿಯೋ
ಬಂದಿರಬೇಕು. ಹುಂ !"
ಓಡಾಡುತ್ತಿರುವ ಗಾಡಿಯನ್ನೇರುವುದು ಕಷ್ಟದ ಕೆಲಸ. ಅಪಾಯಕರ;